ಮತ್ತೆ ಪ್ರವಾಹವಾಗಿದೆ ತ್ಯಾಜ್ಯ ಮಿಶ್ರಿತ ನೀರು
ಪಚ್ಚನಾಡಿ ತ್ಯಾಜ್ಯ: ಮಂದಾರದಲ್ಲಿ ಆತಂಕ
Team Udayavani, Jun 16, 2020, 5:50 AM IST
ವಿಶೇಷ ವರದಿ- ಮಹಾನಗರ: ಕಳೆದ ಆಗಸ್ಟ್‌ನಲ್ಲಿ ಪಚ್ಚನಾಡಿ ತ್ಯಾಜ್ಯರಾಶಿ ಜರಿದು ಮಂದಾರ ಪ್ರದೇಶವನ್ನು ತ್ಯಾಜ್ಯಮಯವಾಗಿಸಿದ್ದ ಪ್ರದೇಶದಲ್ಲಿ ಈ ಬಾರಿ ಮತ್ತೆ ಮಳೆ ನೀರಿನೊಂದಿಗೆ ತ್ಯಾಜ್ಯ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.
ತ್ಯಾಜ್ಯ ಜರಿದು ಬಂದ ಭಾಗದ ಒಂದು ಕಡೆಯಲ್ಲಿ ಸೂಕ್ತ ತೋಡಿನ ವ್ಯವಸ್ಥೆ ಮಾಡಿದ್ದರೂ ತ್ಯಾಜ್ಯದ ಮಧ್ಯೆ ರಸ್ತೆಗಾಗಿ ನಿಗದಿಪಡಿಸಿದ ಜಾಗದಲ್ಲಿ ಈಗ ತ್ಯಾಜ್ಯ ನೀರು ನಿಂತು ಭಾರೀ ಅಪಾಯದ ಮುನ್ಸೂಚನೆ ನೀಡುತ್ತಿದೆ. ಒಂದೆಡೆ ತ್ಯಾಜ್ಯ ನೀರು ಹಾಗೂ ಇನ್ನೊಂದೆಡೆ ಜರಿದು ಬಂದ ತ್ಯಾಜ್ಯ ಇದೀಗ ಸ್ಥಳೀಯರಲ್ಲಿ ಮತ್ತೆ ಆತಂಕಕ್ಕೆ ಕಾರಣವಾಗಿದೆ.
ತ್ಯಾಜ್ಯದಲ್ಲಿ ಹುದುಗಿದ್ದ ರಸ್ತೆಯನ್ನು ತೆರವು ಮಾಡಿ ಬೇಸಗೆಯಲ್ಲಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಆದರೆ ಇದು ಮಳೆಗಾಲದಲ್ಲಿ ಮತ್ತೆ ಸಮಸ್ಯೆ ಆಗಲಿದೆ ಎಂಬ ಕಾರಣಕ್ಕೆ ಅದನ್ನು ಬಿಟ್ಟು ತ್ಯಾಜ್ಯದ ಮೇಲೆಯೇ ರಸ್ತೆ ಮಾಡಲಾಗಿದೆ. ಆದರೆ ಹಳೆ ರಸ್ತೆಯಲ್ಲಿ ಸದ್ಯ ಸುರಿಯುತ್ತಿರುವ ಮಳೆಯ ನೀರು ತ್ಯಾಜ್ಯದ ನೀರಿನ ಜತೆ ಸೇರಿಕೊಂಡಿದೆ. ಸೊಳ್ಳೆ, ನೊಣಗಳ ಕಾಟವೂ ಅಧಿಕವಾಗಿದೆ. ಭಾರೀ ಮಳೆ ಬಂದರೆ ಮತ್ತಷ್ಟು ತ್ಯಾಜ್ಯ ರಾಶಿ ಕುಸಿದು ಇನ್ನಷ್ಟು ಅಪಾಯದ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ಸಾಯುತ್ತಿವೆ ಮರಗಳು!
ಕಳೆದ ವರ್ಷ ತ್ಯಾಜ್ಯ ರಾಶಿ ಜರಿದಾಗ 5,000ಕ್ಕೂ ಅಧಿಕ ಅಡಿಕೆ-ತೆಂಗಿನ ಮರಗಳು ಅದರಡಿ ಸಿಲುಕಿ ನಾಶವಾಗಿದ್ದವು. ಆ ಬಳಿಕ ತ್ಯಾಜ್ಯ ರಾಶಿಯಿಂದ ನಿರಂತ ಹರಿದು ಬರುವ ಕಲುಷಿತ ನೀರಿನಿಂದಾಗಿ ಸಮೀಪದ ತೋಟಗಳ 400ರಷ್ಟು ಅಡಿಕೆ ಮರಗಳು ಮತ್ತೆ ಜೀವ ಕಳೆದುಕೊಂಡಿವೆ. ಜತೆಗೆ ತ್ಯಾಜ್ಯಮಿಶ್ರಿತ ನೀರು ಪಕ್ಕದ ತೋಡಿನಲ್ಲಿ ಹರಿದು ನದಿಯನ್ನು ಸೇರುತ್ತಿದೆ.
