ಮೀನು ಅಲಭ್ಯ: ಗಗನಕ್ಕೇರಿದ ಒಣಮೀನಿನ ಬೆಲೆ
Team Udayavani, Jun 19, 2020, 5:45 AM IST
ಮಲ್ಪೆ: ಸಾಮಾನ್ಯವಾಗಿ ಕರಾವಳಿಯಲ್ಲಿ ಯಾಂತ್ರಿಕ ಮೀನುಗಾರಿಕೆ ನಿಷೇಧದ ಸಂದರ್ಭದಲ್ಲಿ ಒಣ ಮೀನಿನ ಸಾರು ಪರ್ಯಾಯವಾಗಿ ಹಸಿಮೀನಿನ ಸ್ಥಾನವನ್ನು ತುಂಬುತ್ತದೆ. ಈ ಬಾರಿ ಆರಂಭದಿಂದ ಕಾಡಿದ ಚಂಡಮಾರುತ, ಮೀನಿನ ಕ್ಷಾಮ, ಮಾರ್ಚ್ ಬಳಿಕ ಕೊರೊನಾ ಲಾಕ್‌ಡೌನ್‌ನಿಂದಾಗಿ ಸರಿಯಾದ ಮೀನುಗಾರಿಕೆ ಇಲ್ಲದೆ ಮಳೆಗಾಲ ಪೂರ್ವದ 3 ತಿಂಗಳ ವ್ಯವಹಾರ ಆಗದಿರು ವುದು ಒಣಮೀನಿನ ವ್ಯಾಪಾರದ ಮಹಿಳೆ ಯರಿಗೆ ದೊಡ್ಡ ಹೊಡೆತವಾಗಿದೆ. ಪರಿಣಾಮವಾಗಿ ಒಣಮೀನಿನ ದಾಸ್ತಾನಿಲ್ಲದೆ ಲಾಕ್‌ಡೌನ್ ಅನಂತರದ ದಿನಗಳಲ್ಲಿ ಮೀನಿನ ಲಭ್ಯತೆ ಇಲ್ಲದೆ ದರ ಮತ್ತಷ್ಟು ಹೆಚ್ಚಳವಾಗಿದೆ.
ಜೂನ್‌ನಿಂದ ಎರಡು ತಿಂಗಳು ಮೀನುಗಾರಿಕೆಗೆ ನಿಷೇಧವಿದೆ.ಯಾಂತ್ರಿಕ ಮೀನುಗಾರಿಕೆ ಚಟುವಟಿಕೆ ನಡೆಯುವುದು ಆ. 10ರ ಬಳಿಕ; ಹಾಗಾಗಿ ಮೀನು ಪ್ರಿಯರು ಮಳೆಗಾಲಕ್ಕೆ ಬೇಕಾಗುವ ಮೀನನ್ನು ಎಪ್ರಿಲ್ ಮೇ ತಿಂಗಳಲ್ಲಿ ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಆದರೆ ಈ ಬಾರಿ ಲಾಕ್‌ಡೌನ್‌ನಿಂದಾಗಿ ಸುಮಾರು ಒಂದೂವರೆ ತಿಂಗಳು ಮೀನುಗಾರಿಕೆ ಸ್ಥಗಿತಗೊಂಡಿತ್ತು. ಬಳಿಕ ಶೇ. 15ರಷ್ಟು ದೋಣಿಗಳು ಮಾತ್ರ ಮೀನುಗಾರಿಕೆಗೆ ತೆಳಿದ್ದು ತಾಜಾ ಮೀನಿಗೆ ಸಾಕಷ್ಟು ಬೇಡಿಕೆ ಇದ್ದುದರಿಂದ ಒಣಮೀನಿಗೆ ಬೇಕಾಗುವಷ್ಟು ಮೀನು ಲಭ್ಯತೆ ಇರಲಿಲ್ಲ.
