ಸೋಲನ್ನು ಮೆಟ್ಟಿ ನಿಂತ ಸಾಧಕನ ಸ್ಫೂರ್ತಿಯ ಕಥೆ
Team Udayavani, Jun 21, 2020, 8:51 AM IST
ಜೀವನದಲ್ಲಿ ಸೋಲು ಮುಖ್ಯ ಅಲ್ಲ. ಆದರೆ ಸೋಲನ್ನು ಮೆಟ್ಟಿ ನಿಂತು ಸಾಧಿಸುವುದು ಮುಖ್ಯ. ಹೋಂಡಾ ಕಂಪೆನಿ ಅಂದರೆ ಎಲ್ಲರಿಗೂ ಚಿರಪರಿಚಿತ. ಈ ವಿಶ್ವವಿಖ್ಯಾತ ಕಂಪೆನಿಯ ಸ್ಥಾಪಕ ಸೋಯಿಚಿರೋ ಹೋಂಡಾರವರ ಕಲ್ಲು ಮುಳ್ಳಿನ ಹಾದಿಯ ಕಥೆಯೂ ನಮ್ಮೆಲ್ಲರ ಜೀವನಕ್ಕೆ ಸ್ಫೂರ್ತಿದಾಯಕವಾದುದು.
ಬಡ ಕುಟುಂಬದಲ್ಲಿ ಹುಟ್ಟಿದ ಸೋಯಿ ಚಿರೋ ಹೋಂಡಾ ಚಿಕ್ಕಂದಿನಿಂದಲೇ ಏನಾದರೂ ಸಾಧನೆ ಮಾಡಬೇಕು ಎನ್ನುವ ಅದಮ್ಯ ಬಯಕೆ ಇಟ್ಟುಕೊಂಡಿದ್ದರು. ಹಾಗೆಯೇ ಕಾಲೇಜಿನ ವರ್ಕ್ ಶಾಪ್‌ನಲ್ಲಿದ್ದಾಗ ಹಠಾತ್ತಾನೆ ಪಿಸ್ಟನ್ ತಯಾರಿಸುವ ಐಡಿಯಾ ಹೊಳೆಯಿತು. ಹಗಲು-ರಾತ್ರಿ ಶ್ರಮಪಟ್ಟು ತಯಾರಿಸಿ ಟೊಯೊಟೊ ಕಂಪೆನಿಗೆ ಮಾರಲು ಹೋದಾಗ, ಗುಣ ಮಟ್ಟದ ಉತ್ಪನ್ನ ಇದಲ್ಲ ಎಂದು ಕಂಪೆನಿ ನಿರಾಕರಿಸಿತು. ಎಲ್ಲರೂ ಗೇಲಿ ಮಾಡಿ ನಕ್ಕರು. ಆದರೆ ಹೋಂಡಾ ಅವರು ಮಂದಹಾಸ ಬೀರಿ ತನ್ನ ಪ್ರಯತ್ನವನ್ನು ಮುಂದುವರಿಸಿದರು. ಮುಂದೊಂದು ದಿನ ತನ್ನ ಸತತ ಪ್ರಯತ್ನದಿಂದ ತನ್ನದೇ ಆದ ಫ್ಯಾಕ್ಟರಿಯನ್ನು ಆರಂಭಿಸಿದರು.
ಆದರೆ ಭೂಕಂಪಕ್ಕೀಡಾಗಿ ಧರೆಗುರುಳಿತು. ಮತ್ತೆ ಕಾರ್ಖಾನೆ ನಿರ್ಮಾಣಕ್ಕೆ ಮುಂದಾದಾಗ 2ನೇ ಮಹಾಯುದ್ಧವು ಪ್ರವೇಶಿಸಿಬಿಟ್ಟಿತ್ತು. ಆ ಹೊತ್ತಿಗೆ ಸಿಮೆಂಟಿನ ಪೂರೈಕೆ ನಿಂತೇ ಹೋಯ್ತು. ಆದರೆ ಇದಕ್ಕೆಲ್ಲ ತಲೆಕೆಡಿಸಿಕೊಳ್ಳದ ಹೋಂಡಾ ಅವರು ತಾನೆೇ ಸಿಮೆಂಟ್ ತಯಾರಿಸಿ ಕಾರ್ಖಾನೆಯ ಕೆಲಸ ಪೂರ್ಣಗೊಳಿಸಿದರು. ಹೀಗೆ ಮುಂದಿನ ದಿನಗಳಲ್ಲಿ ಹಲವು ಬಾರಿ ಸೋಲುಗಳನ್ನು ಕಂಡರೂ ಎಲ್ಲವನ್ನೂ ಮೆಟ್ಟಿನಿಂತು ಮುಂದೊಂದು ದಿನ ಹೋಂಡಾ ಕಂಪೆನಿಯನ್ನು ಜಗದ್ವಿಖ್ಯಾತ ಮಾಡಿದರು.
ನಾವು ಸೋಯಿಚಿರೋ ಹೋಂಡಾ ಅವರ ಜಾಗದಲ್ಲಿ ಇದ್ದಿದ್ದರೆ ಏನು ಮಾಡುತ್ತಿದ್ದೆವು? ಎಷ್ಟೇ ಸೋಲು ಕಂಡರೂ ಹೋಂಡಾ ಅವರು ಮಂದ ಹಾಸ ಬೀರಿ ಅದನ್ನೆಲ್ಲ ಜಯಿಸಿ ಮುನ್ನಡೆದು ಇಡೀ ವಿಶ್ವಕ್ಕೆ ಮಾದರಿ ಯಾದರು. ನಮಗೂ ಕೂಡ ಜೀವನದಲ್ಲಿ ಸೋಲುಗಳು ಬರುವುದು ಸಹಜ. ಆದರೆ ಅವನ್ನೆಲ್ಲ ಮೆಟ್ಟಿ ಮಂದಹಾಸ ಬೀರಿ ಜಯಿಸಬೇಕು ಅಷ್ಟೇ… ಎಲ್ಲದಕ್ಕೂ ಸಾಧಿಸುವ ಛಲವಿರಬೇಕು…
ರಾಜೇಶ್ ಎಸ್. ಬಲ್ಯ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tiger: ಬೆಂಗಳೂರಿನಿಂದ ತಿರುಪತಿ ಮೃಗಾಲಯಕ್ಕೆ ತಂದಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.