ಪದ್ಮಶ್ರೀಗೆ ಐ.ಎಂ. ವಿಜಯನ್ ಹೆಸರು
Team Udayavani, Jun 18, 2020, 6:12 AM IST
ಹೊಸದಿಲ್ಲಿ: ಭಾರತ ಫುಟ್ಬಾಲ್ ತಂಡದ ಮಾಜಿ ನಾಯಕ ಐ.ಎಂ. ವಿಜಯನ್ ಅವರ ಹೆಸರನ್ನು ಅಖೀಲ ಭಾರತ ಫುಟ್ಬಾಲ್ ಒಕ್ಕೂಟ (ಎಐಎಫ್ಎಫ್) ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನ ಮಾಡಿದೆ. ಎಐಎಫ್ಎಫ್ ಮಹಾ ಕಾರ್ಯದರ್ಶಿ ಕುಶಲ್ ದಾಸ್ ಇದನ್ನು ಮಾಧ್ಯಮಗಳಿಗೆ ತಿಳಿಸಿದರು.
51 ವರ್ಷದ ಮಾಜಿ ಸ್ಟ್ರೈಕರ್ ವಿಜಯನ್ ಭಾರತದ ಪರ 79 ಪಂದ್ಯಗಳನ್ನಾಡಿದ್ದು, 40 ಗೋಲು ಸಿಡಿಸಿದ್ದಾರೆ. 2000ರಿಂದ 2004ರ ತನಕ ಅವರು ಭಾರತದ ಫುಟ್ಬಾಲ್ ತಂಡದ ನಾಯಕರಾಗಿದ್ದರು. ಮೋಹನ್ ಬಗಾನ್, ಕೇರಳ ಪೊಲೀಸ್, ಎಫ್ಸಿ ಕೊಚಿನ್, ಜೆಸಿಟಿ ಮಿಲ್ಸ್ ಪಗ್ವಾರ ಮೊದಲಾದ ಕ್ಲಬ್ ತಂಡಗಳಲ್ಲೂ ವಿಜಯನ್ ಗಮನಾರ್ಹ ಪ್ರದರ್ಶನ ನೀಡಿದ್ದರು. ಫುಟ್ಬಾಲ್ಗೆ ಕಾಲಿಡುವ ಮುನ್ನ ತವರಾದ ತ್ರಿಶ್ಯೂರ್ನ ಕಾರ್ಪೊರೇಶನ್ ಸ್ಟೇಡಿಯಂಗಳಲ್ಲಿ ನಡೆಯುತ್ತಿದ್ದ ಪಂದ್ಯಗಳ ವೇಳೆ ವಿಜಯನ್ ಸೋಡಾ ಮಾರುತ್ತಿದ್ದುದನ್ನು ಮರೆಯುವಂತಿಲ್ಲ! 1999ರ ಸ್ಯಾಫ್ ಗೇಮ್ಸ್ನಲ್ಲಿ ಭೂತಾನ್ ವಿರುದ್ಧ ಪಂದ್ಯ ಆರಂಭಗೊಂಡ ಕೇವಲ 12 ಸೆಕೆಂಡ್ಗಳಲ್ಲಿ ಗೋಲು ಬಾರಿಸಿದ ಹೆಗ್ಗಳಿಕೆ ವಿಜಯನ್ ಅವರದ್ದಾಗಿದೆ. ಇದು ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯದ ಮಿಂಚಿನ ಗೋಲುಗಳಲ್ಲಿ ಒಂದಾಗಿ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.