ಪಾದರಕ್ಷೆ ಮಳಿಗೆಗೆ ಭೇಟಿ ವೇಳೆ ಮುನ್ನೆಚ್ಚರಿಕೆಗಳೇನು?
ಬದುಕು ಬದಲಾಗಿದೆ ನಾವೂ ಬದಲಾಗೋಣ
Team Udayavani, Jun 18, 2020, 5:45 AM IST
ಕೆಲವೊಂದು ಅವಶ್ಯ ವಸ್ತುಗಳಲ್ಲಿ ಚಪ್ಪಲಿಯೂ ಒಂದು. ಅದಿಲ್ಲದೆ ಹೊರಗೆ ಹೋಗುವುದು ಅಸಾಧ್ಯ. ಮಳೆಗಾಲದಲ್ಲಂತೂ ಪಾದರಕ್ಷೆ ಬದಲಾಯಿಸುವುದು ಅನಿವಾರ್ಯ. ಕೋವಿಡ್-19 ಬಳಿಕ ಚಪ್ಪಲಿ ಅಂಗಡಿಗಳಲ್ಲಿ ವರ್ತಕರು ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತಿನಿತ್ಯ ಅನೇಕ ಮಂದಿ ಖರೀದಿಗೆ ಬರುವುದರಿಂದ ಗ್ರಾಹಕರು ಸಹಿತ ಎಲ್ಲರ ಆರೋಗ್ಯ ಕಾಪಾಡುವುದಕ್ಕೆ ಮಾಲಕರು ಮೊದಲ ಆದ್ಯತೆ ನೀಡುತ್ತಿದ್ದಾರೆ.ಪಾದರಕ್ಷೆ ಮಳಿಗೆಯ ಸ್ವತ್ಛತೆಯಿಂದ ಆರಂಭಗೊಂಡು, ವೈಯಕ್ತಿಕ ಸ್ವಚ್ಛತೆ ಸಹಿತ ಎಲ್ಲ ರೀತಿಯಿಂದಲೂ ಅಗತ್ಯ ಮಾರ್ಗೋಪಾಯಗಳನ್ನು ಚಪ್ಪಲಿ ವ್ಯಾಪಾರಸ್ಥರು ಕೈಗೊಳ್ಳುತ್ತಿದ್ದಾರೆ. ಸಾಮಾಜಿಕ ಅಂತರ ಸಹಿತ ಸರಕಾರದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ಆದುದರಿಂದ ಗ್ರಾಹಕರೂ ಇದಕ್ಕೆ ಸಹಕರಿಸುವುದು ಅಗತ್ಯ.
ಇತರ ಮಳಿಗೆಗಳಂತೆ ಪಾದರಕ್ಷೆ ಅಂಗಡಿಗಳೂ ತೆರೆದುಕೊಂಡಿವೆ. ಮಳೆಗಾಲ ಆರಂಭವಾಗಿರುವುದರಿಂದ ಈಗ ಬೇಸಗೆ ಕಾಲದ ಶೂ, ಚಪ್ಪಲಿಗಳನ್ನು ಹಾಕುವುದು ಅಸಾಧ್ಯ. ಆದುದರಿಂದ ಹೊಸ ಪಾದರಕ್ಷೆಗಳು ಅನಿವಾರ್ಯ. ಈ ಮಳಿಗೆಗಳಿಗೆ ಭೇಟಿ ನೀಡುವಾಗ ಯಾವ ಮುನ್ನೆಚ್ಚರಿಕೆ ವಹಿಸಬೇಕು? ಇಲ್ಲಿದೆ ಮಾಹಿತಿ.
ಕೋವಿಡ್-19 ಬಳಿಕ ಮುನ್ನೆಚ್ಚರಿಕೆಯಾಗಿ ಎಲ್ಲ ಚಪ್ಪಲಿ ಅಂಗಡಿಗಳಿಗೆ ಖರೀದಿಗೆ ಬರುವ ಗ್ರಾಹಕರಿಗೆ ಮಾಸ್ಕ್ ಕಡ್ಡಾಯವಾಗಿದೆ. ಮಾಸ್ಕ್ ಧರಿಸಿಯೇ ಒಳ ಬರುವಂತೆ ಮಾಲಕರು ಪ್ರತಿಯೊಬ್ಬ ಗ್ರಾಹಕರಲ್ಲಿಯೂ ಮನವಿ ಮಾಡಿಕೊಳ್ಳುತ್ತಿದ್ದಾರೆ. ಅದೇ ರೀತಿ ಪ್ರವೇಶಿಸುವಾಗಲೇ ಸ್ಯಾನಿಟೈಸರ್ ನೀಡಲಾಗುತ್ತದೆ.