ಒಣ ಮೀನಿನ ಬೆಲೆ
ಪ್ರಸ್ತುತ ಮೀನು ಮಾರುಕಟ್ಟೆಯಲ್ಲಿ ಒಣಮೀನು ಬೆಲೆ ಗಗನಕ್ಕೇರಿದ್ದು, ಒಂದು ಕೆ.ಜಿ.ಗೆ 150 ರೂ. ಇದ್ದ ಗೊಲಾಯಿ ಮೀನು ಇದೀಗ ಮಾರುಕಟ್ಟೆಯಲ್ಲಿ 600 ರೂ. ಗೆ ಮಾರಾಟವಾಗುತ್ತಿದೆ. ಅದರಂತೆ ಕೆ.ಜಿ.ಗೆ 300 ರೂ. ಇದ್ದ ಅಡೆಮೀನಿಗೆ 900 ರೂ. ಆಗಿದೆ. ಕೆ.ಜಿ.ಗೆ 50 ರೂ. ಇದ್ದ ಕುರ್ಚಿ, ಪಾಂಬೊಲ್‌ಗೆ 150 ರೂ., 80 ರೂ. ಇದ್ದ ಆರಣೆ ಮೀನು 170ಕ್ಕೆ ಮಾರಾಟ ವಾಗುತ್ತಿದೆ. 100 ರೂ.ಯ ನಂಗ್ ಮೀನಿಗೆ 400 ರೂ. ಇದೆ. 4 ರೂ. ಗೆ ಮಾರಾಟವಾಗು ತ್ತಿದ್ದ ಮದ್ಯಮ ಗಾತ್ರ ಒಂದು ಬಂಗುಡೆ ಮೀನಿಗೆ ಈಗ 20ರೂ. ಆಗಿದೆ. ಕಲ್ಲರ್ 70ರಿಂದ 400 ರೂ. ಗೆ ಏರಿಕೆಯಾಗಿದೆ.
ಸಮುದ್ರದಲ್ಲಿ ಹಿಡಿದು ತಂದ ಮೀನನ್ನು ನೀರಿನಿಂದ ಸ್ವತ್ಛವಾಗಿ ತೊಳೆದು ಬಳಿಕ ಕೆಲವು ಗಂಟೆಗಳ ಕಾಲ ಉಪ್ಪು ಹಾಕಿ ಇಡಲಾಗುತ್ತದೆ. ಬಳಿಕ ಸಿಹಿನೀರಿನಿಂದ ಸ್ವಚ್ಚಗೊಳಿಸಿ ಬಿಸಿಲಿಗೆ ಹಾಕಿ ಒಣಗಿಸಲಾಗುತ್ತದೆ.
ಹೆಚ್ಚಿನ ಮೀನು ಮೊದಲೇ ಮಾರಾಟ
ಸರಕಾರ ಲಾಕ್‌ಡೌನ್ ಮಾಡಿದ್ದರಿಂದ ಮೀನಿನ ಮಾರಾಟಕ್ಕೆ ಸಮಸ್ಯೆಯಾಗುತ್ತದೆ ಎಂದು ದಾಸ್ತಾನು ಇಟ್ಟಿದ್ದ ಎಲ್ಲ ಮೀನನ್ನು ಅದರ ಮೊದಲೇ ಮಾರಾಟ ಮಾಡಿದ್ದೇವೆ. ಲಾಕ್‌ಡೌನ್ ಸಡಿಲಿಕೆಯಾದ ಅನಂತರ ಕೆಲವೇ ಬೋಟುಗಳು ತೆರಳಿದ್ದರಿಂದ ಬಂದ ಮೀನಿಗೆ ಒಣಗಿಸಲು ಬೇಕಾದ ಮೀನು ಸಿಗುತ್ತಿರಲಿಲ್ಲ.
-ಜಲಜಾ ಕೋಟ್ಯಾನ್,,
ಅಧ್ಯಕ್ಷರು, ಮಹಿಳಾ ಮೀನುಗಾರ ಸಹಕಾರಿ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
BGT 24: ಕೆಎಲ್ ರಾಹುಲ್ ಔಟ್ ಅಥವಾ ನಾಟೌಟ್: ಏನಿದು ವಿವಾದ? ಇಲ್ಲಿದೆ ಅಂಪೈರ್ ಉತ್ತರ
Belthangady: ನ. 21- ಮೇ 23: ಧರ್ಮಸ್ಥಳ ಮೇಳದಿಂದ ಯಕ್ಷ ಗಾನ ಸೇವೆ
Chikkamagaluru: ನಾವು ನಡೆದಿದ್ದೇ ದಾರಿ, ನಡಿ ಮಗಾ….ಮರಿ ಆನೆಗೆ ನಡೆಯಲು ಕಲಿಸಿದ ತಾಯಿ ಆನೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.