ಟ್ರಂಪ್ ಜಾಹೀರಾತು ತೆಗೆದ ಫೇಸ್ಬುಕ್ ; ಸಂಘಟಿತ ದ್ವೇಷದ ಕಾರಣಕ್ಕಾಗಿ ಈ ಕ್ರಮ
ಅಂಥ ಅಂಶವೇ ಇರಲಿಲ್ಲ: ಪ್ರಚಾರ ವಕ್ತಾರ
Team Udayavani, Jun 20, 2020, 7:10 AM IST
ವಾಷಿಂಗ್ಟನ್: ಮೈಕ್ರೋ ಬ್ಲಾಗಿಂಗ್ ಜಾಲತಾಣ ಟ್ವಿಟರ್ ಇತ್ತೀಚೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಕ್ಷೇಪಾರ್ಹ ಟ್ವೀಟ್ ತೆಗೆದು ಹಾಕಿತ್ತು. ಅದೇ ಮಾದರಿಯನ್ನು ಫೇಸ್ಬುಕ್ ಕೂಡ ಅನುಸರಿಸಿದೆ.
ಸಂಘಟಿತ ದ್ವೇಷದ ವಿರುದ್ದದ ತನ್ನ ನೀತಿಯನ್ನು ಉಲ್ಲಂಘಿಸಿದ್ದಕ್ಕಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಚುನಾವಣಾ ಪ್ರಚಾರದ ಪೋಸ್ಟ್ಗಳು ಮತ್ತು ಜಾಹೀರಾತುಗಳನ್ನು ತನ್ನ ವೇದಿಕೆಯಿಂದ ತೆಗೆದುಹಾಕಿರುವುದಾಗಿ ಫೇಸ್ಬುಕ್ ತಿಳಿಸಿದೆ.
ತಲೆಕೆಳಗಾದ ಕೆಂಪು ತ್ರಿಕೋನದ ಚಿಹ್ನೆಗಳು ಟ್ರಂಪ್ ಅವರ ಜಾಹೀರಾತುಗಳಲ್ಲಿ ಇದ್ದವು. ಇದು ರಾಜಕೀಯ ಕೈದಿಗಳನ್ನು ಗುರುತಿಸಲು ನಾಜಿಗಳು ಈ ಹಿಂದೆ ಬಳಸುತ್ತಿದ್ದ ಸಂಕೇತ ಕೂಡ ಆಗಿದೆ.
‘ಫ್ಯಾಸಿಸ್ಟ್ ವಿರೋಧಿ ಆಂದೋಲನಕ್ಕೆ ಸಹಿ ಮಾಡಿ’, ಎಂದು ಫೇಸ್ಬುಕ್ ಬಳಕೆದಾರನೊಬ್ಬ ಹಾಕಿದ್ದ ಪೋಸ್ಟ್ಗಳನ್ನು ಟ್ರಂಪ್ ಮತ್ತು ಉಪಾಧ್ಯಕ್ಷ ಮೈಕ್ ಪೆನ್ಸ್ ಅವರಿಗೆ ಸಂಬಂಧಿಸಿದ ಪೇಜ್ಗಳು ಮತ್ತು ‘ಟೀಮ್ ಟ್ರಂಪ್’ ಫೇಸ್ಬುಕ್ ಖಾತೆಗಳಲ್ಲಿ ಹಂಚಿಕೊಳ್ಳಲಾಗಿತ್ತು. ಆದರೆ, ಇದನ್ನು ಸಂಘಟಿತ ದ್ವೇಷ ಎಂದು ಪರಿಗಣಿಸುವುದಾಗಿ ಫೇಸ್ಬುಕ್ ತಿಳಿಸಿದೆ. ಅಲ್ಲದೆ, ಆ ಪೋಸ್ಟ್, ಜಾಹೀರಾತುಗಳನ್ನು ತೆಗೆದು ಹಾಕಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಟ್ರಂಪ್ ಅಭಿಯಾನದ ವಕ್ತಾರ ಟಿಮ್ ಮುರ್ತಾಗ್, ಇದೊಂದು ಐತಿಹಾಸಿಕ ಚಿಹ್ನೆಯಾಗಿದ್ದು, ಫ್ಯಾಸಿಸ್ಟ್ ವಿರೋಧಿ ಸಂಕೇತವಾಗಿದೆ. ಆದ್ದರಿಂದ ನಾವು ಫ್ಯಾಸಿಸ್ಟ್ ವಿರೋಧದ ಕುರಿತಾದ ಜಾಹೀರಾತಿನಲ್ಲಿ ಇದನ್ನು ಅಳವಡಿಸಿದ್ದೆವು. ಅದರಲ್ಲಿ ದ್ವೇಷ ಹರಡುವ ಉದ್ದೇಶ ಇಲ್ಲ ಎಂದು ತಿಳಿಸಿದ್ದಾರೆ. ಟ್ರಂಪ್ ಅಭಿಯಾನಕ್ಕೆ ಬುಧವಾರ ಚಾಲನೆ ನೀಡಲಾಗಿದ್ದು, ಜಾಹೀರಾತುಗಳಿಗಾಗಿ 10 ಸಾವಿರ ಡಾಲರ್ಗಿಂತ ಹೆಚ್ಚಿನ ಹಣವನ್ನು ಖರ್ಚು ಮಾಡಲಾಗಿದೆ.
