ಕೊರಿಯಾ ದ್ವೀಪದಲ್ಲಿ ಉದ್ವಿಗ್ನ ಸ್ಥಿತಿ: ಸಂಪರ್ಕ ಕಚೇರಿ ಸ್ಫೋಟಿಸಿದ ಉತ್ತರ ಕೊರಿಯಾ
ಅಣ್ವಸ್ತ್ರ ಮಾತುಕತೆ ವಿಫಲ ಬಳಿಕದ ಬೆಳವಣಿಗೆ
Team Udayavani, Jun 17, 2020, 11:16 AM IST
ಸಿಯೋಲ್: ದಕ್ಷಿಣ ಕೊರಿಯಾದೊಂದಿಗೆ ಮತ್ತೆ ಸಂಘರ್ಷಕ್ಕೆ ಮುಂದಾಗಿರುವ ಉತ್ತರ ಕೊರಿಯಾ, ಮಂಗಳವಾರ ಗಡಿಭಾಗದಲ್ಲಿರುವ ಅಂತರ್‌ಕೊರಿಯಾ ಸಂಪರ್ಕ ಕಚೇರಿಯ ಕಟ್ಟಡವನ್ನು ಸ್ಫೋಟಿಸಿದೆ. ಇದರಿಂದಾಗಿ ಕೊರಿಯಾ ಪರ್ಯಾಯ ದ್ವೀಪ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ಸೃಷ್ಟಿಯಾಗಿದೆ. ಕಳೆದ ವರ್ಷ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉ.ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಊನ್ ನಡುವಿನ ಅಣು ಒಪ್ಪಂದ ಕುರಿತಾದ ಮಾತುಕತೆ ವಿಫಲಗೊಂಡ ಅನಂತರ ಉ.ಕೊರಿಯಾ ಮತ್ತು ದ.ಕೊರಿಯಾ ನಡುವಿನ ಸಂಬಂಧ ಹದಗೆಡುತ್ತಾ ಬಂದಿದೆ.
ಉ.ಕೊರಿಯಾದ ಗಡಿಪಟ್ಟಣವಾದ ಕೈಸೊಂಗ್‌ನಲ್ಲಿರುವ ಕಚೇರಿಯ ಕಟ್ಟಡವನ್ನು ಮಧ್ಯಾಹ್ನ 2.49ರ ವೇಳೆಗೆ ಧ್ವಂಸಗೊಳಿಸಲಾಗಿದೆ ಎಂದು ಸಿಯೋಲ್‌ನ ಏಕೀಕರಣ ಸಚಿವಾಲಯ ತಿಳಿಸಿದೆ. ಈ ಮಧ್ಯೆ, ಕಚೇರಿ ಇರುವ ಕಟ್ಟಡ ಸಂಕೀರ್ಣದಿಂದ ಹೊಗೆ ಬರುತ್ತಿರುವ ಫೋಟೊಗಳನ್ನು ಯೋನ್ಹಾಪ್ ನ್ಯೂಸ್ ಏಜೆನ್ಸಿ ಪ್ರಕಟಿಸಿದೆ. ಇದೇ ವೇಳೆ, 2018ರಲ್ಲಿ ದ.ಕೊರಿಯಾ ಜತೆಗೆ ಮಾಡಿಕೊಂಡಿದ್ದ ದ್ವಿಪಕ್ಷೀಯ ಮಿಲಿಟರಿ ಒಪ್ಪಂದವನ್ನು ಕೈಬಿಟ್ಟು, ಸೈನ್ಯವನ್ನು ವಾಪಸ್ ಕರೆಸಿಕೊಂಡಿದ್ದ ಪ್ರದೇಶಗಳಲ್ಲಿ ಮತ್ತೆ ಸೇನಾಪಡೆಯನ್ನು ನಿಯೋಜಿಸಲು ಮುಂದಾಗುವಂತೆ ಆಡಳಿತಾರೂಢ ಪಕ್ಷ ನೀಡಿರುವ ಶಿಫಾರಸ್ಸನ್ನು ಪರಿಶೀಲಿಸುವುದಾಗಿ ಕೊರಿಯಾದ ಪೀಪಲ್ಸ್ ಆರ್ಮಿಯ ಸೇನಾಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
UK; ಪ್ರಧಾನಿ ದೀಪಾವಳಿ ಪಾರ್ಟಿಯಲ್ಲಿ ಮದ್ಯ, ಮಾಂಸ: ಕೊನೆಗೂ ಕ್ಷಮೆ ಯಾಚನೆ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
MUST WATCH
ಹೊಸ ಸೇರ್ಪಡೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.