![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
![ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು](https://www.udayavani.com/wp-content/uploads/2025/02/9-21-415x249.jpg)
Team Udayavani, Jun 19, 2020, 6:48 AM IST
ಪುತ್ತೂರು: ಪುತ್ತೂರು ತಾಲೂಕು ಕೆಯ್ಯೂರಿನ ಕಣಿಯಾರು ನಿವಾಸಿ ಪ್ರಸ್ತುತ ದೇವನಹಳ್ಳಿ ತಾಲೂಕಿನ ವಿಶ್ವನಾಥಪುರ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿರುವ ಪ್ರದೀಪ್ ಪೂಜಾರಿ ಅವರು ತನ್ನ ಕರ್ತವ್ಯ ವ್ಯಾಪ್ತಿಯಲ್ಲಿ ಯಾರೂ ಇಲ್ಲದ, ವಂಚನೆಗೆ ಒಳಗಾದ ವೃದ್ಧ ದಂಪತಿಯ ಜೀವನ ಕಥೆ ಆಲಿಸಿ ಅವರಿಗೆ ಜೀವನ ಪರ್ಯಂತ ಆಸರೆ ನೀಡಲು ನಿರ್ಧರಿಸಿರುವ ಮಾನವೀಯ ಕಾರ್ಯಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ.
ಬಸವನಪುರ ಗ್ರಾಮದ ನಿವಾಸಿ ಗಳಾದ ನರಸಿಂಹಪ್ಪ (85) ಮತ್ತು ಗಂಗಮ್ಮ (75) ಎಂಬ ಹಿರಿಜೀವಗಳಿಗೆ ಪ್ರದೀಪ್ ನೆರವಾಗಿದ್ದಾರೆ.
ಈ ದಂಪತಿಯ ಮನೆಗೆ ಬ್ಯಾಂಕ್ ಸಿಬಂದಿ ಎಂದು ಹೇಳಿಕೊಂಡು ಬಂದಿದ್ದ ವ್ಯಕ್ತಿಯೋರ್ವ ಹಣ ನೀಡುವುದಾಗಿ ಹೇಳಿ ನಂಬಿಸಿ ಅವರ ಬ್ಯಾಂಕ್ ಖಾತೆ ವಿವರಗಳನ್ನು ಪಡೆದು, ಆಭರಣ ಮತ್ತು ನಗದು ದೋಚಿ ಪರಾರಿಯಾಗಿದ್ದ. ಬಗ್ಗೆ ದೂರು ನೀಡಲು ದಂಪತಿ ಠಾಣೆಗೆ ಬಂದಿದ್ದು, ಪ್ರದೀಪ್ ಅವರ ಕಷ್ಟವನ್ನು ಆಲಿಸಿ ವಂಚಕರನ್ನು ಪತ್ತೆಹಚ್ಚುವ ಭರವಸೆ ನೀಡಿದ್ದಾರೆ.
ಕೆಯ್ಯೂರಿನ ಪ್ರದೀಪ್ ಪೂಜಾರಿ
ಕೆಯ್ಯೂರು ಕಣಿಯಾರಿನ ಪ್ರದೀಪ್ ಪೂಜಾರಿ 10 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಮೂಡು ಬಿದಿರೆ ಆಳ್ವಾಸ್ ಕಾಲೇಜಿನ ಹಳೆ ವಿದ್ಯಾರ್ಥಿ ಆಗಿರುವ ಅವರು ಅತ್ಯುತ್ತಮ ಕ್ರೀಡಾಪಟುವಾಗಿ ಗುರುತಿಸಿಕೊಂಡಿದ್ದರು.
ವೃದ್ಧ ದಂಪತಿಯ ನೋವನ್ನು ತಿಳಿದು ನೆರವಾಗು ತ್ತಿದ್ದು, ಮನೆ ಮಗನಂತೆ ಸ್ಪಂದಿಸುತ್ತೇನೆ.
– ಪ್ರದೀಪ್ ಪೂಜಾರಿ, ಎಸ್‌ಐ
ಜರ್ಮನಿ ಅಧ್ಯಕ್ಷರ ಎಕ್ಸ್ ಖಾತೆ ಹ್ಯಾಕ್: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
You seem to have an Ad Blocker on.
To continue reading, please turn it off or whitelist Udayavani.