![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Jun 20, 2020, 5:18 PM IST
ಉಳ್ಳಾಲ: ಬೋಳಿಯಾರು ಗ್ರಾಮದ ಜಾರದಗುಡ್ಡೆ ಬಳಿಯ ನೇತ್ರಾವತಿ ನದಿ ಬಳಿ ಆಟವಾಡುತ್ತಿದ್ದ 15ವರ್ಷ ಪ್ರಾಯದ ಮೊಹಮ್ಮದ್ ಫಾಝಿಲ್ ನದಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿದ್ದಾನೆ.
ಫಾಝಿಲ್ ತನ್ಬ ಇಬ್ಬರು ಸ್ನೇಹಿತರೊಂದಿಗೆ ಮನೆ ಸಮೀಪದ ನೇತ್ರಾವತಿ ನದಿಯಲ್ಲಿ ಆಟವಾಡುವ ಸಂದರ್ಭ ಘಟನೆ ನಡೆದಿದ್ದು ಉಳಿದಿಬ್ಬರು ಮಕ್ಕಳು ಬೊಬ್ಬೆ ಹೊಡೆದಾಗ ಘಟನೆ ಬೆಳಕಿಗೆ ಬಂದಿದೆ. ಸ್ಥಳೀಯ ಯುವಕರ ತಂಡ ದೋಣಿ ಮೂಲಕ ಸುಮಾರು 1 ಘಂಟೆಯ ಕಾಲ ನದಿಯಲ್ಲಿ ಜಿವನದ ಹಂಗನ್ನು ತೊರೆದು ಹುಡುಕಾಡಿ ದೇಹವನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.
ಶೋಧ ಕಾರ್ಯದಲ್ಲಿ ಬದ್ರುದ್ದೀನ್ ಪಾನೆಲ, ಸಾಜಿದ್, ಸತ್ತಾರ್, ಶೆರೀಫ್ ಬೋಳಿಯಾರು, ಪೈಝಲ್, ನೌಶಾದ್, ನಾಸೀರ್, ಸಮದ್,ಅಕ್ರಂ, ಇತರ ಯುವಕರು ಸಹಕರಿಸಿದರು.
ಮೃತ ದೇಹವನ್ನು ಯೇನೆಪೋಯ ಅಸ್ಪತ್ರೆಯಲ್ಲಿ ಇರಿಸಲಾಗಿದೆ. ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
You seem to have an Ad Blocker on.
To continue reading, please turn it off or whitelist Udayavani.