ಹೆಚ್ಚಾದ ವೈರಸ್‌ ಹಾವಳಿ ಮುಗಿಯದ ಸವಾಲು


Team Udayavani, Jun 19, 2020, 5:51 AM IST

ಹೆಚ್ಚಾದ ವೈರಸ್‌ ಹಾವಳಿ ಮುಗಿಯದ ಸವಾಲು

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ದೇಶದಲ್ಲಿ ಕೋವಿಡ್ ಕಾರಣದಿಂದಾಗಿ ಮೃತಪಟ್ಟವರ ಸಂಖ್ಯೆ 12 ಸಾವಿರ ದಾಟಿದೆ.

ಇಷ್ಟೊಂದು ಸಂಖ್ಯೆಯ ಸಾವುಗಳು ನಿಜಕ್ಕೂ ಆತಂಕ ಹಾಗೂ ಬೇಸರ ಹುಟ್ಟಿಸುವ ಸಂಗತಿಯೇ ಹೌದು.

ಆದರೂ, ಸೋಂಕಿತರ-ಮೃತರ ಅನುಪಾತದ ದೃಷ್ಟಿಯಿಂದ ನೋಡಿದಾಗ ಜಾಗತಿಕ ಮರಣ ಪ್ರಮಾಣ ಸರಾಸರಿ 5 ಪ್ರತಿಶತಕ್ಕೂ ಅಧಿಕವಿದ್ದರೆ, ಭಾರತದಲ್ಲಿ 3 ಪ್ರತಿಶತದಷ್ಟಿದೆ. ಆದಾಗ್ಯೂ, ಸಾವು ಹಾಗೂ ಸೋಂಕನ್ನು ಕೇವಲ ಅಂಕಿಸಂಖ್ಯೆಗಳ ಆಧಾರದ ಮೇಲೆಯೇ ನೋಡಲು ಆಗುವುದಿಲ್ಲ ಎನ್ನುವುದು ಸತ್ಯ.

ಪ್ರತಿಯೊಬ್ಬ ವ್ಯಕ್ತಿಯ ಸಾವೂ ಸಹ ಆತನ ಕುಟುಂಬಕ್ಕೆ, ಪ್ರೀತಿಪಾತ್ರರಿಗೆ ಬಹು ದೊಡ್ಡ ಆಘಾತವೇ ಸರಿ. ಆ ಇಡೀ ಕುಟುಂಬದ ಅಸ್ತಿತ್ವವೇ ಅಲ್ಲಾಡಿಬಿಡುತ್ತದೆ, ಕಟ್ಟಿಕೊಂಡ ಕನಸುಗಳೆಲ್ಲವೂ ಛಿದ್ರವಾಗಿಬಿಡುತ್ತವೆ.

ಈ ಕಾರಣಕ್ಕಾಗಿಯೇ, ಸೋಂಕಿತರ ಸಂಖ್ಯೆಯನ್ನು ಆದಷ್ಟು ಬೇಗ ತಗ್ಗುವಂತೆ ನೋಡಿಕೊಂಡು, ಜೀವಹಾನಿಗಳನ್ನು ತಡೆಯುವ ನಿಟ್ಟಿನಲ್ಲಿ ಪರಿಶ್ರಮಕ್ಕೆ ವೇಗ ನೀಡಬೇಕಿದೆ.

ಆದಾಗ್ಯೂ, ಈಗ ಪ್ರತಿದಿನ 1 ಲಕ್ಷಕ್ಕೂ ಅಧಿಕ ಟೆಸ್ಟಿಂಗ್‌ಗಳನ್ನು ನಡೆಸಲಾಗುತ್ತಿದೆಯಾದರೂ, ಇದು ಎಲ್ಲಾ ರಾಜ್ಯಗಳಲ್ಲೂ ಸಮನಾಗಿಲ್ಲ ಎನ್ನುವುದೇ ಆತಂಕದ ವಿಷಯ. ಅದರಲ್ಲೂ ರಾಜಧಾನಿ ದೆಹಲಿಯಲ್ಲಿ ಹಾಗೂ ವಾಣಿಜ್ಯ ನಗರಿ ಮುಂಬಯಿಯಲ್ಲಿ ಹಠಾತ್ತನೆ ಪರೀಕ್ಷೆಗಳ ಪ್ರಮಾಣ ಕಡಿಮೆಯಾಗಿದ್ದು ಟೀಕೆಗೆ ಒಳಗಾಗುತ್ತಿದೆ.

ಆದರೆ, ಪರೀಕ್ಷೆಗಳ ಸಂಖ್ಯೆಯನ್ನು ಹೆಚ್ಚಿಸುವುದೊಂದೇ ಮರಣ ಪ್ರಮಾಣದ ತಡೆಗೆ ಪರಿಣಾಮಕಾರಿ ಮಾರ್ಗ ಆಗಲಾರದು. ಹೆಚ್ಚಿನ ಸಂಖ್ಯೆಯಲ್ಲಿ ಜೀವಗಳು ಉಳಿಯಬೇಕು ಎಂದರೆ, ರೋಗಾವಸ್ಥೆಯು ಉಲ್ಬಣಿಸುವ ಮುನ್ನವೇ ರೋಗಿಯು ಪರೀಕ್ಷೆಗೊಳಪಟ್ಟು, ಆಸ್ಪತ್ರೆ ತಲುಪುವುದು ಮುಖ್ಯವಾಗುತ್ತದೆ. ಈಗಲೂ ಅನೇಕರು ರೋಗ ಲಕ್ಷಣಗಳು ತೀವ್ರವಾದ ನಂತರವೇ ಟೆಸ್ಟಿಂಗ್‌ಗೆ ಮುಂದಾಗುತ್ತಿದ್ದಾರೆ.

