ಇಂದು ಪಿಯು ಇಂಗ್ಲಿಷ್ ಪರೀಕ್ಷೆ: ಕೆಎಸ್ಸಾರ್ಟಿಸಿ ಬಸ್ ಮಾರ್ಗ
Team Udayavani, Jun 18, 2020, 5:36 AM IST
ಪುತ್ತೂರು/ಸುಳ್ಯ: ದ್ವಿತೀಯ ಪಿಯುಸಿ ಆಂಗ್ಲ ಭಾಷಾ ಪರೀಕ್ಷೆ ಬರೆಯಲು ವಿವಿಧ ಕೇಂದ್ರಗಳಿಗೆ ಆಗಮಿಸುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಜೂ. 18ರಂದು ಕೆಎಸ್‌ಆರ್‌ಟಿಸಿ ವತಿಯಿಂದ ಬಸ್ ವ್ಯವಸ್ಥೆ ಕಲ್ಪಿಸಿದ್ದು, ಪರೀಕ್ಷಾ ಪ್ರವೇಶಪತ್ರ ತೋರಿಸಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ.
ನಿಗದಿತ ಪರೀಕ್ಷಾ ಕೇಂದ್ರಕ್ಕೆ ತಲುಪುವ ನಿಟ್ಟಿನಲ್ಲಿ ಬಸ್ ವ್ಯವಸ್ಥೆ ಇದ್ದು, ಪ.ಪೂ. ಶಿಕ್ಷಣ ಇಲಾಖೆ ವತಿಯಿಂದ ಸೂಚಿಸಲಾದ ಮಾರ್ಗಗಳಲ್ಲಿ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು. ಶಿಕ್ಷಣ ಇಲಾಖೆ ನಿಯೋಜಿಸಿದ ನೋಡಲ್ ಅಧಿಕಾರಿಗಳ ಮಾರ್ಗದರ್ಶನದಂತೆ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ಹಾಗೂ ಪರೀಕ್ಷೆ ಮುಗಿದ ಬಳಿಕ ವಾಪಸಾತಿಗೆ ಬಸ್ ವ್ಯವಸ್ಥೆ ಇದೆ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಪ್ರಕಟನೆ ತಿಳಿಸಿದೆ.
ಕೊಕ್ಕಡ-ನೆಲ್ಯಾಡಿ, ಪಟ್ರಾಮೆ-ನೆಲ್ಯಾಡಿ, ಗುಂಡ್ಯ-ನೆಲ್ಯಾಡಿ, ಆಲಂಕಾರು-ಕಡಬ, ಬಿಳಿನೆಲೆ- ಕಡಬ, ಎಲಿಮಲೆ-ಸುಬ್ರಹ್ಮಣ್ಯ, ಪಾಜಪಲ್ಲ- ಸುಬ್ರಹ್ಮಣ್ಯ, ನಿಂತಿಕಲ್ಲು- ಸುಬ್ರಹ್ಮಣ್ಯ, ಪೈಲಾರು-ಸುಳ್ಯ, ಕಲ್ಮಡ್ಕ- ಸುಳ್ಯ, ಮಾಡಾವು-ಸುಳ್ಯ, ಮರ್ಕಂಜ- ಸುಳ್ಯ, ಮಂಡೆಕೋಲು-ಸುಳ್ಯ, ಗುತ್ತಿಗಾರು-ಸುಳ್ಯ, ಆರ್ಲಪದವು-ಪುತ್ತೂರು, ಸುಳ್ಯಪದವು-ಕುಂಬ್ರ- ಪುತ್ತೂರು, ಗಾಳಿಮುಖ- ಕುಂಬ್ರ- ಪುತ್ತೂರು, ಸಾರಡ್ಕ- ಅಡ್ಯನಡ್ಕ-ವಿಟ್ಲ- ಪುತ್ತೂರು, ಸವಣೂರು- ನೆಹರೂನಗರ, ನೆಟ್ಟಣಿಗೆ ಮುಟ್ನೂರು-ನೆಹರೂನಗರ, ಈಶ್ವರಮಂಗಲ- ನೆಹರೂನಗರ, ಪೆರ್ಲಂಪಾಡಿ- ಕುಂಬ್ರ-ಪುತ್ತೂರಿಗೆ ಬಸ್ ಸಂಚಾರ ವ್ಯವಸ್ಥೆ ಮಾಡಲಾಗಿದೆ.
ಬೆಳ್ತಂಗಡಿ: ಬಸ್ ಸೇವೆ
ಬೆಳ್ತಂಗಡಿ: ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಬೆಳ್ತಂಗಡಿ ವ್ಯಾಪ್ತಿಯಲ್ಲಿ ಪಿಯುಸಿ ಪರೀಕ್ಷೆ ಬರೆಯಲಿರುವ 4 ಸೆಂಟರ್‌ಗಳ ವ್ಯಾಪ್ತಿಗೆ ಒಳಪಟ್ಟಂತೆ ಕೆಎಸ್‌ಆರ್‌ಟಿಸಿ ಧರ್ಮಸ್ಥಳ ಡಿಪೋದಿಂದ ಬಸ್ ಸೇವೆ ಒದಗಿಸಲಾಗಿದೆ.
