ಬೆಡ್ ಯೋಗ
Team Udayavani, Jun 16, 2020, 4:39 AM IST
ರಾತ್ರಿ ಪೂರಾ ಗಡದ್ದಾಗಿ ನಿದ್ರಿಸುವ ಸಮಯದಲ್ಲಿ, ಹೆಚ್ಚಾಗಿ ಒಂದೇ ಕಡೆಗೆ ತಿರುಗಿಕೊಂಡು ಮಲಗುವ ಸಾಧ್ಯತೆ ಹೆಚ್ಚು. ಆ ಕಾರಣಕ್ಕೆ, ಕೈ ಅಥವಾ ಕಾಲು ಜೋಮು ಹಿಡಿದಂತೆ ಭಾಸವಾಗುತ್ತದೆ. ಹಾಗಾಗಿ, ಹಾಸಿಗೆಯಿಂದ ಎದ್ದಾಕ್ಷಣ ಅಲ್ಲೇ ಕೂತು ಕೆಲ ಆಸನಗಳನ್ನು ಹಾಕುವುದು ಒಳ್ಳೆಯದು. ಹಾಸಿಗೆ ಮೇಲೆಸುಖಾಸನದಲ್ಲಿ ಕುಳಿತುಕೊಳ್ಳಿ. ನಂತರ, ಎರಡೂ ಕೈಯನ್ನು ಹಿಂದಕ್ಕೆ ತೆಗೆದು ಕೊಂಡು, ಅಂಗೈಗಳನ್ನು ಒಂದಕ್ಕೊಂದು ಸೇರಿಸಿ, ಕುತ್ತಿಗೆಯ ಬಳಿ ದಿಂಬಿನ ರೀತಿ ಇಟ್ಟುಕೊಳ್ಳಿ.
ಹೀಗೆ ಮಾಡುವುದರಿಂದ, ಕುತ್ತಿಗೆಯ ಸುತ್ತಮುತ್ತ ರಕ್ತ ಸಂಚಾರ ಸರಾಗವಾಗುತ್ತದೆ. ನಂತರ ತಲೆಯನ್ನು ಒಮ್ಮೆ ಎಡಕ್ಕೆ, ಮತ್ತೂಮ್ಮೆ ಬಲಕ್ಕೆ ನಿಧಾನವಾಗಿ ವಾಲಿಸಿ. ಹೀಗೆ ನಾಲ್ಕು ಸಲ ಮಾಡುವ ಹೊತ್ತಿಗೆ, ಕುತ್ತಿಗೆಯ ತ್ತಮುತ್ತ ಇದ್ದ ಬಿಗಿತ ಕಡಿಮೆಯಾಗುತ್ತದೆ. ಕಾಲುಗಳನ್ನು ಉದ್ದಕ್ಕೆ ಚಾಚಿ, ಎರಡೂ ಕೈಗಳನ್ನು ಕಾಲಿನ ಪಾದಕ್ಕೆ ಮುಟ್ಟಿಸಿ. ಈ ಸಂದರ್ಭದಲ್ಲಿ ತಲೆಯು ಮಂಡಿಯ ತನಕ ಬಾಗಲಿ. ಉಸಿರನ್ನು ನಿಧಾನಕ್ಕೆ ಎಳೆದು, ಬಿಡುವ ಪ್ರಕ್ರಿಯೆ ನಡೆಯಲಿ. ನಂತರ, ಬಲಗಾಲನ್ನು ಮಡಚಿ, ಉದ್ದಕ್ಕೆ ಚಾಚಿರುವ ಎಡಗಾಲಿನ ತೊಡೆಯ ಪಕ್ಕದ ಭಾಗದಲ್ಲಿ ಇರಿಸಿ.
ಸೊಂಟದ ಭಾಗವನ್ನು ಬಲಕ್ಕೆ ತಿರುಗಿಸಿ. ಇದೇ ರೀತಿ ಬಲಗಾಲಿನ ಕಡೆಗೂ ಮಾಡಿ. ಇದರಿಂದ ಸೊಂಟದ ಭಾಗ ಸಡಿಲವಾಗುತ್ತದೆ. ಇದು ಮುಗಿದ ಮೇಲೆ, ಎರಡೂ ಕಾಲುಗಳನ್ನು ಚಾಚಿ, ಮತ್ತೂಮ್ಮೆ ಸೊಂಟವನ್ನು ಬಗ್ಗಿಸಿ, ಕೈಗಳಿಂದ ಪಾದಗಳನ್ನು ಮುಟ್ಟಿ. ಕೊನೆಗೆ, ಸುಖಾಸನಕ್ಕೆ ಬಂದು. ಕಣ್ಣು ಮುಚ್ಚಿ, ಅಂಗೈಗಳನ್ನು ಉಜ್ಜಿಕೊಂಡು ಕಣ್ಣಿಗೆ ಮುಟ್ಟಿಸಿ ತೆಗೆಯಿರಿ. ಆ ದಿನ ಪೂರ್ತಿ ಫ್ರೆಶ್ ಆಗಿರಲು ಇದರಿಂದ ಸಹಾಯವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BJP: ವಿಜಯೇಂದ್ರ ದಿಲ್ಲಿಗೆ: ವರಿಷ್ಠರ ಜತೆ “ಬಣ’ ರಾಜಕೀಯ ಚರ್ಚೆ?
Congress; ಅಧಿವೇಶನಕ್ಕೆ ಮುನ್ನ ಸಂಪುಟಕ್ಕೆ ಸರ್ಜರಿ? ಸಾಧ್ಯತೆಗಳೇನು?
Mahayuti ಗೆಲುವು: ಆ್ಯಕ್ಸಿಸ್ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ
High Court: ನಕ್ಸಲ್ ಚಟುವಟಿಕೆ: ಸಾವಿತ್ರಿ ಬಾಡಿ ವಾರಂಟ್ ಮನವಿ ಮರು ಪರಿಶೀಲನೆಗೆ ನಿರ್ದೇಶ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.