ಎಲ್ಲಕ್ಕಿಂತ ಆತಂಕ ಹುಟ್ಟಿಸುತ್ತಿರುವ ಸಂಗತಿಯೆಂದರೆ, ರೋಗದ ಅಪಾಯದ ಬಗ್ಗೆ ಈಗ ಜನರಲ್ಲಿ ಭಯವೇ ದೂರವಾಗಿಬಿಟ್ಟಿದೆಯೇನೋ ಎಂಬಂಥ ಚಿತ್ರಣಗಳು ಕಂಡುಬರುತ್ತಿರುವುದು. ಲಾಕ್‌ ಡೌನ್‌ ನಿಯಮಗಳು ಸಡಿಲವಾಗಿ, ಆರ್ಥಿಕ ಚಕ್ರ ಆರಂಭವಾಗುವುದು ದೇಶದ ವಿತ್ತ ಹಿತದೃಷ್ಟಿಯಿಂದ ಅಗತ್ಯ ಕ್ರಮವಾಗಿತ್ತು.

ಆದರೆ, ನಿರ್ಬಂಧಗಳು ಸಡಿಲವಾಗಿವೆ ಎಂದರೆ ಎಲ್ಲವೂ ಸಹಜ ಸ್ಥಿತಿಗೆ ಬಂದಿದೆ ಎಂದೇನೂ ಅರ್ಥವಲ್ಲ. ಸತ್ಯವೇನೆಂದರೆ, ಈಗ ದೇಶದಲ್ಲಿ ಸೋಂಕು ವೇಗವಾಗಿ ಹರಡುತ್ತಿದೆ. ಈಗ ಮಾಡುವ ನಿಷ್ಕಾಳಜಿಯು ಖಂಡಿತ ಮುಂದೆ ಬೆಲೆ ತೆರುವಂತೆ ಮಾಡಲಿದೆ.

ಈ ಕಾರಣಕ್ಕಾಗಿಯೇ ಅಪಾಯವನ್ನು ಕಡೆಗಣಿಸದೇ, ಸಾಮಾಜಿಕ ಅಂತರದ ನಿಯಮಗಳನ್ನು, ಸ್ವಚ್ಛತೆಯನ್ನು ಪಾಲಿಸಲೇಬೇಕು. ಏಪ್ರಿಲ್ – ಮೇ ಅವಧಿಯಲ್ಲಿ ಗಂಟೆಗೊಮ್ಮೆಯಾದರೂ ಕೈತೊಳೆಯುತ್ತಿದ್ದ ಭಾರತೀಯರು ಈಗ ಹೊರಗೆ ಅಡ್ಡಾಡಿ ಬಂದರೂ ಈ ನಿಯಮವನ್ನು ಸರಿಯಾಗಿ ಪಾಲಿಸುತ್ತಿಲ್ಲ ಎನ್ನುತ್ತದೆ ಪ್ಯಾಂಡೆಮಿಕ್‌ ರಿಸರ್ಚ್‌ ಸೊಸೈಟಿಯ ಅಧ್ಯಯನ ವರದಿ. ನೆನಪಿರಲಿ, ಕೋವಿಡ್ ವಿರುದ್ಧದ ಹೋರಾಟ ಈಗ ನಿರ್ಣಾಯಕ ಹಂತ ತಲುಪಲಿದೆ. ಭಾರತೀಯರೆಲ್ಲ ಎಚ್ಚರಿಕೆಯಿಂದಿರಲೇ ಬೇಕಾದ ಸಮಯವಿದು.

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Farmer

Bagar Hukum ಅರ್ಜಿ ವಿಲೇವಾರಿ ಬಡ ರೈತರಲ್ಲಿ ಆಶಾವಾದ

4-editorial

Editorial: ಪಾಕ್‌ ಪ್ರೇರಿತ ಉಗ್ರರ ತಂತ್ರಕ್ಕೆ ಸೂಕ್ತ ಪ್ರತಿತಂತ್ರ ಈಗಿನ ತುರ್ತು

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಭಾರತ್‌ ಬ್ರ್ಯಾಂಡ್‌ ಆಹಾರಧಾನ್ಯ ಕಾಳಸಂತೆಕೋರರ ಮೇಲಿರಲಿ ನಿಗಾ

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

ಪದವಿ ವಿದ್ಯಾರ್ಥಿಗಳಿಗೆ ಉದ್ಯೋಗ ಅವಕಾಶಕ್ಕೆ ನೆರವಾಗುವ ಕೋರ್ಸ್‌

school

Karnataka; ಶಾಲಾ ಆಸ್ತಿ ಸಂರಕ್ಷಣೆ ಅಭಿಯಾನ ಎಲ್ಲ ಇಲಾಖೆಗಳಿಗೂ ಮಾದರಿ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.