ಹೊಸ ಕೋವಿಡ್‌ 19: ಯುರೋಪ್‌ ಮೂಲದ್ದು !

ಚೀನದಿಂದ ವೈರಸ್‌ನ ಜೀನೋಮ್‌ ಡೇಟಾ ಬಿಡುಗಡೆ

Team Udayavani, Jun 20, 2020, 12:40 PM IST

ಹೊಸ ಕೋವಿಡ್‌ 19: ಯುರೋಪ್‌ ಮೂಲದ್ದು !

ರೋಮ್‌: ಹೆಚ್ಚಿನ ಸಂಖ್ಯೆಯಲ್ಲಿ ವೃದ್ಧರನ್ನು ಹೊಂದಿರುವ ಇಟಲಿಯಲ್ಲಿ ವೃದ್ಧರೊಬ್ಬರನ್ನು ಅವರ ಮನೆಯಲ್ಲೇ ಪರೀಕ್ಷಿಸುತ್ತಿರುವ ವೈದ್ಯರು.

ಬೀಜಿಂಗ್‌: ಇತ್ತೀಚೆಗೆ ಬೀಜಿಂಗ್‌ನಲ್ಲಿ ಏಕಾಏಕಿ ಕಾಣಿಸಿಕೊಂಡ ಹೊಸ ಕೊರೊನಾ ವೈರಸ್‌ನ ಮೂಲದ ಬಗ್ಗೆ ಅಂಕಿ – ಅಂಶ ಬಿಡುಗಡೆ ಮಾಡಿದೆ. ಪ್ರಾಥಮಿಕ ಅಧ್ಯಯನಗಳ ಆಧಾರದ ಮೇಲೆ ಚೀನ ಅಧಿಕಾರಿಗಳು ಶುಕ್ರವಾರ ಬಿಡುಗಡೆ ಮಾಡಿದ ದಾಖಲೆಗಳ ಪ್ರಕಾರ ಹೊಸ ಕೋವಿಡ್‌ -19ನ ವಂಶವಾಹಿಯು ಯುರೋಪಿಯನ್‌ ಮೂಲದ್ದು ಎಂದು ಗುರುತಿಸಲಾಗಿದೆ ಎಂದಿದ್ದಾರೆ.

ದೇಶದ ರಾಜಧಾನಿಯಲ್ಲಿ ಹೊಸ ಕೋವಿಡ್‌ -19 ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಬೇಗನೆ ದತ್ತಾಂಶವನ್ನು ಸಾರ್ವಜನಿಕರಿಗೆ ತಿಳಿಯ ಪಡಿ ಸಬೇಕಾದ ಒತ್ತಡದಲ್ಲಿದ್ದ ಚೀನವು ಇದೀಗ ದಾಖಲೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಗೆ ಸಲ್ಲಿಸಿದೆ ಎನ್ನಲಾಗಿದೆ. ಚೀನದ ನ್ಯಾಷನಲ್‌ ಮೈಕ್ರೋಬಯಾಲಜಿ ಡಾಟಾ ಸೆಂಟರ್‌ನ ವೆಬ್‌ಸೈಟ್‌ನಲ್ಲಿ ಪ್ರಕಟವಾದ ಜೀನೋಮ್‌ ಸೀಕ್ವೆನ್ಸಿಂಗ್‌ ಡೇಟಾ ವಿವರಗಳನ್ನು ಜೂನ್‌ 11ರಂದು ಸಂಗ್ರಹಿಸಲಾದ ಮೂರು ಮಾದರಿ (ಎರಡು ಮಾನವ ಮೂಲ ಮತ್ತು ಒಂದು ಪರಿಸರ ಮೂಲ)ಗಳ ದಂತ್ತಾಂಶಗಳನ್ನು ಆಧರಿಸಿ ಸಿದ್ಧಪಡಿಸಲಾಗಿದೆ.

