ಭತ್ತ ಬೆಳೆ: ಸಾವಯವ-ರಸಗೊಬ್ಬರ ಬಳಕೆ ಹೇಗೆ?
Team Udayavani, Jun 18, 2020, 5:40 AM IST
ಉಡುಪಿ: ಕರಾವಳಿಯಲ್ಲಿ ಉತ್ತಮ ಮಳೆಯಾಗುತ್ತಿದ್ದು, ರೈತ ವರ್ಗದಲ್ಲಿ ಮಂದಹಾಸ ಮೂಡಿದೆ. ಮಳೆ ಬಿರುಸು ಪಡೆಯುತ್ತಿದ್ದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಕೃಷಿ ಚಟುವಟಿಕೆಗಳು ಚುರುಕುಗೊಂಡಿವೆ.
ಭತ್ತದ ಕೃಷಿಗಾಗಿ ಗದ್ದೆ ಉಳುಮೆ, ಬೀಜ ಬಿತ್ತನೆ, ಹಟ್ಟಿಗೊಬ್ಬರ ಹರಡುವುದು ಇತ್ಯಾದಿ ಕೆಲಸ ಕಾರ್ಯಗಳು ಆರಂಭಗೊಂಡಿವೆ. ಜಿಲ್ಲೆಯಲ್ಲಿ 2.9 ಲಕ್ಷ ಮಂದಿ ಕೃಷಿಕರಿದ್ದಾರೆ. ಈ ಪೈಕಿ 54 ಸಾವಿರ ಮಂದಿ 36 ಸಾವಿರ ಹೆಕ್ಟೇರ್ ಭೂಮಿಯಲ್ಲಿ ಭತ್ತ ಬೆಳೆಯುತ್ತಾರೆ. ಕೃಷಿ ಇಲಾಖೆ ಈಗಾಗಲೇ ಬಿತ್ತನೆ ಬೀಜ ವಿತರಿಸಿದೆ. ಈ ನಡುವೆ ಬೀಜ ಬಿತ್ತನೆ ಸಹಿತ ಕೃಷಿ ಚಟುವಟಿಕೆ ಚುರುಕಾಗಿದೆ.
ರಾಸಾಯನಿಕ ಗೊಬ್ಬರ
ಬಳಕೆ ವಿಧಾನ
ಭತ್ತದ ಬೇಸಾಯ ನಡೆಸುವ ಕೃಷಿಕರು ಬಿತ್ತನೆಯ 15ರಿಂದ 20 ದಿನಗಳ ಪೂರ್ವ ದಲ್ಲಿ 1 ಎಕರೆಗೆ 2 ಟನ್(2,000 ಕೆ.ಜಿ) ಕೊಟ್ಟಿಗೆ ಗೊಬ್ಬರಕ್ಕೆ 52 ಕೆ.ಜಿ. ಯೂರಿಯಾ, 60 ಕೆ.ಜಿ. ರಾಕ್ ಪಾಸ್ಪೇಟ್, 40 ಕೆ.ಜಿ. ಪೊಟ್ಯಾಶ್ ಮಿಶ್ರಣಗೊಳಿಸಿ ಹಾಕಬೇಕು.
ಯಾವಾಗ ಬಳಸಬೇಕು?
ರಾಸಾಯನಿಕ ಗೊಬ್ಬರವನ್ನು ನಾಟಿ ಕಾಲ, ನಾಟಿ ಅನಂತರದ ಒಂದು ತಿಂಗಳು, ಹಾಗೂ ನಾಟಿಯ 2 ತಿಂಗಳುಗಳ ಅವಧಿಗೆ ಒಟ್ಟು 3 ಬಾರಿ ವಿಂಗಡಿಸಿ ನೀಡಬೇಕು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ (ಬೇಸಾಯ ಶಾಸ್ತ್ರ ) ಡಾ| ಎನ್. ನವೀನ ಸಲಹೆ ನೀಡಿದ್ದಾರೆ.
