ಜಿಪಂ, 3 ಗ್ರಾಪಂಗಳಿಗೆ ರಾಷ್ಟ್ರೀಯ ಪ್ರಶಸ್ತಿ


Team Udayavani, Jun 20, 2020, 5:25 AM IST

jilla-panchayat

ಮಂಡ್ಯ: 2018-19ನೇ ಸಾಲಿನಲ್ಲಿ ಕಾರ್ಯಕ್ಷಮತೆ ಮತ್ತು ಪ್ರಗತಿಯನ್ನಾಧರಿಸಿ ಭಾರತ ಸರ್ಕಾರ ನೀಡುವ ಪಂಚಾಯತ್‌ರಾಜ್‌ ಪುರಸ್ಕಾರ ದ ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳು ಜಿಪಂಗೆ ಲಭಿಸಿದೆ ಎಂದು ಜಿಪಂ ಸಿಇಒ ಕೆ.ಯಾಲಕ್ಕೀ ಗೌಡ  ಹೇಳಿದರು. ಮಂಡ್ಯ ಜಿಪಂ, ಮದ್ದೂರಿನ ಅಣ್ಣೂರು, ಹೆಮ್ಮನಹಳ್ಳಿ ಹಾಗೂ ಶ್ರೀರಂಗಪಟ್ಟಣದ ನಗುವ ನಹಳ್ಳಿ ಗ್ರಾಪಂ ಪ್ರಶಸ್ತಿಗೆ ಪಾತ್ರವಾಗಿವೆ ಎಂದು ಗ್ರಾಪಂ ಪಿಡಿಒಗಳ ಜೊತೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಜಿಪಂಗೆ ಸಶಕ್ತೀಕರಣ ಪುರಸ್ಕಾರ: ಸ್ವಚ್ಛ ಭಾರತ್‌ ಮಿಷನ್‌ ಯೋಜನೆಯಡಿ ಎಲ್ಲಾ ಗ್ರಾಪಂಗಳಲ್ಲಿ ಪ್ಲಾಸ್ಟಿಕ್‌ ನಿಷೇಧ. ನರೇಗಾಯಡಿ ಕಾಮ ಗಾರಿಗಳಿಗೆ ಆದ್ಯತೆ, ಗ್ರಾಪಂ ಸ್ವಂತ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ, ವಿದ್ಯುತ್‌ ಬಿಲ್‌ ಮರು ಹೊಂದಾಣಿಕೆ ಮತ್ತು ಬಾಕಿ ಬಿಲ್‌ ಪಾವ  ತಿಗೆ ಒತ್ತು. ಶೈಕ್ಷಣಿಕ ಚಟುವಟಿಕೆಗಳಿಗೆ ಗ್ರಾಪಂನಿಂದ 5 ಸಾವಿರ ರೂ. ಸಹಾಯಧನ. ಎಸ್ಸೆಸ್ಸೆಲ್ಸಿ ಪರೀಕ್ಷಾ ಫ‌ಲಿತಾಂಶ ಉತ್ತಮಗೊಳಿಸಲು ಕ್ರಮ ವಹಿಸಲಾಗಿದೆ. ಜಿಪಂಗೆ ದೀನ್‌ ದಯಾಳ್‌  ಉಪಾಧ್ಯಾಯ ಪಂಚಾಯತ್‌ ಸಶ ಕ್ತೀಕರಣ ಪುರಸ್ಕಾರದಡಿ 50 ಲಕ್ಷ ರೂ. ನಗದು ಪುರಸ್ಕಾರ ದೊರಕಿದೆ ಎಂದರು.

ಅಣ್ಣೂರಿಗೆ 10 ಲಕ್ಷ ಬಹುಮಾನ: ಅಣ್ಣೂರು ಗ್ರಾಪಂ ದೀನ್‌ ದಯಾಳ್‌ ಉಪಾಧ್ಯಾಯ ಪಂಚಾಯತ್‌ ಸಶಕ್ತ ಪುರಸ್ಕಾರ (ನೈರ್ಮಲ್ಯ ವಿಭಾಗ) ದೊಂದಿಗೆ 10 ಲಕ್ಷ ರೂ.ನಗದು ಬಹುಮಾನ ಪಡೆದುಕೊಂಡಿದೆ ಎಂದು ಪಿಡಿಒ ಅಶ್ವಿ‌ನಿ  ಹೇಳಿದರು. ಗ್ರಾಪಂನ ಎಲ್ಲಾ ಕುಟುಂಬಗಳಿಗೂ ಶೌಚಾಲ ಯ ನಿರ್ಮಿಸಲಾಗಿದೆ. ಮನೆಯಲ್ಲೇ ಹಸಿ ಮತ್ತು ಒಣ ಕಸ ವಿಂಗಡಿಸಲು 2 ಕಸದ ಬುಟ್ಟಿ ವಿತರಿಸಲಾಗಿದೆ. ಮನೆ ಮನೆಯಿಂದ ಕಸ ಸಂಗ್ರಹಿ ಸಲು ಟ್ರ್ಯಾಕ್ಟರ್‌, ಆಟೋ ಮೂಲಕ  ನೈರ್ಮಲ್ಯ ಸುಸ್ಥಿತರತೆಗೆ ಆದ್ಯತೆ ನೀಡಲಾಗಿದೆ ಎಂದರು.

