ಬಲಿದಾನ ವ್ಯರ್ಥವಾಗಲು ಬಿಡಲ್ಲ ; ಭಾರತ ಶಾಂತಿ ಬಯಸುತ್ತದೆ, ಕೆಣಕಿದರೆ ತಿರುಗೇಟು ಖಚಿತ: ಮೋದಿ
ನವದೆಹಲಿ: “”ದೇಶದ ಒಂದೇ ಒಂದು ಇಂಚು ಭೂಭಾಗವನ್ನೂ ಯಾರಿಗೂ ಬಿಟ್ಟುಕೊಡುವುದಿಲ್ಲ… ಯಾವುದೇ ಕಾರಣಕ್ಕೂ ದೇಶದ ಯೋಧರ ಬಲಿ ದಾನವೂ ವ್ಯರ್ಥವಾಗಲು ಬಿಡುವುದಿಲ್ಲ.” ಇದು ನೆರೆಯ ಕಿರಿಕ್ ಚೀನಾಗೆ ಪ್ರಧಾನಿ ನರೇಂದ್ರ ಮೋದಿ ಅವರ ನೇರ, ಖಡಕ್ ಸಂದೇಶ. ಬುಧವಾರ ಮಧ್ಯಾಹ್ನ ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ವಿಡಿಯೋ ಕಾನ್ಫರೆನ್ಸ್ ಆರಂಭವಾಗುವ ಮುನ್ನ 20 ಯೋಧರ ಬಲಿದಾನದ ಬಗ್ಗೆ ಮಾತನಾಡಿದ ಮೋದಿ
ಅವರು, ಚೀನಾಗೆ ಕಠಿಣ ಸಂದೇಶವನ್ನೇ ರವಾನೆ ಮಾಡಿದ್ದಾರೆ .
“”ಭಾರತದ ಸೌರ್ವಭೌಮತೆ ಮತ್ತು ಸಮಗ್ರತೆ ನಮಗೆ ಸರ್ವೋಚ್ಛವಾದುದು. ಇದನ್ನು ರಕ್ಷಿಸುವ ನಮ್ಮನ್ನು ಯಾರೊಬ್ಬರೂ ತಡೆಯಲು ಸಾಧ್ಯವಿಲ್ಲ.
ಯಾರೊಬ್ಬರೂ ಈ ಬಗ್ಗೆ ಯಾವುದೇ ಭ್ರಮೆ ಅಥವಾ ಅನುಮಾನವನ್ನೂ ಇರಿಸಿಕೊಳ್ಳಬೇಕಾಗಿಲ್ಲ” ಎಂದು ಖಡಕ್ಕಾಗಿ ನುಡಿದರು. “”ಭಾರತ ಎಂದಿಗೂ ಶಾಂತಿ ಬಯಸುತ್ತದೆ, ಆದರೆ, ನಮ್ಮನ್ನು ಕೆಣಕಿದರೆ ಮಾತ್ರ, ಅದು ಎಂಥದ್ದೇ ಪರಿಸ್ಥಿತಿ ಇರಲಿ ಸುಮ್ಮನಿರುವ ಮಾತೇ ಇಲ್ಲ. ಹಾಗೆಯೇ, ನಾವು ಯಾರೊಬ್ಬರ ಬಳಿಯೂ ಕಾಲು ಕೆರೆದುಕೊಂಡು ಜಗಳಕ್ಕೆ ಹೋಗುವುದೂ ಇಲ್ಲ, ಆದರೆ, ನಮ್ಮ ಸಾರ್ವಭೌಮತೆ ಮತ್ತು ಅಖಂಡತೆ ವಿಚಾರದಲ್ಲಿ ರಾಜಿ ಪ್ರಶ್ನೆಯೇ ಇಲ್ಲ” ಎಂದು ಚೀನಾಗೆ ಎಚ್ಚರಿಕೆ ನೀಡಿದರು.
ಗಡಿಯಲ್ಲಿ ಹುತಾತ್ಮರಾದ ಯೋಧರಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯೋಧರಿಗೆ ಇಡೀ ದೇಶವೇ ನಮನ ಸಲ್ಲಿಸಿದೆ.
ಹೊಸ ಫೋಟೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
Waqf ವಿಷಯ ಮುಗಿದು ಹೋಗಿದೆ.. ಬಿಜೆಪಿಯವರಿಂದ ಗೊಂದಲ: ಲಕ್ಷ್ಮಣ ಸವದಿ
Dandeli: ಅಪರಿಚಿತ ವಾಹನ ಡಿಕ್ಕಿ; ಕರು ಸಾವು
Covid ಗಿಂತ ಬಿಜೆಪಿ ಭ್ರಷ್ಟಾಚಾರದಿಂದ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ: ಖಂಡ್ರೆ
Delhi: ಕ್ಷುಲ್ಲಕ ಕಾರಣಕ್ಕೆ 19ರ ಯುವಕನ ಗುಂಡಿಕ್ಕಿ ಹ*ತ್ಯೆಗೈದ ಅಪ್ರಾಪ್ತರು!!
BBK11: ಬಿಗ್ಬಾಸ್ ಆಟ ನಿಲ್ಲಿಸಿದ ಖ್ಯಾತ ಸ್ಪರ್ಧಿ.. ಈ ವಾರ ಆಚೆ ಬರುವುದು ಇವರೇ