ಕಿಯೋನಿಕ್ಸ್ ಸಂಸ್ಥೆಯ ಅಸ್ತಿತ್ವ ತೋರಿಸಿಕೊಡುವ ಕಾರ್ಯ: ಹರಿಕೃಷ್ಣ
Team Udayavani, Jun 18, 2020, 5:12 AM IST
ಬಂಟ್ವಾಳ: ಬಿಜೆಪಿಯ ಉನ್ನತ ಮಟ್ಟದ ನಾಯಕರು ನೀಡಿದ ಹೊಸ ಹುದ್ದೆಯನ್ನು ಪಕ್ಷ, ಕಾರ್ಯಕರ್ತರಿಗೆ ಅರ್ಪಿಸಿ, ತನ್ನ ಕೆಲಸದ ಮೂಲಕ ರಾಜ್ಯದಲ್ಲಿ ಕಿಯೋನಿಕ್ಸ್ ಸಂಸ್ಥೆಯ ಅಸ್ತಿತ್ವವನ್ನು ತೋರಿಸಿಕೊಡುವ ಕಾರ್ಯ ಮಾಡುತ್ತೇನೆ ಎಂದು ಕಿಯೋನಿಕ್ಸ್ ಸಂಸ್ಥೆಯ ನೂತನ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಹೇಳಿದರು.
ಅವರು ಕಿಯೋನಿಕ್ಸ್ ಅಧ್ಯಕ್ಷರಾಗಿ ಬುಧವಾರ ಮೊದಲ ಬಾರಿಗೆ ಬಂಟ್ವಾಳಕ್ಕೆ ಆಗಮಿಸಿದ್ದು, ಬಿ.ಸಿ. ರೋಡ್‌ನ ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ವಾರ್ಷಿಕವಾಗಿ ಸುಮಾರು 600 ಕೋ. ರೂ.ಗಳ ವ್ಯವಹಾರ ಮಾಡುವಂತಹ ಕಿಯೋನಿಕ್ಸ್ ಸಂಸ್ಥೆಯ ಮೂಲಕ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿ, ಮಂಗಳೂರಿ ನಲ್ಲಿ ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳ ಕೇಂದ್ರವನ್ನು ತೆರೆದು ಐಟಿ ಕಂಪೆನಿಗಳ ಸ್ಥಾಪನೆಯ ನಿಟ್ಟಿನಲ್ಲಿ ಪ್ರಯತ್ನಿಸಲಿದ್ದೇನೆ ಎಂದರು.
ಶಾಸಕ ರಾಜೇಶ್ ನಾೖಕ್ ಉಳಿಪ್ಪಾಡಿ ಗುತ್ತು ಮಾತನಾಡಿ, ಪಕ್ಷದ ಸಂಘಟನೆ ದೃಷ್ಟಿ ಯಿಂದ ಸಾಕಷ್ಟು ಕೆಲಸ ಮಾಡಿದ ಹರಿಕೃಷ್ಣ ಬಂಟ್ವಾಳ ಅವರಿಗೆ ಹಿರಿಯರು ಹೊಸ ಅವಕಾಶ ನೀಡಿದ್ದು, ಐಟಿ-ಬಿಟಿ ಕ್ಷೇತ್ರ ಕಿಯೋನಿಕ್ಸ್ ಅಧೀನಕ್ಕೆ ಬರುವುದರಿಂದ ಯುವಕರಿಗೆ ಉದ್ಯೋಗ ದೊರಕಿಸುವಲ್ಲಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವಿದೆ. ಐಟಿ-ಬಿಟಿ ಸಚಿವ, ಡಿಸಿಎಂ ಡಾ| ಅಶ್ವತ್ಥ ನಾರಾಯಣ್ ಅವರು ಕೂಡ ಬೆಂಬಲ ನೀಡುವ ಭರವಸೆ ನೀಡಿದ್ದಾರೆ ಎಂದರು.
ಬುಡಾ ಅಧ್ಯಕ್ಷ ಬಿ. ದೇವದಾಸ್ ಶೆಟ್ಟಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿಗಳಾದ ಸತೀಶ್ ಕುಂಪಲ, ಜಯಶ್ರೀ ಉಪಸ್ಥಿತರಿದ್ದರು. ಬಂಟ್ವಾಳ ಬಿಜೆಪಿ ಅಧ್ಯಕ್ಷ ದೇವಪ್ಪ ಪೂಜಾರಿ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ನಿರೂಪಿಸಿದರು.
ಹೆಚ್ಚಿನ ಗದ್ದಲ ಬೇಡ
ಚೀನ ಕುತಂತ್ರಕ್ಕೆ ಭಾರತೀಯ ಯೋಧರು ಹುತಾತ್ಮರಾಗಿರುವ ಇಂತಹ ಬೇಸರದ ಸಂದರ್ಭ ಯಾವುದೇ ರೀತಿಯ ಪಟಾಕಿ ಸಿಡಿಸಿ ಹೆಚ್ಚಿನ ಗದ್ದಲದ ಮೂಲಕ ಅಭಿನಂದನೆ ಸಲ್ಲಿಸುವುದು ಬೇಡ ಎಂದು ಪ್ರಮುಖರಲ್ಲಿ ಮನವಿ ಮಾಡಿದ್ದೆ. ಇದು ಸಂಭ್ರಮಿಸುವ ಕಾಲವಲ್ಲ ಎಂದು ಹರಿಕೃಷ್ಣ ಬಂಟ್ವಾಳ ತಿಳಿಸಿದರು. ಕಾರ್ಯಕ್ರಮದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಲಾಯಿತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.