ಜಿಲ್ಲೆಯಲ್ಲೇ ಪ್ರಥಮ ದ್ರವ ತ್ಯಾಜ್ಯ ನಿರ್ವಹಣಾ ಘಟಕ ನಿರ್ಮಾಣ, ಸಮುದಾಯ ಗೊಬ್ಬರ ಘಟಕ ನಿರ್ಮಿಸಿದ ಪ್ರಥಮ ಗ್ರಾಪಂ ಆಗಿದೆ. ಸ್ಥಳೀಯ ಸಂಪನ್ಮೂಲಗಳನ್ನು ಬಳಸಿ ಕೊಂಡು ಗೊಬ್ಬರ ಘಟಕ ನಿರ್ಮಾಣ ಮಾಡಲಾಗಿದೆ.  ಗ್ರಾಪಂನಲ್ಲಿ ಸರ್ಕಾರಿ ಯೋಜ ನೆಗಳ ಬಗ್ಗೆ ಮಾಹಿತಿಗಾಗಿ ಡಿಜಿಟಲ್‌ ಬೋರ್ಡ್‌ ಅಳವಡಿಸಲಾಗಿದೆ. ಡಿಜಿಟಲ್‌ ಲೈಬ್ರರಿಯನ್ನು ತೆರೆದು ವಿದ್ಯಾರ್ಥಿಗಳಿಗೆ ಅನು ಕೂಲ ಕಲ್ಪಿಸಿದೆ ಎಂದರು.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ: ಹೆಮ್ಮನಹಳ್ಳಿ ಗ್ರಾಪಂ ವ್ಯಾಪ್ತಿಯ ಪ್ರತಿ ಶಾಲೆಗಳಲ್ಲಿ ಗಂಡು-ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲ ಯ, ಕಾಪೌಂಡ್‌ ನಿರ್ಮಾಣ, ಅಂಗನವಾಡಿ ಗಳಲ್ಲಿ ಕಾನ್ವೆಂಟ್‌ ಮಾದರಿಯಲ್ಲಿ ಮಕ್ಕಳಿಗೆ ಶಿಕ್ಷಣ ವ್ಯವಸ್ಥೆ  ಕಲ್ಪಿಸಿಕೊಡಲಾಗಿದೆ ಎಂದು ಗ್ರಾಪಂ ಪಿಡಿಒ ಲೀಲಾವತಿ ತಿಳಿಸಿದರು. ಗ್ರಾಪಂ ಕಚೇರಿಗೆ ಕೇಂದ್ರೀಕೃತ ಸೋಲಾರ್‌ ಘಟಕ ಅಳವಡಿಸಿ ವಿದ್ಯುತ್‌ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿದೆ. ಕದಲೀಪುರ, ಯರಗ ನಹಳ್ಳಿ,  ಹೆಮ್ಮನಹಳ್ಳಿಯಲ್ಲಿ ಸೋಲಾರ್‌ ಘಟಕ ಅಳವಡಿಸಿ ಬೀದಿ ದೀಪಗಳಿಗೆ ಸಂಪರ್ಕ ಕಲ್ಪಿಸಲಾ ಗಿದೆ. ಸರ್ಕಾರಿ ಶಾಲೆಗಳಿಗೆ ಸದಸ್ಯರ ಗೌರವ ಧನದಲ್ಲಿ ಉಚಿತ ಕಂಪ್ಯೂಟರ್‌, ವಿವಿಧ ಯೋಜನೆಗಳನ್ನು ಒಗ್ಗೂಡಿಸಿ ಚರಂಡಿ, ರಸ್ತೆ, ಸ್ಮಶಾನ  ಅಭಿವೃದಿಟಛಿ ಮಾಡಲಾಗಿದೆ. ಈ ಪಂಚಾಯ್ತಿ ಗೆ ಅತ್ಯುತ್ತಮ ಮಕ್ಕಳ ಸ್ನೇಹಿ ರಾಷ್ಟ್ರೀಯ ಪುರಸ್ಕಾರ ದೊರಕಿದ್ದು, ಪ್ರಶಸ್ತಿಯು 5 ಲಕ್ಷ ರೂ. ನಗದನ್ನು ಒಳಗೊಂಡಿದೆ ಎಂದು ಹೇಳಿದರು.

