ಅಂಚೆ ಪತ್ರ ಬಟವಾಡೆ ಮಾಡಲು ತೆರಳಿದ ಪೋಸ್ಟ್ಮ್ಯಾನ್ ಮೇಲೆ ಹಲ್ಲೆ
Team Udayavani, Jun 18, 2020, 10:37 AM IST
ಮಂಗಳೂರು: ರಿಜಿಸ್ಟರ್ಡ್ ಪೋಸ್ಟ್ ಬಟವಾಡೆ ಮಾಡಲು ಮನೆಗೆ ತೆರಳಿದ ಪೋಸ್ಟ್ ಮ್ಯಾನ್ ಮೇಲೆ ಯುವಕನೊಬ್ಬ ಹಲ್ಲೆ ನಡೆಸಿ ದ್ವಿಚಕ್ರ ವಾಹನವನ್ನು ಜಖಂಗೊಳಿಸಿದ ಘಟನೆ ನಗರದ ಉರ್ವ ಮಠದಕಣಿಯಲ್ಲಿ ಜೂ. 17ರಂದು ನಡೆದಿದೆ. ಅಶೋಕನಗರ ಅಂಚೆ ಕಚೇರಿಯ ಪೋಸ್ಟ್ ಮ್ಯಾನ್ ಕೋಟೆಕಾರ್ ಕೊಲ್ಯ ನಿವಾಸಿ ದಿನೇಶ್ (49) ಹಲ್ಲೆಗೊಳಗಾದವರು. ಮಠದಕಣಿಯ ಮನೀಶ್ (20) ಪ್ರಕರಣದ ಆರೋಪಿ.
ದಿನೇಶ್ ಅವರು ಕಳೆದ 19 ವರ್ಷಗಳಿಂದ ಪೋಸ್ಟ್ಮ್ಯಾನ್ ಆಗಿ ಕೆಲಸ ನಿರ್ವಹಿಸುತ್ತಿದ್ದು, ಮಂಗಳವಾರ ಮನೀಶ್ಗೆ ಬಂದ ರಿಜಿಸ್ಟರ್ಡ್ ಪೋಸ್ಟ್ ಬಟವಾಡೆ ಮಾಡಲು ಮಠದಕಣಿಯ ಆತನ ಮನೆಗೆ ತೆರಳಿದ್ದರು. ಟಪಾಲು ಬಟವಾಡೆ ಮಾಡುವ ಸಂದರ್ಭದಲ್ಲಿ ಪೋಸ್ಟ್ಮ್ಯಾನ್ ದಿನೇಶ್ ಅವರನ್ನು ಮನೀಶ್ ಅವಾಚ್ಯ ಶಬ್ದಗಳಿಂದ ಬೈದು, ಕೈಯಿಂದ ಹಲ್ಲೆ ನಡೆಸಿದ್ದಲ್ಲದೆ, ಬಳಿಕ ಕಬ್ಬಿಣದ ರಾಡ್ ಹಿಡಿದು ಬೆದರಿಕೆ ಹಾಕಿ, ದಿನೇಶ್ ಅವರ ಬೈಕ್ನ್ನು ರಾಡ್ನಿಂದ ಜಖಂಗೊಳಿಸಿ, ಅಂಚೆ ಕಾಗದ ಪತ್ರಗಳನ್ನು ಎಸೆದಿದ್ದಾನೆ ಎಂದು ಆರೋಪಿಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿದ್ದರೂ, ಅವರ ಮುಂದೆಯೇ ಮನೀಶ್ ಯಾವುದೇ ಅಂಜಿಕೆಯಿಲ್ಲದೆ ರಾಡ್ ಹಿಡಿದು ನಿಂತಿದ್ದು, ಈ ವೀಡಿಯೋ ದೃಶ್ಯ ವೈರಲ್ ಆಗಿದೆ. ಈ ಘಟನೆಯಿಂದ ತನಗೆ 35,000 ರೂ. ನಷ್ಟ ಸಂಭವಿಸಿದೆ ಎಂದು ಪೋಸ್ಟ್ ಮ್ಯಾನ್ ದಿನೇಶ್ ಅವರು ದೂರಿನಲ್ಲಿ ತಿಳಿಸಿದ್ದಾರೆ. ಆರೋಪಿ ಮನೀಶ್ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವಂತೆ ವರ್ತಿಸುತ್ತಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದ್ದು, ಬರ್ಕೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.