ಮಾನಸಿಕ ಸಮಸ್ಯೆಗಳ ಹೆಚ್ಚಳ ಅಸಡ್ಡೆ ಖಂಡಿತ ಬೇಡ
Team Udayavani, Jun 16, 2020, 5:53 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕಣ್ಣಿಗೆ ಕಾಣದ ವೈರಸ್‌ನಂತೆಯೇ, ಅದೃಶ್ಯ ಮಾನಸಿಕ ಸಮಸ್ಯೆಗಳೂ ಕೂಡ ಈ ವರ್ಷ ಇಡೀ ಜಗತ್ತನ್ನು ಕಾಡಲಾರಂಭಿಸಿವೆ.
ಅದರಲ್ಲೂ ಮಾನಸಿಕ ಸಮಸ್ಯೆಗಳ ವಿಚಾರದಲ್ಲಿ ಅಷ್ಟಾಗಿ ಗಮನಹರಿಸದ ಭಾರತದಲ್ಲಿ ಪರಿಸ್ಥಿತಿ ಉಲ್ಬಣಿಸುತ್ತಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಾಜ್‌ಪೂತ್ ಸಾವಿನ ನಂತರ ದೇಶಾದ್ಯಂತ, ಮಾನಸಿಕ ಸ್ವಾಸ್ಥ್ಯದ ಕುರಿತ ಚರ್ಚೆ ಹೆಚ್ಚಾಗಿದೆ. ಆದಾಗ್ಯೂ, ಅವರ ಸಾವಿಗೆ ನಿಖರ ಕಾರಣಗಳು ಇನ್ನೂ ಪತ್ತೆಯಾಗಿಲ್ಲವಾದರೂ, ಇಂಥದ್ದೊಂದು ಚರ್ಚೆಯನ್ನಂತೂ ಅದು ಹುಟ್ಟುಹಾಕಿದೆ.
ಲಾಕ್‌ಡೌನ್‌ನ ನಂತರದಿಂದ ದೇಶಾದ್ಯಂತ ಜನರಲ್ಲಿ ಖನ್ನತೆ, ದುಗುಡ, ಒಂಟಿತನದಂಥ ಸಮಸ್ಯೆಗಳು ಹೆಚ್ಚು ಬಾಧಿಸಲಾರಂಭಿಸಿವೆ. ಉದ್ಯೋಗ ಚಕ್ರ ಮುಂದೆ ಸಾಗುತ್ತಿಲ್ಲ. ರಾತ್ರೋರಾತ್ರಿ ನಿರುದ್ಯೋಗಿಗಳಾದವರ ಬೃಹತ್ ಸಂಖ್ಯೆ ಒಂದೆಡೆಯಾದರೆ, ಈಗಿನ್ನೂ ಉದ್ಯೋಗ ಪ್ರಪಂಚಕ್ಕೆ ಕಾಲಿಡಲಿದ್ದವರೂ ಮನೆಯಲ್ಲಿ ಖಾಲಿ ಕುಳಿತುಕೊಳ್ಳುವಂತಾಗಿದೆ. ವಿದ್ಯಾರ್ಥಿಗಳಿಂದ ಹಿಡಿದು, ನಿವೃತ್ತರವರೆಗೆ ಒಂದಲ್ಲ ಒಂದು ರೀತಿಯ ಮಾನಸಿಕ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.
ಇದರೊಟ್ಟಿಗೆ ಸೋಂಕಿತರಾಗುವ ಭಯ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಭವಿಷ್ಯದ ಬಗ್ಗೆ ಭಯ ಬಹುತೇಕರಲ್ಲಿ ಅಧಿಕವಾಗಿದೆ. ಇವೆಲ್ಲದರ ಪರಿಣಾಮವು ಮಾನಸಿಕ ಸಮಸ್ಯೆಗಳ ಹೆಚ್ಚಳದ ರೂಪದಲ್ಲಿ ಕಾಣಿಸಿಕೊಳ್ಳುತ್ತಿದೆ.
