ಕೋವಿಡ್ -19 ತಡೆಯುವ ರೋಗನಿರೋಧಕ ಶಕ್ತಿ ಮನುಷ್ಯನಿಗಿಲ್ಲ?
Team Udayavani, Jun 19, 2020, 12:48 PM IST
ಹಾಂಕಾಂಗ್: ಕೋವಿಡ್ ತಡೆಯುವ ರೋಗನಿರೋಧಕ ಶಕ್ತಿ ಮನುಷ್ಯರಲ್ಲಿ ಯಾವ ಕಾಲಕ್ಕೂ ಬರವ ಸಾಧ್ಯತೆ ತೀವ್ರ ಕಡಿಮೆಯಿದೆ!
ಹೀಗೆಂದು ಅಮೆರಿಕ-ಚೀನದ ವಿಜ್ಞಾನಿಗಳು ಹೇಳಿದ್ದು, ವೈದ್ಯಕೀಯ ಲೋಕವನ್ನೇ ಅಚ್ಚರಿಗೀಡುಮಾಡಿದೆ.
ಹೊಸ ಸಂಶೋಧನೆಯೊಂದರ ಪ್ರಕಾರ ಆರಂಭದಲ್ಲಿ ಮಾತ್ರ ಮನುಷ್ಯರಿಗೆ ತುಸು ಪ್ರತಿರೋಧಕ ಶಕ್ತಿ ಬರಬಹುದು. ಆದರೆ ದೀರ್ಘಾವಧಿಯಲ್ಲಿ ಇಲ್ಲ ಎಂದು ಹೇಳಲಾಗಿದೆ. ಇದಕ್ಕೆ ಕಾರಣ 23 ಸಾವಿರ ಸೋಂಕು ಪೀಡಿತರ ಮಾದರಿಗಳ ಪರೀಕ್ಷೆ ಮಾಡಲಾಗಿದ್ದು, ಕೇವಲ ಶೇ.4ರಷ್ಟು ಮಂದಿಯ ದೇಹದಲ್ಲಿ ಮಾತ್ರ ಪ್ರತಿರೋಧಕ ಶಕ್ತಿ ಬೆಳದಿರುವುದು ಪತ್ತೆಯಾಗಿದೆ. ಸಂಶೋಧನೆಗೆ ಕೋವಿಡ್ ಸೋಂಕಿತರೊಂದಿಗೆ ನೇರ ಸಂಪರ್ಕದಲ್ಲಿದ್ದು, ಸೋಂಕು ತಗುಲಿದವರನ್ನೇ ಬಳಸಲಾಗಿತ್ತು. ಆದರೂ ಅವರಲ್ಲಿ ಪ್ರತಿರೋಧಕಗಳು ಅಷ್ಟಾಗಿ ಸೃಷ್ಟಿಯಾಗದೇ ಇರುವುದು ಆತಂಕಕ್ಕೂ ಕಾರಣವಾಗಿದೆ.
ಸೋಂಕು ತಗುಲಿದವರಲ್ಲಿ ಪ್ರತಿರೋಧಕಗಳು ವೃದ್ಧಿಯಾಗಿ, ಅನಂತರದಲ್ಲಿ ಮತ್ತೆ ಅವರು ಸೋಂಕಿಗೆ ಈಡಾಗುವ ಪ್ರಮೇಯ ಇರಲಾರದು ಎಂದು ಹೇಳಲಾಗಿತ್ತು. ಆದರೆ ಇದು ಅಂದುಕೊಂಡಂತೆ ಇಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಆದ್ದರಿಂದ ವಿವಿಧ ದೇಶಗಳು ಜನರಿಗೆ ರೋಗನಿರೋಧ ಶಕ್ತಿ ಇರುವ ಬಗ್ಗೆ ಸರ್ಟಿಫಿಕೆಟ್‌ಗಳನ್ನು ನೀಡುತ್ತೇವೆ ಎನ್ನುವುದು ಪ್ರಯೋಜನಕಾರಿಯಲ್ಲ ಎಂದು ಸಂಶೋಧಕರ ತಂಡ ಹೇಳಿದೆ. ಸದ್ಯ ಸಂಶೋಧಕರು ಹೇಳುವಂತೆ ದೀರ್ಘಾವಧಿ ಪ್ರತಿರೋಧಕಗಳು ಉಂಟಾಗುವುದನ್ನು ಅಥವಾ ಅಥವಾ ಪ್ರತಿಯೊಬ್ಬರಲ್ಲೂ ಇದು ಸೃಷ್ಟಿಯಾಗಿರುವುದನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ಪ್ರತಿರೋಧಕಗಳು ದೇಹದ ರೋಗನಿರೋಧಕ ಶಕ್ತಿಯಿಂದ ಹುಟ್ಟುವವುಗಳಾಗಿವೆ. ಇಮ್ಯುನೋಗ್ಲೋಬಿನ್ ಜಿ, ಐಜಿಜಿಗಳಂತಹವು ದೇಹದಲ್ಲಿ ದೀರ್ಘಕಾಲ ಉಳಿಯಬಲ್ಲವು. ಸಾರ್ಸ್ ಕಾಯಿಲೆ ಬಂದ 12 ವರ್ಷಗಳ ಬಳಿಕ ಕೆಲವು ರೋಗಿಗಳ ಅದರ ಪ್ರತಿರೋಧಕಕಗಳು ಹುಟ್ಟಿಕೊಂಡಿದ್ದವು ಎಂದು ಸಂಶೋಧಕರು ಹೇಳಿದ್ದಾರೆ. ಇನ್ನು ಶೇ.4ರಷ್ಟು ಪ್ರತಿರೋಧಕಗಳು ಸೃಷ್ಟಿಯಾದವರಲ್ಲಿ ಐಜಿಜಿ ಪ್ರತಿರೋಧಕ ಹುಟ್ಟಿರುವುದು ಗಮನಕ್ಕೆ ಬಂದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pakistan: ಪಾಕ್‌ನಲ್ಲಿ ಹಿಂಸಾಚಾರ; ಒಟ್ಟು 37 ಮಂದಿ ಸಾವು
Adani; ಆಸೀಸ್ ಕಲ್ಲಿದ್ದಲು ಗಣಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಆರೋಪ
London: ಶಂಕಾಸ್ಪದ ಲಗೇಜ್ ಪತ್ತೆ: ಲಂಡನ್ ಏರ್‌ಪೋರ್ಟ್ ಖಾಲಿ ಮಾಡಿಸಿ ತನಿಖೆ!
ಆಕಸ್ಮಿಕವಾಗಿ ಹಾರಿದ ಗುಂಡು: ಬರ್ತ್ ಡೇ ದಿನವೇ ಹಾರಿ ಹೋಯ್ತು ಭಾರತೀಯ ಮೂಲದ ವಿದ್ಯಾರ್ಥಿ ಜೀವ
Canada-India Row: ನಿಜ್ಜರ್ ಹತ್ಯೆ ಹಿಂದೆ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.