ಮದುವೆಯಾಗುವ ಖುಷಿಯಲ್ಲಿ ವಿನಾಯಕ ಜೋಷಿ
ಬಾಲ್ಯದ ಗೆಳತಿ ಕೈ ಹಿಡಿಯಲಿರುವ ಮಾತಿನ ಮಲ್ಲ
Team Udayavani, Jun 19, 2020, 8:00 AM IST
ವಿನಾಯಕ ಜೋಷಿ. ಕನ್ನಡ ಸಿನಿಮಾರಂಗದಲ್ಲಿ ಬಾಲನಟನಾಗಿ ತಮ್ಮ ಬಣ್ಣದ ಬದುಕಿಗೆ ಎಂಟ್ರಿಯಾದವರು. ನಟನೆ, ನಿರೂಪಣೆ, ಆರ್‌ಜೆಯಾಗಿ ಗುರುತಿಸಿಕೊಂಡ ವಿನಾಯಕ ಜೋಷಿ ಇದೀಗ ಮದುವೆ ಆಗುವ ಖುಷಿಯಲ್ಲಿದ್ದಾರೆ. ಹೌದು, ವಿನಾಯಕ ಜೋಷಿ ತಮ್ಮ ಬಾಲ್ಯದ ಗೆಳತಿಯೊಂದಿಗೆ ದಾಂಪತ್ಯ ಬದುಕಿಗೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ವಿನಾಯಕ ಜೋಷಿ ಈವರೆಗೆ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಕಿರುತೆರೆಯಲ್ಲೂ ತಮ್ಮ ಛಾಪು ಮೂಡಿಸಿದ್ದಾರೆ.
ವಿನಾಯಕ್ ತಮ್ಮ ಬಾಲ್ಯದ ಗೆಳತಿ ವರ್ಷಾ ಬೆಳವಾಡಿ ಅವರನ್ನು ಕೈ ಹಿಡಿಯಲಿದ್ದಾರೆ. ವರ್ಷಾ ಬೆಳವಾಡಿ ಅವರು ರಾಷ್ಟ್ರಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿ. ವಿನಾಯಕ ಜೋಷಿ ಅವರು ಶಾಲಾ ದಿನಗಳಲ್ಲೇ ವರ್ಷಾ ಅವರ ಜೊತೆ ಓದುತ್ತಲೇ ಸ್ಕೂಲ್‌ನಲ್ಲಿ ವೇದಿಕೆ ಮೇಲೆ ಒಟ್ಟಿಗೆ ಡ್ಯಾನ್ಸ್ ಮಾಡಿದವರು. ಅದಾದ ಬಳಿಕ ಹಲವು ವರ್ಷಗಳ ಬಳಿಕ ಇಬ್ಬರಿಗೂ ಸಂಪರ್ಕವಿರಲಿಲ್ಲ. ಆದರೆ, ಪುನಃ ಇಬ್ಬರಿಗೂ ಸಂಪರ್ಕ ಸಿಕ್ಕು, ಸ್ನೇಹ ಬೆಳೆಸಿಕೊಂಡು ಆ ಸ್ನೇಹ ಇದೀಗ ಪ್ರೀತಿಗೂ ತಿರುಗಿದೆ.
ವರ್ಷಾ ಬೆಳವಾಡಿ ಅಂತಾರಾಷ್ಟ್ರೀಯ ಪಂದ್ಯಾವಳಿ ಆಡಿರುವುದಲ್ಲದೆ ಈಗ ಬೆಂಗಳೂರಿನ ಸ್ಫೋರ್ಟ್ಸ್ ಅಕಾಡೆಮಿಯಲ್ಲಿ ಕೋಚ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ವರ್ಷಾ ಕ್ರೀಡೆಯ ಜೊತೆಗೆ ನಟನೆಯಲ್ಲೂ ಆಸಕ್ತಿ ಇಟ್ಟುಕೊಂಡಿದ್ದಾರೆ. ತಮಿಳು ಸಿನಿಮಾದಲ್ಲಿ ವರ್ಷಾ ಅಭಿನಯಿಸಿದ್ದಾರೆ ಕೂಡ. ಆ ಚಿತ್ರ ಇಷ್ಟರಲ್ಲೆ ಬಿಡುಗಡೆಯಾಗಬೇಕಿದೆಯಷ್ಟೇ. ಸದ್ಯಕ್ಕೆ ವಿನಾಯಕ್ ಜೋಷಿ ಅವರು, ಸಿನಿಮಾಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳದೆ, ವೆಬ್‌ಸೀರೀಸ್ ಹಾಗು ಈವೆಂಟ್ ಮ್ಯಾನೇಜ್‌ಮೆಂಟ್ ಕಡೆ ಗಮನಹರಿಸಿದ್ದಾರೆ.
ಅಂದಹಾಗೆ, ಇವರ ಮದುವೆ ಯಾವಾಗ ಎಂಬ ಪ್ರಶ್ನೆಗೆ, ವಿನಾಯಕ್ ಜೋಷಿ, ಆಗಸ್ಟ್ 25 ರಂದು ತಮ್ಮ ಹುಟ್ಟುಹಬ್ಬದ ದಿನ ರಿಜಿಸ್ಟರ್ ಕಚೇರಿಯಲ್ಲಿ ಸರಳವಾಗಿಯೇ ಮದುವೆ ಮಾಡಿಕೊಳ್ಳುವ ಯೋಚನೆ ಮಾಡಿದ್ದರಂತೆ. ಆದರೆ, ಕುಟುಂಬದವರಿಗೆ ಶಾಸ್ತ್ರೋಕ್ತವಾಗಿ ಮದುವೆ ಮಾಡಬೇಕು ಎಂಬ ಉದ್ದೇಶದ ಹಿನ್ನೆಲೆಯಲ್ಲಿ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆ ಆಗಲು ನಿರ್ಧರಿಸಿದ್ದಾರೆ. ಶೀಘ್ರವೇ ಅವರು ದಿನಾಂಕ ಘೋಷಣೆ ಮಾಡಲಿದ್ದಾರಂತೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
UI Movie: 9 ವರ್ಷ ಬಳಿಕ ಉಪ್ಪಿ ಡೈರೆಕ್ಟ್ ಮಾಡಿದ ಯು-ಐ ಸಿನಿಮಾದ ಹೈಲೈಟ್ಸ್ ಏನು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರ ಪೈಕಿ ಓರ್ವ ಮೃತ್ಯು, ಸಹಸವಾರೆ ಗಾಯ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.