ವಿಶ್ವ ಪ್ರಸಿದ್ದ “ಪ್ರೈಡ್ ಪೆರೇಡ್’ ಆಚರಣೆಗಾಗಿ ವಿಭಿನ್ನ ಸಾಂಕೇತಿಕ ಮಾರ್ಗ
ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಮಹತ್ವ ಎತ್ತಿ ಹಿಡಿದ ಲೇಸರ್ ಲೇಟ್ ಶೋ
Team Udayavani, Jun 16, 2020, 12:58 PM IST
ಸಾವೋ ಪಾಲೋ : ವಿಶ್ವದ್ಯಾಂತ ಕೋವಿಡ್-19ನಿಂದಾಗಿ ಅಂತಾರಾಷ್ಟ್ರೀಯ, ರಾಷ್ಟ್ರೀಯ ಸಮಾವೇಶಗಳು, ಸಮಾರಂಭಗಳು ಕ್ರೀಡಾಕೂಟಗಳು ರದ್ದಾಗಿವೆ. ಇದೀಗ ಲೈಂಗಿಕ ಅಲ್ಪಸಂಖ್ಯಾತ ಸಮುದಾಯದ ಉಪಸ್ಥಿತಿ ಪ್ರತಿನಿಧಿಸುವ ಬ್ರೆಜಿಲ್‌ನ ಪ್ರಸಿದ್ಧ “ಪ್ರೈಡ್ ಪೆರೇಡ್’ ಕಾರ್ಯಕ್ರಮ ಆಯೋಜನೆಯೂ ಸ್ಥಗಿತಗೊಂಡಿದ್ದು, ವಿಭಿನ್ನ ಸಾಂಕೇಂತಿಕ ಆಚರಣೆ ಮಾಡಲಾಗಿದೆ.
ಹೌದು ಈ ಬಾರಿ ಕೋವಿಡ್-19 ಹಿನ್ನೆಲೆ ಜನರು ಗುಂಪು ಸೇರುವುದನ್ನು ನಿರ್ಬಂಧಿಸಲಾಗಿದೆ. ಈ ಹಿನ್ನಲೆಯಲ್ಲಿ ವಿಶ್ವ ಪ್ರಸಿದ್ದವಾಗಿರುವ “ಪ್ರೈಡ್ ಪೆರೇಡ್’ ರದ್ದುಗೊಳಿಸಿದ್ದು, ನಗರದಲ್ಲಿ ಲೇಸರ್ ಲೈಟ್‌ಗಳನ್ನು ಪ್ರದರ್ಶಿಸುವ ಮೂಲಕ ಸಾಂಕೇಂತಿಕ ಆಚರಣೆ ಮಾಡಲಾಗಿದೆ.
ಇನ್ನು ಪೋರ್ಟೊರಿಕನ್ ಕಲಾವಿದ ಯೆವೆಟ್ ಮ್ಯಾಟರ್ನ್ ದೇಶದಲ್ಲಿ ಲೈಂಗಿಕ ಅಲ್ಪಸಂಖ್ಯಾತರ ಉಪಸ್ಥಿತಿ ಎತ್ತಿ ಹಿಡಿಯುವ ಸಲುವಾಗಿ ಕಾಮನ ಬಿಲ್ಲು ಹಾಗೂ ರಾಷ್ಟ್ರ ಧ್ವಜದ ಬಣ್ಣದ ಲೇಸರ್ ಲೈಟ್ ಪ್ರದರ್ಶನ ಮಾಡಿದ್ದು, ಪ್ರತಿ ವರ್ಷ ಈ ವಿಶ್ವ ಪ್ರಸಿದ್ದ “ಪ್ರೈಡ್ ಪೆರೇಡ್’ ವೀಕ್ಷಿಸಲು ನಗರದ ಬೀದಿಗಳಲ್ಲಿ ಲಕ್ಷಾಂತರ ಜನರು ಜಮಾಯಿಸುತ್ತಿದ್ದರು. ಆದರೆ, ಈ ಬಾರಿ ಕೋವಿಡ್-19 ನಿಯಂತ್ರಣ ಹಿನ್ನಲೆಯಲ್ಲಿ ಸಾರ್ವಜನಿಕ ಕೂಟಗಳ ಆಯೋಜನೆ ಮೇಲೆ ನಿಷೇಧ ಇರುವ ಕಾರಣ ಈ ವಿಭಿನ್ನ ಮಾರ್ಗವನ್ನು ಅನುಸರಿಸಲಾಗಿದೆ.
ಗ್ರೂಪೋ ಗೈ ಡಿ ಬಹಿಯಾ ಅಸೋಸಿಯೇಷನ್ ವರದಿ ಪ್ರಕಾರ ವಿಶ್ವದಲ್ಲಿ ಲೈಂಗಿಕ ಅಲ್ಪಸಂಖ್ಯಾತರು ಅತಿ ಹೆಚ್ಚು ಕಿರುಕುಳಕ್ಕೊಳಗಾದ ದೇಶ ಬ್ರೆಜಿಲ್. 2019 ರಲ್ಲಿ ದೇಶದಲ್ಲಿ 297 ಜನರನ್ನು ಹತ್ಯೆ ಮಾಡಲಾಗಿದ್ದು, 32 ಜನರು ಆತ್ಮಹತ್ಯೆ ಮಾಡಿಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.