ದುರಂತವೆಂದರೆ, ದೇಶದಲ್ಲಿ ಒಂದು ಚಿಕ್ಕ ಜನ ಸಂಖ್ಯೆಯನ್ನು ಹೊರತುಪಡಿಸಿ ಬಹುತೇಕರು ಮಾನಸಿಕ ಸಮಸ್ಯೆಗಳನ್ನು ಕಡೆಗಣಿಸುವುದೇ ಅಧಿಕ. ಮನೋಚಿಕಿತ್ಸಾ ಕೇಂದ್ರಗಳನ್ನು- ಆಸ್ಪತ್ರೆಗಳನ್ನು ‘ಹುಚ್ಚಾಸ್ಪತ್ರೆ’ ಎಂದೇ ಅಣಕಿಸುವ ಮನಸ್ಥಿತಿ ವ್ಯಾಪಕವಾಗಿ ಇರುವಾಗ, ಮಾನಸಿಕ ಸಮಸ್ಯೆಗಳಿಗೆ ಪರಿಣಾಮಕಾರಿ ಸಮಾಧಾನ ಸಿಗುವುದು ಸಾಧ್ಯವೇ ಎನ್ನುವ ಪ್ರಶ್ನೆ ಎದುರಾಗುತ್ತದೆ. 2018ರಲ್ಲಿ ಪ್ರಕಟವಾದ ಗ್ಲೋಬಲ್ ಬರ್ಡನ್ ಆಫ್ ಡಿಸೀಸಸ್ ಸ್ಟಡೀಸ್ ಎಂಬ ಅಧ್ಯಯನ ವರದಿಯು ಭಾರತದಲ್ಲಿ ಪ್ರತಿ ವರ್ಷ 2.2 ಲಕ್ಷ ಜನ ವಿವಿಧ ಕಾರಣಗಳಿಗಾಗಿ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎನ್ನುತ್ತದೆ.
ಅದರಲ್ಲೂ, ಹೀಗೆ ಬದುಕನ್ನು ಹಠಾತ್ತನೆ ಕೊನೆಗೊಳಿಸಿಕೊಳ್ಳುವವರಲ್ಲಿ 15-39 ವರ್ಷದವರೇ ಅಧಿಕ ಸಂಖ್ಯೆಯಲ್ಲಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಅಂಕಿಅಂಶವು, ಭಾರತದಲ್ಲಿ ಪ್ರತಿ ಲಕ್ಷ ಜನರಲ್ಲಿ ಆತ್ಮಹತ್ಯೆ ಪ್ರಮಾಣ 16.5 ಪ್ರತಿಶತವಿದೆ ಎನ್ನುತ್ತದೆ. ಈ ಪ್ರಮಾಣ ಆಗ್ನೇಯ ಏಷ್ಯಾದಲ್ಲೇ ಅತ್ಯಧಿಕವಾದದ್ದು.
ಈ ವರ್ಷವಂತೂ ಜನರಲ್ಲಿ ಅಪಾರ ಪ್ರಮಾಣದ ಮಾನಸಿಕ ಒತಡ ಸೃಷ್ಟಿಯಾಗಿಬಿಟ್ಟಿದೆ. ಮಕ್ಕಳಿಂದ ಹಿಡಿದು ವೃದ್ಧರಾದಿಯಾಗಿ ಬಹುತೇಕರು ಒಂದಲ್ಲ ಒಂದು ಮಾನಸಿಕ ಸಮಸ್ಯೆಯಿಂದ ಬಳಲುವಂತಾಗಿದೆ.
ಆದರೆ, ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದ್ದೇ ಇರುತ್ತದೆ. ಮನಬಿಚ್ಚಿ ಮಾತನಾಡುವ ಮೂಲಕ, ಮನಸ್ಸಿನ ತಳಮಳಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳುವ ಮೂಲಕ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ.
ಮುಖ್ಯವಾಗಿ, ಒಂಟಿತನದ ಭಾವನೆ ಮನುಷ್ಯನನ್ನು ಹೆಚ್ಚು ಹೈರಾಣಾಗಿಸುತ್ತದೆ ಎನ್ನುತ್ತದೆ ಮನಶ್ಯಾಸ್ತ್ರ. ಈ ಕಾರಣಕ್ಕಾಗಿಯೇ, ಈ ಕ್ಲಿಷ್ಟ ಸಮಯದಲ್ಲಿ ನಾವು ಮನೆಯವರ ಹಾಗೂ ಸ್ವತಃ ನಮ್ಮ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕೆ ಆದ್ಯತೆ ಕೊಡೋಣ. ಮನಸ್ಸು ಖಿನ್ನತೆಯೆಡೆಗೆ ಜಾರುತ್ತಿದೆ ಎಂದೆನಿಸಿದರೆ ತಜ್ಞರ ಸಲಹೆ ಪಡೆಯಲು ಹಿಂಜರಿಯದಿರೋಣ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.