ಜೂ. 11ರಂದು ಬೀಜಿಂಗ್‌ನಲ್ಲಿ ಮೊದಲ ಹೊಸ ಸ್ಥಳೀಯ ಕೋವಿಡ್‌ -19 ಪ್ರಕರಣ ಪತ್ತೆಯಾಗಿತ್ತು. ಅನಂತರದ ಎಂಟು ದಿನಗಳಲ್ಲಿ ಸುಮಾರು 183 ಪ್ರಕರಣಗಳು ನಗರದಲ್ಲಿ ವರದಿಯಾಗಿವೆ. ಇದು ನಗರದ ನೈಋತ್ಯದಲ್ಲಿರುವ ಕ್ಸಿನ್‌ಫಾಡಿಯದ ಸಗಟು ಆಹಾರ ಮಾರುಕಟ್ಟೆ ಕೇಂದ್ರದ ಮೂಲಕ ಹರಡಿದ ಪ್ರಕರಣಗಳು ಎನ್ನಲಾಗಿವೆ. ಪ್ರಾಥಮಿಕ ಜೀನೋಮಿಕ್‌ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಅಧ್ಯಯನ ಫಲಿತಾಂಶಗಳ ಪ್ರಕಾರ, ವೈರಸ್‌ ಯುರೋಪಿನಿಂದ ಬಂದಿದೆ, ಆದರೆ ಇದು ಪ್ರಸ್ತುತ ಯುರೋಪಿನಲ್ಲಿ ಹರಡಿರುವ ವೈರಸ್‌ಗಿಂತ ಅದು ಭಿನ್ನವಾಗಿದೆ ಎಂದು ಚೀನದ ರೋಗ ನಿಯಂತ್ರಣ ಮತ್ತು ತಡೆಗಟ್ಟುವಿಕೆ (ಸಿಡಿಸಿ) ಅಧಿಕಾರಿ ಜಾಂಗ್‌ ಯೋಂಗ್‌ ಶುಕ್ರವಾರ ಪ್ರಕಟಿಸಿದ ಲೇಖನದಲ್ಲಿ ತಿಳಿಸಿದ್ದಾರೆ. ಆದರೆ ಬೀಜಿಂಗ್‌ನಲ್ಲಿ ಕಾಣಿಸಿಕೊಂಡ ವೈರಸ್‌ ಪ್ರಸ್ತುತ ಯುರೋಪಿನಲ್ಲಿ ಹರಡುವ ವೈರಸ್‌ಗಿಂತ ಹಳೆಯದು ಎಂದಿದ್ದಾರೆ.

ಚೀನಾದಲ್ಲಿ ವೈರಸ್‌ ಹೇಗೆ ಬಂದಿತು ಎಂಬುದಕ್ಕೆ ಹಲವಾರು ಸಾಧ್ಯತೆಗಳಿವೆ ಎಂದು ಜಾಂಗ್‌ ಹೇಳಿದರು. ಆಮದು ಮಾಡಿದ ಹೆಪ್ಪುಗಟ್ಟಿದ ಆಹಾರ ಉತ್ಪನ್ನಗಳಲ್ಲಿ ವೈರಸ್‌ ಮರೆಯಾಗಿದ್ದರಬಹುದು ಅಥವಾ ಕ್ಸಿನ್‌ಫಾಡಿಯದ ಸಗಟು ಮಾರುಕಟ್ಟೆ ತೇವಾಂಶವುಳ್ಳ ವಾತಾವರಣದಿಂದ ಕೂಡಿದ್ದು ಅಲ್ಲಿ ವೈರಸ್‌ ಸುಪ್ತವಾಗಿ ಅಡಗಿರುವ ಸಾಧ್ಯತೆ ಇದೆ. ಆ ಪರಿಸರವನ್ನು ಸೋಂಕುರಹಿತ ಅಥವಾ ಕ್ರಿಮಿನಾಶಕಗಳನ್ನು ಬಳಸಿ ಸ್ವತ್ಛಗೊಳಿಸಿರಲಿಲ್ಲ ಎಂದು ಜಾಂಗ್‌ ಸೆಂಟ್ರಲ್‌ ಕಮಿಷನ್‌ ಫಾರ್‌ಡಿಸಿಪ್ಲಿನ್‌ ಇನ್‌ಸ್ಪೆಕ್ಷನ್‌ನಲ್ಲಿ ಪ್ರಕಟಿಸಿದ ಲೇಖನದಲ್ಲಿ ವಿವರಿಸಿದ್ದಾರೆ.

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್‌ ಕಡ್ಡಾಯ

UP government mandates Covid testing for arriving international passengers

Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ

mansukh mandaviya

ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ

India Sees Single-Day Rise Of Over 1,000 Covid-19 Cases

ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.