ಆಯ್ಕೆಯಾದ ಚಪ್ಪಲಿಗಳನ್ನು ಮಾತ್ರವೇ ಮುಟ್ಟಿ ಪರೀಕ್ಷಿಸುವುದು ಉತ್ತಮ. ಕೆಲವೊಂದು ಪಾದರಕ್ಷೆ ಮಳಿಗೆಯಲ್ಲಿ ಚಪ್ಪಲಿಗಳನ್ನು ಮುಟ್ಟಿ, ನೋಡಲು ಬಳಸಿ ಬಿಸಾಡುವ ಕೈಗವಸುಗಳನ್ನು ಕೂಡ ಕೊಡಲಾಗುತ್ತಿದೆ. ಆ ಮೂಲಕ ಸುರಕ್ಷತೆ ಬಗ್ಗೆಯೂ ಜಾಗರೂಕತೆ ವಹಿಸಲಾಗುತ್ತಿದೆ.
ಮಕ್ಕಳು ಮತ್ತು ಹಿರಿಯರು ಹೊರಗೆ ಹೋಗಬಾರದೆಂಬ ಸೂಚನೆ ಇರುವುದರಿಂದ ಖರೀದಿಗೆ ಹೋಗದಿರುವುದು ಉತ್ತಮ. ಅವರಿಗೆ ಬೇಕಾದ ಪಾದರಕ್ಷೆಗಳ ಗಾತ್ರವನ್ನು ಸರಿಯಾಗಿ ತಿಳಿದುಕೊಂಡು ಮನೆಯ ಇತರ ಸಿಬಂದಿ ಮಳಿಗೆಗೆ ಭೇಟಿ ನೀಡಿದಾಗ ತರುವುದು ಉತ್ತಮ.
ಹವಾನಿಯಂತ್ರಿತ ಕೊಠಡಿಗಳಿದ್ದಲ್ಲಿ ಎಸಿ ಯಂತ್ರವನ್ನು ಬಂದ್ ಮಾಡಲಾಗಿದೆ. ಒಂದು ವೇಳೆ ಏಕಕಾಲದಲ್ಲಿ ಹೆಚ್ಚಿನ ಗ್ರಾಹಕರು ಇದ್ದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಒಬ್ಬರು ಪಾದರಕ್ಷೆ ಖರೀದಿಸಿದ ಅನಂತರ ಮತ್ತೂಬ್ಬರನ್ನು ಒಳಗೆ ಬಿಡಲಾಗುತ್ತದೆ. ಇದಕ್ಕೆ ಗ್ರಾಹಕರು ಕೂಡ ಸಹಕರಿಸುವುದು ಅನಿವಾರ್ಯ.
ಹೆಚ್ಚಿನ ಕಡೆಗಳಲ್ಲಿ ಒಮ್ಮೆ ಖರೀದಿಸಿ ಮನೆಗೆ ಕೊಂಡೊಯ್ದ ಪಾದರಕ್ಷೆಗಳನ್ನು ಮತ್ತೆ ಹಿಂದಿರುಗಿಸಲು ಈಗ ಅವಕಾಶವಿಲ್ಲ. ಆದುದರಿಂದ ಖರೀದಿಸುವಾಗಲೇ ಪರಿಶೀಲಿಸಿ. ನೀವು ಈಗಾಗಲೇ ಬಳಸುತ್ತಿರುವ ಪಾದರಕ್ಷೆಗಳ ಗಾತ್ರವನ್ನು ಮೊದಲೇ ತಿಳಿದುಕೊಂಡಿದ್ದರೆ ಖರೀದಿ ಸುಲಭವಾಗುತ್ತದೆ.
ಎಲ್ಲ ಕಡೆಗಳಲ್ಲಿ ಡಿಜಿಟಲ್ ಪಾವತಿಯನ್ನು ಹೆಚ್ಚಾಗಿ ಬಳಸುವಂತೆ ಗ್ರಾಹಕರಿಗೆ ಸೂಚಿಸಲಾಗಿದೆ. ಗ್ರಾಹಕರು ಕೂಡ ನಗದು, ಕ್ರೆಡಿಟ್ ಕಾರ್ಡ್‌ಗಿಂತ ಆನ್‌ಲೈನ್ ಪಾವತಿಗೆ ಒತ್ತು ನೀಡುವುದು ಉತ್ತಮ. ಅನಿವಾರ್ಯ ಸಂದರ್ಭದಲ್ಲಿ ಮಾತ್ರ ನಗದು ಪಾವತಿಯನ್ನು ಮಾಡುವುದು.
ನಿಮಗೆ ಏನಾದರೂ ಸಂಶಯ, ಪ್ರಶ್ನೆಗಳಿದ್ದರೆ ಈ ನಂಬರಿಗೆ ವಾಟ್ಸಪ್ ಮಾಡಿ.
9148594259
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Election Results: ಮಹಾರಾಷ್ಟ್ರ, ಝಾರ್ಖಂಡ್ ನಲ್ಲಿ ಮತ ಎಣಿಕೆ ಪ್ರಕ್ರಿಯೆ ಆರಂಭ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.