ತೊಗರಿ ಬೀಜಕ್ಕಾಗಿ ಅನ್ನದಾತರ ದಿಢೀರ್ ಪ್ರತಿಭಟನೆ
Team Udayavani, Jun 16, 2020, 1:51 PM IST
ದೇವರಹಿಪ್ಪರಗಿ: ದೇವರಹಿಪ್ಪರಗಿ ರೈತ ಸಂಪರ್ಕದಲ್ಲಿ ಕೇಂದ್ರದಲ್ಲಿ ತೊಗರಿ ಬೀಜದ ಕೊರತೆ ಹಿನ್ನೆಲೆ ರೈತರು ಸೋಮವಾರ ಕೃಷಿ ಅಧಿಕಾರಿಗಳ ವಿರುದ್ಧ ದಿಢೀರ್ ಪ್ರತಿಭಟನೆ ನಡೆಸಿದರು.
ಈ ವೇಳೆ ಭಾರತೀಯ ಕಿಸಾನ್ ಸಂಘದ ತಾಲೂಕಾಧ್ಯಕ್ಷ ಬಸವರಾಜ ಕಲ್ಲೂರ ಮಾತನಾಡಿ, ಕಳೆದ ಎರಡು ದಿನದಿಂದ ತೊಗರಿ ಬೀಜ ಪಡೆಯಲು ಸರದಿಯಲ್ಲಿ ನಿಂತು ಚೀಟಿ ಪಡೆದಿದ್ದೇವೆ. ಇಂದು ನಸುಕಿನ ಜಾವದಿಂದ ತೊಗರಿ ಬೀಜ ಪಡೆಯಲು ಚೀಟಿ ತೆಗೆದುಕೊಂಡು ಬಂದ ಕೆಲವು ರೈತರಿಗೆ ಮಧ್ಯಾಹ್ನದವರೆಗೆ ಮಾತ್ರ ತೊಗರಿ ಬೀಜ ಕೊಟ್ಟಿದ್ದಾರೆ. ಇನ್ನುಳಿದ ಸರದಿಯಲ್ಲಿ ನಿಂತ ಬಹುತೇಕ ರೈತರಿಗೆ ಬೀಜ ಖಾಲಿ ಆಗಿವೆ. ಬೀಜ ಬಂದ ತಕ್ಷಣ ಕೊಡುತ್ತೆವೆ ಎಂಬ ಉಡಾಫೆ ಉತ್ತರ ಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ರೈತರಿಗೆ ಬೇಕಾದಷ್ಟು ಬೀಜ ಪೂರೈಕೆ ಮಾಡದೆ ಅಧಿಕಾರಿಗಳು ತೊಗರಿ ಬೀಜ ಪ್ರಭಾವಿ ವ್ಯಕ್ತಿಗಳಿಗೆ ಮಾತ್ರ ಕೊಡುತ್ತಿದ್ದಾರೆ. ಸಾಮಾನ್ಯ ಬಡ ರೈತರಿಗೆ ಸಮರ್ಪಕವಾದ ಬೀಜ ಕೊಡುತ್ತಿಲ್ಲ. ತಾಲೂಕಿನಲ್ಲಿ ಎಲ್ಲ ರೈತರಿಗೆ ಸರಿಯಾದ ಸಮಯಕ್ಕೆ ಬೀಜ ಪೂರೈಕೆ ಮಾಡದೆ ಅಧಿ ಕಾರಿಗಳು ನಿಷ್ಕಾಳಜಿ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.
ಈ ವೇಳೆ ಅಧಿಕಾರಿಗಳ ವಿರುದ್ಧ ರೈತರು ಧಿಕ್ಕಾರ ಕೂಗಿದರು. ಪ್ರತಿಭಟನಾ ಸ್ಥಳಕ್ಕೆ ಪಿಎಸೈ ಸುರೇಶ ಗಡ್ಡಿ ಆಗಮಿಸಿ ಬೀಜ ಬಂದ ನಂತರ ಪ್ರತಿಯೊಬ್ಬ ರೈತರಿಗೆ ಬೀಜ ದೊರಕಿಸುವ ಕೆಲಸ ನಾನೇ ಮುಂದು ನಿಂತು ಮಾಡುತ್ತೇನೆ. ಈಗ ಉಳಿದ ಬೀಜಗಳು ತೆಗೆಕೊಂಡು ಹೋಗಿ ಎಂದು ರೈತರ ಮನವೋಲಿಸಿದರು. ಈ ಸಂದರ್ಭದಲ್ಲಿ ರೈತ ಸಂಘದ ಅಧ್ಯಕ್ಷ ಅಜೀಜ್ ಎಲಗಾರ, ರೈತರಾದ ಪ್ರಭು ಕಬಾಡಗಿ, ಜವಾಹಾರ ದೇಶಪಾಂಡೆ, ಶ್ರೀಶೈಲ್ ಹದರಿ, ಶರಣಪ್ಪ ತಳವಾರ, ಸಿದ್ದು ಬಿರಾದಾರ, ಬಸವರಾಜ ಮನಗೂಳಿ, ಶರಣಗೌಡ ಸುರಗಳ್ಳಿ, ಶ್ರೀಶೈಲ ಮಠಪತಿ, ಮಲ್ಲು ಬಿರಾದಾರ ಸೇರಿದಂತೆ ನೂರಾರು ರೈತರು ಇದ್ದರು.
ದೇವರಹಿಪ್ಪರಗಿ ತಾಲೂಕಿನ ರೈತರಿಗೆ ಕೊರತೆ ಆಗಬಾರದು ಎಂಬ ಉದ್ದೇಶದಿಂದ 940 ಕ್ವಿಂಟಲ್ ಬಿತ್ತನೆ ಬೀಜಕ್ಕೆ ಮೇಲಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದೇವೆ. ಅದರಲ್ಲಿ 250 ಕ್ವಿಂಟಲ್ ಮಾತ್ರ ಬಂದಿದ್ದು ರೈತರಿಗೆ ವಿತರಿಸಲಾಗಿದೆ. ಮಂಗಳವಾರ ಬೆಳಗ್ಗೆ 60 ಕ್ವಿಂಟಲ್ ತೊಗರಿ ಬೀಜ ಬರಲಿದ್ದು ಅದನ್ನೂ ವಿತರಿಸುತ್ತೇವೆ. ತಾಲೂಕಿನ ಯಾವ ರೈತರಿಗೂ ಬೀಜದ ಕೊರತೆಯಾಗದಂತೆ ನೊಡಿಕೊಳ್ಳುತ್ತೇವೆ. -ಸೋಮನಗೌಡ ಬಿರಾದಾರ, ಕೃಷಿ ಅಧಿಕಾರಿ, ದೇವರಹಿಪ್ಪರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.