ಮರವಂತೆ, ಮಲ್ಪೆ , ಮಣೂರು ಕಡಲ್ಕೊರೆತ
ಮಣೂರು-ಪಡುಕರೆ: ಅಪಾಯದಲ್ಲಿ ರಸ್ತೆ
Team Udayavani, Jun 20, 2020, 5:22 AM IST
ಕೋಟ: ಮಣೂರು- ಪಡುಕರೆಯ ಶಿವರಾಜ್ ಸ್ಟೋರ್ ಕೆಳಗಡೆಯ ರಸ್ತೆಯಲ್ಲಿ ಎರಡು-ಮೂರು ದಿನಗಳಿಂದ ಕಡಲ್ಕೊರೆತ ತೀವ್ರಗೊಂಡಿದ್ದು ಕಡಲ ಕಿನಾರೆಯ ಪಕ್ಕದಲ್ಲಿರುವ ಸಂಪರ್ಕ ರಸ್ತೆ ಅಪಾಯದಲ್ಲಿದೆ.
ಸಮುದ್ರದ ಅಲೆಗಳು ತಾತ್ಕಾಲಿಕ ತಡೆಗೋಡೆ ಕೆಡವಿ ಪಕ್ಕದಲ್ಲಿರುವ ರಸ್ತೆಗೆ ಅಪ್ಪಳಿಸುತ್ತಿದ್ದು ರಸ್ತೆ ಕುಸಿಯತೊಡಗಿದೆ. ಇದೇ ರೀತಿ ಮುಂದುವರಿದರೆ ಒಂದೆರಡು ದಿನದಲ್ಲಿ ಸಂಪೂರ್ಣ ರಸ್ತೆ ಕೊಚ್ಚಿಹೋಗುವ ಸಾಧ್ಯತೆ ಇದೆ. ರಸ್ತೆಗೆ ಹಾನಿಯಾದಲ್ಲಿ ಸ್ಥಳೀಯ ನೂರಾರು ಮನೆಗಳ ಸಂಪರ್ಕ ಕಡಿತಗೊಳ್ಳಲಿದೆ ಹಾಗೂ ಅಕ್ಕ-ಪಕ್ಕದ ಮನೆಗಳು, ರಸ್ತೆ, ತೆಂಗಿನ ತೋಟಗಳಿಗೆ ಅಪಾಯವಿದೆ.
ಸಮಸ್ಯೆ ಪರಿಹಾರಕ್ಕಾಗಿ ಪ್ರತಿವರ್ಷ ಮನವಿ ಸಲ್ಲಿಸುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಪ್ರಸ್ತುತ ಕಡಲ್ಕೊರೆತ, ರಸ್ತೆಗೆ ಹಾನಿಯಾಗುವು ದನ್ನು ತಡೆಯುವ ನಿಟ್ಟಿನಲ್ಲಿ ಶೀಘ್ರವಾಗಿ ತಾತ್ಕಾಲಿಕ ಕಾಮಗಾರಿ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.
ಉದಯವಾಣಿ ವರದಿ
ಇಲ್ಲಿನ ಸಮಸ್ಯೆಯ ಕುರಿತು ಪತ್ರಿಕೆ ಎರಡು ದಿನಗಳ ಹಿಂದೆ ವರದಿ ಪ್ರಕಟಿಸಿತ್ತು ಹಾಗೂ 400ಮೀಟರ್ ಶಾಶ್ವತ ತಡೆಗೋಡೆ ಅಗತ್ಯವಿರುವ ಕುರಿತು ಗಮನಸೆಳೆದಿತ್ತು.
ತಹಶೀಲ್ದಾರ್ ಭೇಟಿ
ಕೋಟೇಶ್ವರ: ಇಲ್ಲಿಯ ಗೋಳಿಬೆಟ್ಟು ಎಂಬಲ್ಲಿ ನೀರಿನ ಹೊರ ಹರಿವಿಗೆ ಎದುರಾದ ಸಮಸ್ಯೆ ಬಗ್ಗೆ ಬಂದ ದೂರಿನ ಆಧಾರದ ಮೇಲೆ ಜೂ.19 ರಂದು ಸ್ಥಳಕ್ಕೆ ಭೇಟಿಯಿತ್ತ ಕುಂದಾಪುರ ತಹಶೀಲ್ದಾರರು ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಕುಂದಾಪುರ ತಹಶೀಲ್ದಾರ್ ಆನಂದಪ್ಪ ಕಂದಾಯ ನಿರೀಕ್ಷಕ ಭರತ್ ಶೆಟ್ಟಿ, ಬೀಜಾಡಿ ಗ್ರಾ.ಪಂ. ಪಿ.ಡಿ.ಒ. ಗಣೇಶ, ಬೀಜಾಡಿ ಗ್ರಾ.ಪಂ. ಸದಸ್ಯ ವಾದಿರಾಜ್ ಹೆಬ್ಟಾರ್ ಸ್ಥಳಕ್ಕೆ ಭೇಟಿಯಿತ್ತು ಸಮಸ್ಯೆ ಬಗ್ಗೆ ಪರಾಮರ್ಶಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.