ಅಮೆರಿಕ ಅಧ್ಯಕ್ಷರಿಗೆ ಮತ್ತೆ ಟ್ವಿಟರ್ ಬಿಸಿ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಟ್ವಿಟ್ಟರ್ ಮತ್ತೊಮ್ಮೆ ಬಿಸಿಮುಟ್ಟಿಸಿದೆ. ಟ್ರಂಪ್ ಪೋಸ್ಟ್ ಮಾಡಿದ್ದ ವಿಡಿಯೊ ಟ್ವೀಟ್ ಕೆಳಗೆ ‘ಮಾಧ್ಯಮದ ದುರುಪಯೋಗ’ ಎಂದು ಟ್ವಿಟ್ಟರ್ ಕ್ಯಾಪ್ಷನ್ ಹಾಕಿದೆ. ಒಂದು ಬಿಳಿ ಪುಟಾಣಿ, ಕಪ್ಪು ಕಂದಮ್ಮನನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೊವನ್ನು ಸಿಎನ್ಎನ್ ವರದಿ ಮಾಡಿದೆ ಎಂದು ಟ್ರಂಪ್ ಪೋಸ್ಟ್ ಹಾಕಿದ್ದರು. ಆ ವಿಡಿಯೋ ಹಿಂದಿನ ವಾಸ್ತವವನ್ನೂ ಟ್ರಂಪ್ ತೋರಿಸಿದ್ದರು.
ಅವೆರಡೂ ಮಕ್ಕಳು ಪರಸ್ಪರ ಅಪ್ಪಿಕೊಂಡು ಆಡುತ್ತಿದ್ದವು. ಆದರೆ, ಸಿಎನ್ಎನ್ ಅಟ್ಟಿಸಿಕೊಂಡು ಹೋಗುತ್ತಿರುವ ದೃಶ್ಯವನ್ನು ಮಾತ್ರವೇ ತುಂಡರಿಸಿ ವರದಿ ಮಾಡಿದೆ ಎನ್ನುವುದು ಟ್ರಂಪ್ ಪೋಸ್ಟ್ನ ಆರೋಪ. ಟ್ವಿಟ್ಟರ್ನ ಕ್ಯಾಪ್ಷನ್ ಕೊಂಡಿಯನ್ನು ಕ್ಲಿಕ್ಕಿಸಿದರೆ ಸಿಎನ್ಎನ್ ಮಾಡಿದ್ದ 2019ರ ನೈಜ ವಿಡಿಯೊ ಕಾಣಿಸುತ್ತದೆ. ಅಲ್ಲಿ ವಾಸ್ತವದಲ್ಲಿ ಸಿಎನ್ಎನ್ ಆ ಎರಡು ಕಂದಮ್ಮಗಳು ಪರಸ್ಪರ ಅಪ್ಪಿಕೊಂಡಿದ್ದನ್ನು ಮಾತ್ರವೇ ತೋರಿಸಿ ವರದಿ ಮಾಡಿರುವುದು ಸ್ಪಷ್ಟವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.