ಸೀಲ್‌ಡೌನ್‌ ಜಾರಿ: ಇಬ್ಬಗೆ ನೀತಿ ಬೇಡ

Team Udayavani, Jun 18, 2020, 6:49 AM IST

jaari neeti

ರಾಮನಗರ: ಕೋವಿಡ್‌-19 ಸೋಂಕಿತರ ವಾಸಸ್ಥಳ ಸೀಲ್‌ಡೌನ್‌ ವಿಚಾರದಲ್ಲಿ ಜಿಲ್ಲಾಡಳಿತ ಮತ್ತು ಸ್ಥಳೀಯ ಆಡಳಿತ ಗಳು ತಾರತಮ್ಯ ಮಾಡಬಾರದು. ಇಬ್ಬಗೆ ನೀತಿ ಸರಿಯಲ್ಲ. ಜಿಲ್ಲಾಧಿಕಾರಿಗಳು ತಕ್ಷಣ ಈ ಬಗ್ಗೆ ನಿಗಾವಹಿಸಿ ಅಗತ್ಯ  ಕ್ರಮ ತೆಗೆದುಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ಸೋಮವಾರ ಪ್ರತಿಭಟನೆ ಅನಿವಾರ್ಯ ಎಂದು ಬಿಜೆಪಿ ರಾಜ್ಯ ವಕ್ತಾರ ಅಶ್ವತ್ಥನಾರಾಯಣಗೌಡ ಹೇಳಿದರು.

ನಗರದ ಬಲಮುರಿ ಗಣಪತಿ ದೇವಾಲಯದಲ್ಲಿ ಪಕ್ಷದ ಕಾರ್ಯಕರ್ತರೊಂದಿಗೆ ಪೂಜೆಯಲ್ಲಿ ಪಾಲ್ಗೊಂಡು ತಮ್ಮ  ಜನ್ಮದಿನ ಆಚರಿಸಿಕೊಂಡ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ರಾಮನಗರದ ಕುಂಬಾರ ಬೀದಿಯಲ್ಲಿ 28 ದಿನಗಳ ಸೀಲ್‌ಡೌನ್‌ ಜಿಲ್ಲಾಡಳಿತ ಆದೇಶ ನೀಡಿದೆ.  ಆದರೆ ಕನಕ ಪುರದಲ್ಲಿ ಸೀಲ್‌ಡೌನ್‌ ಕೆಲವೇ ದಿನಗಳಿಗೆ ತೆರವಾಗಿದೆ. ಈ ಬಗ್ಗೆ ನಾಗರಿಕರು ತಮ್ಮ ಬಳಿ ದೂರಿದ್ದಾರೆ. ಸೀಲ್‌ಡೌನ್‌ ವಿಚಾರದಲ್ಲಿ ಒಂದೊಂದು ಸ್ಥಳದಲ್ಲಿ ಒಂದೊಂದು ನೀತಿ ಸರಿ ಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಉದ್ದೇಶ ಪೂರ್ವಕ?: ಸೋಂಕಿತರ ಸ್ಥಳಗಳಲ್ಲಿ ಸೀಲ್‌ ಡೌನ್‌ ನಿಯಮಗಳಿಗೆ ಹೋಲಿಸಿದರೆ ರಾಮನಗರದ ಎಂ.ಜಿ. ರಸ್ತೆಯಲ್ಲಿ ಸುದೀರ್ಘ‌ ಕಾಲ ಲಾಕ್‌ಡೌನ್‌ ವಿಧಿಸಿರುವುದು ಉದ್ದೇಶಪೂರ್ವಕ ಎಂಬ ಅನುಮಾನವನ್ನು ಸ್ಥಳೀಯರು ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿ, ಈ ವಿಚಾರದಲ್ಲಿ ಜಿಲ್ಲಾ ಧಿಕಾರಿಗಳ ಗಮನ ಸೆಳೆಯುವುದಾಗಿ ಭರವಸೆ ನೀಡಿದರು.

ಜಿಲ್ಲಾ ಕ್ರೀಡಾಂಗಣದ ಬಗ್ಗೆಯೂ ದೂರು: ಲಾಕ್‌ಡೌನ್‌ ಬಹುತೇಕ ತೆರವಾಗಿದ್ದರೂ, ಜಿಲ್ಲಾ ಕ್ರೀಡಾಂಗಣದಲ್ಲಿ  ಬೆಳಗಿನ ಜಾವ ಜಾಗಿಂಗ್‌ ಅಥವಾ ಕ್ರೀಡೆಗಳ ಅಭ್ಯಾಸಕ್ಕೆ ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ನಾಗರಿಕರು ದೂರಿದರು. ಈ ವಿಚಾರದ ಬಗ್ಗೆಯೂ ತಾವು ಅಧಿಕಾರಿಗಳ ಗಮನ ಸೆಳೆಯುವು ದಾಗಿ ಪ್ರತಿಕ್ರಿಯಿಸಿದರು.

ಬಲಮುರಿ ಗಣಪತಿ  ದೇವಾಲ ಯದ ನಂತರ ಅವರು ನಾಗರಿಕರಿಗೆ ಉಚಿತ ಮಾಸ್ಕ್ ವಿತರಿಸಿ ದರು. ಅರ್ಚಕರಹಳ್ಳಿಯಲ್ಲಿರುವ ನಂದಗೋಕುಲ ವೃದಾಟಛಿಶ್ರಮಕ್ಕೆ ಭೇಟಿ ನೀಡಿ ತಮ್ಮ ವೈಯಕ್ತಿಕ ದೇಣಿಗೆಯ ಚೆಕ್‌ ವಿತರಿಸಿದರು. ಬಿಜೆಪಿ ಪ್ರಮುಖ ಪ್ರವೀಣ್‌ಗೌಡ,  ಬಿ.ನಾಗೇಶ್‌, ರುದ್ರದೇವರು, ಪಿ.ವಿ.ಬದರಿನಾಥ್‌, ಪಿ.ಶಿವಾನಂದ, ಬಿಜೆಪಿ ಮಂಜು, ಚಂದ್ರಶೇಖರ ರೆಡ್ಡಿ, ರಾಮಾಂಜನಿ ಮುಂತಾದವರು ಹಾಜರಿದ್ದರು.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Yogeshwar

C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!

CM-Ramanagara

By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

Ramanagara: ಆರು ಟ್ರಾನ್ಸ್‌‌ ಫಾರ್ಮರ್ ಗಳ ಕಳವು

HDD-Gowda

Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್‌.ಡಿ.ದೇವೇಗೌಡ ಭವಿಷ್ಯ

Nikhil-CPY

By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್‌ ಕುಮಾರಸ್ವಾಮಿಗೋ?

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.