ಭತ್ತ ನಾಟಿ ಮಾಡುವ ಕೃಷಿಕರು ಗದ್ದೆ ಉಳು ಮೆಯ ಆರಂಭದಲ್ಲಿ ಕೊಟ್ಟಿಗೆ ಗೊಬ್ಬರ ಬಳಸಿದರೆ ಅತ್ಯುತ್ತಮ ಎಂಬುದು ವೈಜ್ಞಾನಿಕವಾಗಿ ಸಾಬೀತಾ ಗಿದೆ. ಸಾವಯವ ಕೃಷಿ ಪದ್ಧತಿ ಜನ ಪ್ರಿಯ ವಾಗು ತ್ತಿದ್ದಂತೆ ಹಟ್ಟಿಗೊಬ್ಬರ, ಪಂಚಗವ್ಯ ವಿಧಾನಗಳು ಮತ್ತೆ ಚಾಲ್ತಿಗೆ ಬರುತ್ತಿವೆ.
ಹಳ್ಳಿವಾರು ವಿಂಗಡಿಸಿ
ಗ್ರಾ.ಪಂ. ವ್ಯಾಪ್ತಿಯಲ್ಲಿ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹವಾಮಾನ ವ್ಯತ್ಯಾಸಗಳು ಕಂಡು ಬರುತ್ತಿರುವ ಕಾರಣಕ್ಕೆ ಹಳ್ಳಿವಾರು ವ್ಯಾಪ್ತಿ ವಿಂಗಡಿಸಿ ಕೊಡಬೇಕು. ವಿಮೆ ಯೋಜನೆಯನ್ನು ಮತ್ತಷ್ಟು ಸರಳಗೊಳಿಸಿ ಹೆಚ್ಚಿನ ರೈತರಿಗೆ ಅನುಕೂಲಕರವಾಗಬೇಕು. ಈಗಿನ ನಿಯಮಾವಳಿಗಳು ಕರಾವಳಿಗೆ ಹೆಚ್ಚು ಪೂರಕವಾಗಿಲ್ಲ.
-ರಾಮಕೃಷ್ಣ ಭಟ್ ಅಮ್ಮುಜೆ, ಕೃಷಿಕರು
ಫಸಲ್ ವಿಮಾ ಯೋಜನೆ: ಮಾಹಿತಿ
ಹವಾಮಾನ ವೈಪರೀತ್ಯಗಳು, ಪ್ರಕೃತಿ ವಿಕೋಪಗಳಿಂದ ರೈತರು ಬೆಳೆದ ಬೆಳೆಗಳು ನಷ್ಟಕ್ಕೆ ಒಳಗಾದ ಸಂದರ್ಭ ರೈತರ ಸುರಕ್ಷೆಗೆ ಹಲವು ವಿಧದ ವಿಮಾ ಯೋಜನೆಗಳು ಜಾರಿಯಲ್ಲಿವೆ. ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆ ಮತ್ತು ಪ್ರಧಾನ ಮಂತ್ರಿ ಫಸಲ್ ವಿಮಾ. ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಅಡಿಕೆ ಮತ್ತು ಕಾಳು ಮೆಣಸು ಸೇರಿದರೆ, ಫಸಲ್ ವಿಮಾ ಯೋಜನೆ ಯಲ್ಲಿ ಅಧಿಸೂಚಿತ ಭತ್ತ ಸೇರಿದೆ.
ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ
ಫಸಲ್ ವಿಮಾ ಯೋಜನೆಯಲ್ಲಿ ಅಧಿಸೂಚಿತ ಘಟಕದಲ್ಲಿ ಸಂಭವಿಸುವ ಹವಾ ಮಾನ ವೈಪರಿತ್ಯಗಳಾದ ಹೆಚ್ಚಿನ ಮಳೆ, ನೆರೆ, ಪ್ರವಾಹದಿಂದ ಬೆಳೆ ಮುಳು ಗಡೆ, ದೀರ್ಘಕಾಲ ತೇವಾಂಶ ಕೊರತೆ, ತೀವ್ರ ಬರಗಾಲ ಮುಂತಾದುವುಗಳಿಂದ ಬಿತ್ತನೆಯಿಂದ ಕಟಾವಿನ ಪೂರ್ವ ದವರೆಗೆ ನಿರೀಕ್ಷಿತ ಇಳುವರಿಯು, ಪ್ರಾರಂಭಿಕ ಇಳುವರಿಯ ಶೇ. 50ಕ್ಕಿಂತ ಕಡಿಮೆ ಇದ್ದಲ್ಲಿ ಅಥವಾ ಬೆಳೆ ನಷ್ಟ ಕಂಡು ಬಂದಲ್ಲಿ ಮುಂಚಿತವಾಗಿ ವಿಮೆ ಮಾಡಿದ ರೈತರಿಗೆ ಶೇ.25ರಷ್ಟು ಬೆಳೆ ನಷ್ಟ ದೊರೆ ಯುತ್ತದೆ. ಬೆಳೆ ಕಟಾವಿನ ವಾಸ್ತವಿಕ ಇಳುವರಿ ಆಧಾರದ ಮೇಲೆ ಅಂತಿಮ ಬೆಳೆ ನಷ್ಟ ಪರಿಹಾರದಲ್ಲಿ ಹೊಂದಾಣಿಕೆ ಮಾಡಲಾಗುತ್ತದೆ. ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿಯಾದಲ್ಲಿ ವೈಯಕ್ತಿಕ ಪರಿಹಾರ ದೊರಕುತ್ತದೆ.
ಕಟಾವಿನ ಬಳಿಕ ಬೆಳೆಯನ್ನು ಜಮೀನಿ ನಲ್ಲಿ ಒಣಗಲು ಬಿಟ್ಟ ಸಂದರ್ಭದಲ್ಲಿ (14 ದಿನಗಳ ಒಳಗೆ) ಚಂಡಮಾರುತ, ಅಕಾಲಿಕ ಮಳೆಯಿಂದೆಲ್ಲ ಬೆಳೆ ನಾಶವಾ ದಲ್ಲಿ ವೈಯಕ್ತಿಕ ಪರಿಹಾರ ದೊರೆಯಲಿದೆ. ಎರಡೂ ಸಂದರ್ಭಗಳಲ್ಲಿ ರೈತರು ವಿಮಾ/ ಆರ್ಥಿಕ ಸಂಸ್ಥೆ ಅಥವಾ ಕೃಷಿ, ತೋಟಗಾರಿಕೆ ಇಲಾಖೆ ಕಚೇರಿಗೆ 72 ಗಂಟೆಗಳ ಒಳಗಾಗಿ ಬೆಳೆ ಹಾನಿ ವಿವರಗಳನ್ನು ಒದಗಿಸಬೇಕು. ಮಳೆ ಅಭಾವ ಅಥವಾ ಪ್ರತಿಕೂಲ ಹವಾ ಮಾನ ಪರಿಸ್ಥಿತಿಯಲ್ಲಿ ಅಧಿಸೂಚಿತ ಘಟಕ ದಲ್ಲಿ ಶೇ. 75ರಷ್ಟು ಬಿತ್ತನೆಯಾದಲ್ಲಿ ವಿಮೆ ಮಾಡಿಸಿದ ರೈತರಿಗೆ ವಿಮಾ ಮೊತ್ತದ ಶೇ.25ರಷ್ಟು ಪರಿಹಾರ ಸಿಗುತ್ತದೆ.
2019 ಜೂನ್ ಅಂತ್ಯದೊಳಗೆ ಬೆಳೆ ವಿಮೆ ನೋಂದಾ ವಣೆ ಮಾಡಿಕೊಂಡವರಿಗೆ 2020ರ ಮಾರ್ಚ್ ಒಳಗೆ ಬಹುತೇಕ ಹಣ ಸಂದಾ ಯವಾಗಿದೆ. ಪ್ರಸಕ್ತ ಸಾಲಿನ ವಿಮೆ ಕಂತು ಪಾವತಿಸಿದವರಿಗೆ ವಿಮಾ ಮೊತ್ತ 2020-21ರ ಮಾರ್ಚ್ ಅಂತ್ಯಕ್ಕೆ ಸಿಗಲಿದೆ.