ತ್ಯಾಜ್ಯದ ಮೇಲೆಯೇ ರಸ್ತೆ!
ಮಂದಾರದಲ್ಲಿ ಸಂಪರ್ಕ ರಸ್ತೆಯೊಂದಿತ್ತು. ಆದರೆ ತ್ಯಾಜ್ಯ ರಾಶಿ ಜರಿದಾಗ ಮುಚ್ಚಿಹೋಗಿತ್ತು. ಸ್ಥಳೀಯರಿಗೆ ಪರ್ಯಾಯ ರಸ್ತೆ ಇರಲಿಲ್ಲ. ಖಾಸಗಿ ರಸ್ತೆಯನ್ನು ಆಶ್ರಯಿಸಬಹುದಾದರೂ ಅನುಮತಿ ಪಡೆಯುವ ಬಗ್ಗೆ ಜಿಲ್ಲಾಡಳಿತ/ಪಾಲಿಕೆ ತಲೆಕೆಡಿಸಿಕೊಳ್ಳಲಿಲ್ಲ. ಬಳಿಕ ತ್ಯಾಜ್ಯರಾಶಿಯ ಮೇಲೆಯೇ ಮಣ್ಣು, ಕೊಂಚ ಡಾಮರು ಹಾಕಿ ತಾತ್ಕಾಲಿಕ ರಸ್ತೆ ಮಾಡಲಾಗಿದೆ. ದ್ವಿಚಕ್ರ, ಕಾರು, ಜೀಪು ಹೋಗಲು ಸದ್ಯಕ್ಕೇನು ಸಮಸ್ಯೆ ಇಲ್ಲ. ಆದರೆ ಅಡಿಯಲ್ಲಿ ತ್ಯಾಜ್ಯವಿರುವ ಕಾರಣ ಮತ್ತೆ ಅಪಾಯ ಆಗಬಹುದಾ ಎಂಬ ಭೀತಿ ಇದ್ದೇ ಇದೆ.
2 ಕಿ.ಮೀ. ಉದ್ದ ತ್ಯಾಜ್ಯ ರಾಶಿ!
ಮಂದಾರದಲ್ಲಿರುವುದು 27 ಮನೆಗಳು ಮಾತ್ರ. ಅಕ್ಕಪಕ್ಕದಲ್ಲಿಯೇ ಈ ಮನೆಗಳಿದ್ದು, ಮಧ್ಯದಲ್ಲಿ ಅಡಿಕೆ-ತೆಂಗಿನ ತೋಟಗಳಿತ್ತು. ದೈವಸ್ಥಾನ ಹಾಗೂ ನಾಗಬನವಿತ್ತು. ನಡುವೆ ರಸ್ತೆಯಿತ್ತು. ಆದರೆ ಈಗ ಇಲ್ಲಿ ಕಾಣಿಸುತ್ತಿರುವುದು ತ್ಯಾಜ್ಯರಾಶಿ. ಪಚ್ಚನಾಡಿ ಡಂಪಿಂಗ್ ಯಾರ್ಡ್‌ನಿಂದ ಜರಿದು ಬಂದ ತ್ಯಾಜ್ಯ ಕಳೆದ ಆಗಸ್ಟ್ ನಲ್ಲಿ ಮಂದಾರ ಪರಿಸರದ 2 ಕಿ.ಮೀ. ವ್ಯಾಪ್ತಿಯಲ್ಲಿ ಪಸರಿಸಿದೆ. ಅದೂ ಕೂಡ 100 ಮೀಟರ್ ಅಗಲದಲ್ಲಿ. ವಿಶೇಷವೆಂದರೆ, 50 ಮೀ. ಎತ್ತರದಲ್ಲಿ 2 ಕಿ.ಮೀ. ವ್ಯಾಪ್ತಿಯಲ್ಲಿ ತ್ಯಾಜ್ಯ ರಾಶಿಯಿದೆ. ಒಂದು ಮನೆಯನ್ನೂ ಮೀರಿಸುವಷ್ಟು ಎತ್ತರದಲ್ಲಿ ತ್ಯಾಜ್ಯರಾಶಿ ಜಾರಿ ಹೋಗಿತ್ತು. ಮೂರು ಮನೆಗಳು ಈಗಲೂ ಅಪಾಯದ ಭೀತಿಯಲ್ಲಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.