ಸೋಲಾರ್‌ ದೀಪ ಅಳವಡಿಕೆ: ನಮ್ಮ ಗ್ರಾಮ ನಮ್ಮ ಯೋಜನೆಯಡಿ ನಗುವನಹಳ್ಳಿ ಗ್ರಾಪಂಗೆ 5 ಲಕ್ಷ ರೂ. ನಗದು ಪುರಸ್ಕಾರ ದೊರ ಕಿದೆ. ಗ್ರಾಪಂ ವ್ಯಾಪ್ತಿ 9 ಅಂಗನವಾಡಿಗಳಲ್ಲಿ ಸೋಲಾರ್‌ ವಿದ್ಯುತ್‌ ದೀಪ ಅಳವಡಿಸಲಾ ಗಿದೆ. ಎಸ್ಸಿ,  ಎಸ್ಟಿ ಕಾಲೋನಿಗಳಿಗೂ ಸೋಲಾರ್‌ ವಿದ್ಯುತ್‌ ದೀಪ ವ್ಯವಸ್ಥೆ ಕಲ್ಪಿಸಲಾಗಿದೆ. ಇದರಿಂ ದ 2ರಿಂದ 3 ಲಕ್ಷ ರೂ. ವಿದ್ಯುತ್‌ ಉಳಿತಾ ಯವಾಗುತ್ತಿದೆ ಎಂದು ಪಿಡಿಒ ಯೋಗೇಶ್‌ ತಿಳಿಸಿದರು. 3 ಶುದಟಛಿ ನೀರಿನ ಘಟಕ ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲೇ ಮೊದಲ ವೆಬ್‌ಸೈಟ್‌ ಆರಂಭಿಸಿದ ಕೀರ್ತಿ ನಮ್ಮ ಗ್ರಾಪಂದ್ದಾಗಿದೆ. ಡಿಜಿಟಲ್‌ ಲೈಬ್ರರಿ ಆರಂಭಕ್ಕೆ ಸಿದ್ಧತೆ ನಡೆಸಿದ್ದು, ಪ್ಲಾಸ್ಟಿಕ್‌ ನಿಷೇಧಿಸಿ 1600 ಕುಟುಂಬಗಳಿಗೆ ಬಟ್ಟೆ ಹಾಗೂ ಸೆಣಬಿನ ಬ್ಯಾಗ್‌ ವಿತರಿಸಲಾಗಿದೆ ಎಂದರು

ಟಾಪ್ ನ್ಯೂಸ್

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Frud

Mangaluru: ಆನ್‌ಲೈನ್‌ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ

MCC-BankArrest

Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್‌ ಅಧ್ಯಕ್ಷನ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada-Sahitya-Sammelana-2024

Mandya Sahitya Sammelana: ನಾಳೆಯಿಂದ ಅಕ್ಷರ ಜಾತ್ರೆಗೆ ಸಕ್ಕರೆ ನಗರಿ ಸಜ್ಜು

14

Kannada Sahitya Sammelana: ಮೊದಲ ಬಾರಿಗೆ ದೃಷ್ಟಿಚೇತನರ ವಿಶೇಷ ಕವಿಗೋಷ್ಠಿ

Suicide 3

Maddur; ಕೆಲಸದ ಒತ್ತಡ: ಎಂಜಿನಿಯರ್‌ ಆತ್ಮಹ*ತ್ಯೆ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

Karnataka Congress: ಯಾವುದೇ ಒಪ್ಪಂದ ಆಗಿಲ್ಲ: ಸಿಎಂ ಸಿದ್ದರಾಮಯ್ಯ

13

Mandya: ಬಹುಮಾನ ಗೆದ್ದ ಹಳ್ಳಿಕಾರ್‌ ತಳಿಯ ಎತ್ತು ದಾಖಲೆಯ 13 ಲಕ್ಷ ರೂ.ಗೆ ಮಾರಾಟ!

MUST WATCH

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

ಹೊಸ ಸೇರ್ಪಡೆ

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

22 Villages: ಡೋಕ್ಲಾಂನಲ್ಲಿ ಚೀನದಿಂದ 22 ಗ್ರಾಮಗಳ ನಿರ್ಮಾಣ?

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Vijay Mallya: ಮಲ್ಯ 14,000 ಕೋ. ರೂ. ಆಸ್ತಿ ಬ್ಯಾಂಕುಗಳಿಗೆ ವಾಪಸ್‌

Mangalore_Airport-NewTerminal

Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

H-1B visa: ಎಚ್‌1ಬಿ ವೀಸಾ ನಿಯಮ ಸಡಿಲಿಕೆ… ಭಾರತೀಯ ಟೆಕ್ಕಿಗಳಿಗೆ ಸಂತಸ

BGV-CM-SS

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.