ಅರ್ಜಿ ತುಂಬುವ ಸಂದರ್ಭ ಮೊಬೈಲ್ ಸಂಖ್ಯೆ ನಮೂದಿಸಿದಲ್ಲಿ ಖಾತೆಗೆ ಹಣ ಬಿದ್ದ ಕುರಿತು ಸಂದೇಶ ಬರು ತ್ತದೆ. ಬಾರದೇ ಇದ್ದಲ್ಲಿ ಬ್ಯಾಂಕ್, ಆರ್ಥಿಕ ಸಂಸ್ಥೆಗಳಲ್ಲಿ ಮಾಹಿತಿ ಪಡೆಯಬಹುದು. ಫಸಲ್ ವಿಮಾ ಯೋಜನೆಯಲ್ಲಿ ಗ್ರಾ.ಪಂ. ಹಾಗೂ ಸ್ಥಳೀಯಾಡಳಿತ ಸಂಸ್ಥೆಗಳು ಅಧಿ ಸೂಚಿತ ಸ್ಥಳಗಳೆಂದು ಈಗಾಗಲೇ ಗುರುತಿಸಲ್ಪಟ್ಟಿದ್ದರಿಂದ ಅದೇ ಪ್ರಕಾರ ವಿಂಗಡಣೆ ಜಾರಿಯಲ್ಲಿರುತ್ತದೆ ಎಂದು ಕೃಷಿ ಇಲಾಖೆ ತಿಳಿಸಿದೆ.
ಬೆಳೆ ಸಾಲ ಪಡೆಯದ ರೈತರು ಬಿತ್ತನೆ ಪೂರ್ವದಲ್ಲಿ ಬೆಳೆ ವಿಮೆಗೆ
ಬೆಳೆ ಸಾಲ ಪಡೆಯದ ರೈತರು ಬಿತ್ತನೆ ಪೂರ್ವದಲ್ಲಿ ಬೆಳೆ ವಿಮೆಗೆ ನೋಂದಾಯಿಸಿಕೊಳ್ಳಬಹುದು. ಸರಕಾರ ಮತ್ತು ವಿಮೆ ಇಲಾಖೆ ನಡುವೆ ಒಪ್ಪಂದದಂತೆ ಅಧಿಸೂಚಿತ ಗ್ರಾ.ಪಂ. ವ್ಯಾಪ್ತಿಯಲ್ಲಿ ಮಳೆ ಮಾಪನ, ಉಷ್ಣಾಂಶ ಆಧಾರದಲ್ಲಿ ವಿಮೆ ಪರಿಹಾರ ವಿತರಿಸುತ್ತದೆ. ಅವಶ್ಯವಿರುವ ರೈತರು ಮಾತ್ರ ವಿಮೆ ಮಾಡಿ ಸುತ್ತಿದ್ದು. ಜಿಲ್ಲೆಯಲ್ಲಿ ಬಹುತೇಕ ಇಳುವರಿ ಹೆಚ್ಚು ಬರುವುದರಿಂದ ದೊಡ್ಡ ಮಟ್ಟದ ನಷ್ಟ ಸಂಭವಿಸದೆ ವಿಮೆ ಮೊತ್ತ ಸಂದಾಯವಾಗುವುದು ಕಡಿಮೆ. ಅಧಿಸೂಚಿತ ಸ್ಥಳಗಳೆಂದು ಗುರುತಿಸಲ್ಪಟ್ಟಿದ್ದರಿಂದ ಅದೇ ಪ್ರಕಾರ ವಿಮೆ ಯಲ್ಲಿ ವಿಂಗಡಣೆ ಜಾರಿಯಲ್ಲಿರುತ್ತದೆ. ಕೃಷಿ ಕಚೇರಿಗಳಿಂದ ನೇರ ಮಾಹಿತಿ ಪಡೆದುಕೊಳ್ಳಬಹುದು.
-ಸತೀಶ್ ಸಹಾಯಕ ನಿರ್ದೇಶಕರು, ಕೃಷಿ ಇಲಾಖೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.