ವೃತ್ತಿಯಲ್ಲಿ ಕ್ರಿಕೆಟಿಗರು, ಪ್ರವೃತ್ತಿಯಲ್ಲಿ ಅಧಿಕಾರಿಗಳು!
ಕ್ರಿಕೆಟ್ ವೃತ್ತಿಯೊಂದಿಗೆ ಪ್ರವೃತ್ತಿಯಲ್ಲಿ ಸರಕಾರಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ನೆಚ್ಚಿನ ಕ್ರಿಕೆಟಿಗರ ಪ್ರವೃತ್ತಿ ಬದುಕಿನ ಕಥೆ!
Team Udayavani, Jun 16, 2020, 7:34 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಭಾರತದ ಅತಿಹೆಚ್ಚು ಜನಪ್ರಿಯ ಕ್ರೀಡೆಗಳಲ್ಲಿ ಕ್ರಿಕೆಟ್‌ಗೆ ಅಗ್ರಸ್ಥಾನ. ಹೆಚ್ಚಿನ ಅಭಿಮಾನಿಗಳು ಹೊಂದಿರುವ ಈ ಕ್ರೀಡೆಯಲ್ಲಿ ಭಾರತದ್ದು ಶ್ರೇಷ್ಠ ಸಾಧನೆ.
ಎರಡು ಬಾರಿ ವಿಶ್ವಕಪ್ ಗಳಿಸಿದ್ದು, ಒಂದು ಬಾರಿ ಟಿ-20 ವಿಶ್ವಕಪ್‌ನ್ನು ತನ್ನದಾಗಿಸಿಕೊಂಡಿದೆ. ಕ್ರಿಕೆಟ್‌ನಲ್ಲಿ ದೇಶದ ಆಟಗಾರರ ಸಾಧನೆ ಹಿರಿದು. ಕಪಿಲ್‌ದೇವ್ ನಿಂದ ವಿರಾಟ್ ಕೊಹ್ಲಿಯವರೆಗೆ ಕ್ರಿಕೆಟಿಗರು ತಮ್ಮ ಅಮೋಘ ಪ್ರದರ್ಶನದ ಮೂಲಕ ಮನೆಮಾತಾಗಿದ್ದಾರೆ.
ಈ ಹಿನ್ನೆಲೆಯಲ್ಲಿ ದೇಶದ ಕೆಲವು ಕ್ರಿಕೆಟಿಗರು ಕ್ರೀಡಾಂಗಣದಲ್ಲಿ ಶ್ರೇಷ್ಠ ಪ್ರದರ್ಶನದ ಮೂಲಕ ಕೋಟ್ಯಂತರ ಅಭಿಮಾನಿಗಳ ಹೃದಯದಲ್ಲಿ ನೆಲೆಸಿದ್ದಾರೆ.
ಅಲ್ಲದೇ ಅವರ ಆಗಾಗ ತೋರುವ ಮಾನವೀಯತೆ ಕೂಡ ಅಷ್ಟೇ ಜನಪ್ರಿಯತೆ ಗಳಿಸಿರುತ್ತದೆ. ದೇಶದ ಕ್ರಿಕೆಟಿಗರು ಕೇವಲ ಕ್ರೀಡಾಂಗಣದಲ್ಲಿ ಅಷ್ಟೇ ಫೋರ್-ಸಿಕ್ಸ್ ಬಾರಿಸುವುದರ ಜತೆಗೆ ಸಮಾಜದಲ್ಲಿ ದೇಶಪ್ರೇಮ ಮೆರೆಯವುದರೊಂದಿಗೆ ನಮ್ಮ ಜತೆಗಿದ್ದಾರೆ ಎಂಬುದನ್ನು ಆಗಾಗ ತೋರಿಸಿಕೊಟ್ಟಿದ್ದಾರೆ.
ಅಂತವರಲ್ಲಿ ಕೆಲವು ಕ್ರಿಕಟಿಗರು ದೇಶದಲ್ಲಿ ಕ್ರಿಕೆಟ್ ವೃತ್ತಿಯ ಜತೆಗೆ ಪ್ರವೃತ್ತಿಯಲ್ಲಿ ಸರಕಾರ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಮ್ಮೆಗೆಲ್ಲರಿಗೂ ಸ್ಫೂರ್ತಿಯಾಗಿದ್ದಾರೆ. ಅಂವರಲ್ಲಿ ಕೆಲವರ ಕುರಿತಾಗಿರುವ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ಮಹೇಂದ್ರ ಸಿಂಗ್ ಧೋನಿ
ಭಾರತ ತಂಡ ಯಶಸ್ವಿ ಕ್ಯಾಪ್ಟನ್, ಕೂಲ್ ಕ್ಯಾಪ್ಟನ್ ಎಂದೇ ಖ್ಯಾತಿಯಗಿರುವ ಮಹೇಂದ್ರ ಸಿಂಗ್ ಧೋನಿ ಕ್ರೀಡಾಂಗಣದಲ್ಲಿ ಕೇವಲ ಹೆಲಿಕಾಫ್ಟರ್ ಶಾಟ್‌ನಿಂದ ಸಿಕ್ಸ್ ಮಾತ್ರ ಬಾರಿಸುವುದಿಲ್ಲ, ಜತೆಗೆ ಭಾರತೀಯ ಸೇನೆಯಲ್ಲಿ ಸೈನಿಕನಾಗಿ ಕೂಡ ಕರ್ತವ್ಯ ನಿರ್ವಹಿಸಿ ದೇಶಪ್ರೇಮ ಮೆರೆಯುತ್ತಿದ್ದಾರೆ.