ಕೊಕ್ಕಡ- ನೆಲ್ಯಾಡಿ, ಧರ್ಮಸ್ಥಳ ವಾಣಿ ಪ.ಪೂ. ಕಾಲೇಜು, ಕನ್ಯಾಡಿ-ವಾಣಿ ಪ.ಪೂ. ಕಾಲೇಜು, ಉಜಿರೆ-ವಾಣಿ ಕಾಲೇಜು, ಚಾರ್ಮಾಡಿ-ವಾಣಿ ಕಾಲೇಜು, ಪಟ್ರಮೆ-ನೆಲ್ಯಾಡಿ, ಗುಂಡ್ಯ-ನೆಲ್ಯಾಡಿ, ಆಲಂಕಾಡು- ಕಡಬ, ಪುದುವೆಟ್ಟು- ಬೆಳ್ತಂಗಡಿ, ಕೊಲ್ಲಿ-ಬೆಳ್ತಂಗಡಿ, ದಿಡುಪೆ-ಬೆಳ್ತಂಗಡಿ, ಮಿಯಾರ್, ಕಾಯರ್ತಡ್ಕ-ಬೆಳ್ತಂಗಡಿ, ಶಿಬಾಜೆ-ಬೆಳ್ತಂಗಡಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬಿ.ಸಿ. ರೋಡ್ ಘಟಕದಿಂದ
ಬಂಟ್ವಾಳ: ವಿದ್ಯಾರ್ಥಿಗಳಿಗೆ ಬಂಟ್ವಾಳ ತಾಲೂಕಿನ ವಿವಿಧ ಕೇಂದ್ರಗಳಿಗೆ ಆಗಮಿಸಲು ಕೆಎಸ್‌ಆರ್‌ಟಿಸಿ ಬಿ.ಸಿ. ರೋಡ್ ಘಟಕದಿಂದ ಒಟ್ಟು 20 ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ. ಜತೆಗೆ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ರೂಟ್ ಬಸ್‌ಗಳನ್ನು ಕೂಡ ವ್ಯವಸ್ಥಿತ ರೀತಿಯಲ್ಲಿ ಸಂಚರಿಸಲು ಕ್ರಮ ಕೈಗೊಳ್ಳಲಾಗಿದೆ.
ವಿಟ್ಲ ಕೇಂದ್ರಕ್ಕೆ ಬಾಯಾರು ಭಾಗದಿಂದ 2 ಬಸ್‌ಗಳು, ಸಾರಡ್ಕ ಭಾಗದಿಂದ 3 ಬಸ್‌ಗಳು, ಆನೆಕಲ್ ಭಾಗದಿಂದ 2 ಬಸ್‌ಗಳು, ಜತೆಗೆ ಪಕಳಕುಂಜ, ಮಿತ್ತನಡ್ಕ ಭಾಗದಿಂದ ಬಸ್‌ಗಳಿರುತ್ತವೆ.
ಕುರ್ನಾಡು ಕೇಂದ್ರಕ್ಕೆ ಪುಣ್ಯಕೋಟಿ ನಗರದಿಂದ 2 ಬಸ್‌ಗಳು, ಪಾತೂರು ಭಾಗದಿಂದ ಒಂದು ಬಸ್, ವಾಮದಪದವು ಕೇಂದ್ರಕ್ಕೆ ಮಡಂತ್ಯಾರು-ಪುಂಜಾಲಕಟ್ಟೆ ಭಾಗದಿಂದ ಬಸ್‌ಗಳು, ಬಂಟ್ವಾಳ ಕೇಂದ್ರಕ್ಕೆ ವಗ್ಗ-ಕಕ್ಯಪದವು ಭಾಗದಿಂದ ಬಸ್‌ಗಳಿರುತ್ತವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು
Bantwala: ಶಾಲಾ ವಾಹನ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಸ್ಕೂಟರ್ ಸವಾರ ಮೃತ್ಯು
Sullia: ಬಿಎಸ್ಸೆನ್ನೆಲ್ ಟವರ್‌ಗೆ ಸೋಲಾರ್ ಪವರ್!
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
ಧರ್ಮಾಧಿಕಾರಿ ಡಾ| ಹೆಗ್ಗಡೆ ಸರ್ವಜನರ ವಿಕಾಸಕ್ಕೆ ಸಾಕ್ಷಿ
MUST WATCH
ಹೊಸ ಸೇರ್ಪಡೆ
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್ ಸಾಥ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.