ಇವರು 2011ರಿಂದ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತೀಚೆಗೆ ವಿಶ್ವಕಪ್ ಮುಗಿದ ಬಳಿಕ ಮಹೇಂದ್ರ ಸಿಂಗ್ ಧೋನಿ ಅವರು ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಆಪಾರ ಜನಮೆಚ್ಚುಗೆಗೆ ಪಾತ್ರವಾಗಿತ್ತು.
ಸಚಿನ್ ತೆಂಡುಲ್ಕರ್
ಕ್ರಿಕೆಟ್ ದೇವರು ಎಂಬ ಗೌರವಕ್ಕೆ ಪಾತ್ರರಾಗಿರುವ ಸಚಿನ್ ತೆಂಡುಲ್ಕರ್ ಜಗತಿನ ಶ್ರೇಷ್ಠ ಕ್ರಿಕಟಿಗರಲ್ಲಿ ಒಬ್ಬರು. ಇವರ ಸೌಮ್ಯಯುತ ಪ್ರದರ್ಶನ, ದಾಖಲೆಗಳಿಂದಲೇ ಇವರು ಜಗತ್ಪ್ರಸಿದ್ಧಿ. ಇವರು ಕೇವಲ ಕ್ರಿಕಟಿಗ ಮಾತ್ರವಲ್ಲದೇ ಬಹುಮುಖ ಪ್ರತಿಭೆಯೂ ಕೂಡ ಹೌದು. ವೃತ್ತಿಯೊಂದಿಗೆ ಕ್ರಿಕಟಿಗನಾಗಿದ್ದ ಸಚಿನ್ ಅವರು ಪ್ರವೃತ್ತಿಯಲ್ಲಿ ಭಾರತೀಯ ಸೇನೆಯ ವಾಯುಪಡೆ ಅಧಿಕಾರಿ. ಇವರು 2010ರಲ್ಲಿ ಭಾರತೀಯ ವಾಯುಸೇನೆಯಲ್ಲಿ ಗ್ರೂಪ್ ಕ್ಯಾಪ್ಟನ್ ಆಗಿ ನೇಮಕ ಮಾಡಿ ಗೌರವಿಸಲಾಗಿದೆ.
ಹರ್ಭಜನ್ ಸಿಂಗ್
ಭಾರತ ಕ್ರಿಕೆಟ್ ತಂಡದ ಪ್ರಮುಖ ಆಫ್ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ತಮ್ಮ ಚಾಕಚಕ್ಯತೆ ಬೌಲಿಂಗ್‌ನಿಂದ ಪ್ರಸಿದ್ಧಿ. ದಾಂಡಿಗರ ಎದೆಯಲ್ಲಿ ನಡುಕ ಹುಟ್ಟುವಷ್ಟು ಮಾಂತ್ರಿಕ ಶೈಲಿಯ ಇವರದು ಆಫ್ ಸ್ಪಿನ್ ಬೌಲಿಂಗ್. ಇಂತಹ ಪ್ರಸಿದ್ಧಿಯ ಹರ್ಭಜನ್ ಸಿಂಗ್ ಪ್ರವೃತ್ತಿಯಲ್ಲಿ ಸರಕಾರಿ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಹರ್ಭಜನ್ ಸಿಂಗ್ ಅವರನ್ನು ಪಂಜಾಬ್ ಸರಕಾರವು ಉಪಪೊಲೀಸ್ ವರಿಷ್ಠಾಧಿಕಾರಿಯನ್ನಾಗಿ ನೇಮಿಸಿ, ಗೌರವಿಸಿದೆ. ಹಾಗಾಗಿ ಇವರು ಬ್ಯಾಟ್ಸಮನ್‌ಗಳಗಷ್ಟೇ ಅಲ್ಲ ಸಮಾಜವಿದ್ರೋಹಿಗಳಿಗೆ ಕೂಡ ತಮ್ಮ ಖಾಕಿಯಿಂದ ನಡುಕ ಹುಟ್ಟಿಸಬಲ್ಲರು.
ಕಪಿಲ್ ದೇವ್
ಕ್ರಿಕೆಟ್ ನಲ್ಲಿ ನಮ್ಮ ದೇಶಕ್ಕೆ ಚೊಚ್ಚಲ ವಿಶ್ವಕಪ್ ತಂದುಕೊಟ್ಟ ತಂಡದ ಯಶಸ್ವಿ ನಾಯಕ ಕಪಿಲ್ ದೇವ್ ಅವರು 2008ರಲ್ಲಿ ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿ ಸೇವೆ ಸಲ್ಲಿಸಿದ್ದಾರೆ.
ಉಮೇಶ್ ಯಾದವ್
ಭಾರತ ತಂಡದ ವೇಗದ ಬೌಲರ್ ಉಮೇಶ್ ಯಾದವ್ ಅವರು ತಮ್ಮ ಕ್ರಿಕೆಟ್ ವೃತ್ತಿ ಜೀವನದ ಜತೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಅಸಿಸ್ಟೆಂಟ್ ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಜೋಗಿಂದರ್ ಶರ್ಮಾ
2007ರ ಟಿ-20 ವಿಶ್ವಕಪ್ ಗೆಲುವಿಗೆ ಮುಖ್ಯ ಪಾತ್ರವಹಿಸಿದ್ದ ಬೌಲರ್ ಜೋಗಿಂದರ್ ಶರ್ಮಾ ಅವರು ಹರಿಯಾಣ ಸರಕಾರದಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಲಾಕ್‌ಡೌನ್ ಸಮಯದಲ್ಲಿ ಉತ್ತಮ ಕರ್ತವ್ಯ ನಿರ್ವಹಿಸಿ ಅಪಾರ ಜನಮೆಚ್ಚುಗೆ ಗಳಿಸಿದ್ದರು.
– ಶಿವ ಬನ್ನಿಗನೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.