ಹಜ್‌ಭವನ ಇನ್ನು ಕೋವಿಡ್ 19 ಆಸ್ಪತ್ರೆ
Team Udayavani, Jun 21, 2020, 5:37 AM IST
ಬೆಂಗಳೂರು: ನಗರದಲ್ಲಿ ಸೋಂಕಿತರ ಸಂಖ್ಯೆ ದಿನದಿಂದ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ತೆರದ ಮಾದರಿಯ ಆಸ್ಪತ್ರೆಗಳನ್ನು ಪ್ರಾರಂಭಿಸಲು ಪಾಲಿಕೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಇದರ ಭಾಗವಾಗಿ ನಗರ ಹಜ್‌ಭವನವನ್ನು ಸೋಂಕು ಚಿಕಿತ್ಸಾ ಕೇಂದ್ರವಾಗಿ ಬದಲಾಯಿಸಲಾಗಿದೆ.
ಹಜ್‌ಭವನದಲ್ಲಿ 500 ಜನರಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಿಕೊಳ್ಳಲಾಗಿದ್ದು, ಇಲ್ಲಿ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ (ಎಸಿಮ್‌ಟಂಸ್) ಅವರಿಗೆ ಚಿಕಿತ್ಸೆ ನೀಡಲು ಪಾಲಿಕೆ ಮುಂದಾಗಿದೆ. ಕೋವಿಡ್ 19 ಎ-ಸಿಮ್‌ಟಂಸ್ ಸೋಂಕಿತರ ಚಿಕಿತ್ಸೆಗೆ ಹಜ್‌ಭವನದಲ್ಲಿ ಮಾಡಿಕೊಂಡಿರುವ ಸಿದ್ಧತೆಗಳ ಬಗ್ಗೆ ಬಿಬಿಎಂಪಿ ಆಯುಕ್ತ ಬಿ.ಎಚ್.ಅನಿಲ್‌ಕುಮಾರ್ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಗರದಲ್ಲಿ ಎ- ಸಿಮ್‌ಟಂಸ್ ಸೋಂಕು ಕಾಣಿಸಿಕೊಂಡ ವರನ್ನು ಅವರ ಮನೆಗಳಲ್ಲೇ ಚಿಕಿತ್ಸೆ ನೀಡಲು ಪಾಲಿಕೆ ಚಿಂತನೆ ನಡೆಸಿತ್ತು. ಎ ಸಿಮ್‌ಟಂಸ್ ಸೋಂಕು ಇರು ವವರು (ಕೋವಿಡ್ 19 ಸೋಂಕು ಇದ್ದರೂ, ಸೋಂಕಿನ ಲಕ್ಷಣಗಳು ಕಾಣಿಸಿಕೊಳ್ಳದ ಸ್ಥಿತಿ) ಇರುವವರಿಗೆ ಚಿಕಿತ್ಸೆ ನೀಡಲು ಚಿಂತನೆ ನಡೆಸಿತ್ತು. ಎ- ಸಿಮ್‌ಟಂಸ್‌ನವರು ಉಳಿದವರಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆ ಇದ್ದು, ಆಸ್ಪತ್ರೆಗಳಿಗಿಂತ ಮನೆಯಲ್ಲೇ ಚಿಕಿತ್ಸೆ ನೀಡಬಹುದು.
ಈ ಮೂಲಕ ಆಸ್ಪತ್ರೆಗಳಲ್ಲಿನ ಹಾಸಿಗೆ ಕೊರತೆ ಉಂಟಾಗುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಸಹಕಾರಿಯಾಗಲಿದೆ ಎನ್ನುವುದು ಪಾಲಿಕೆಯ ಲೆಕ್ಕಾಚಾರವಾಗಿತ್ತು. ಇದರ ಭಾಗವಾಗಿಯೇ ಸದ್ಯ ನಗರದಲ್ಲಿನ ವಿಶಾಲ ಪ್ರದೇಶಗಳಾದ ಕ್ರೀಡಾಂಗಣ, ಸಮುದಾಯ ಭವನ ಹಾಗೂ ಸರ್ಕಾರಿ ಪ್ರದೇಶಗಳಲ್ಲಿ ತೆರೆದ ಮಾದರಿಯ ಕೊವೀಡ್ 19 ಚಿಕಿತ್ಸಾ ಕೇಂದ್ರಗಳನ್ನು ಪಾಲಿಕೆ ಪ್ರಾರಂಭಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadagiri: ಕೆಡಿಪಿ ಸಭೆಯಲ್ಲಿ ಸಚಿವರ-ಶಾಸಕರ ನಡುವೆ ವಾಕ್ ಸಮರ!
Bengaluru: ಅನಧಿಕೃತ ಮಳಿಗೆಗಳ ತೆರವು ಕೋರಿ ಅರ್ಜಿ:ಪಾಲಿಕೆಗೆ ಹೈಕೋರ್ಟ್ ನೋಟಿಸ್
Bengaluru: ವಿಶ್ವನಾಥ್‌ಗೆ ಕೊಲೆ ಬೆದರಿಕೆ: ಆರೋಪಿ ಅರ್ಜಿ ವಜಾ
BGT 2024: ಬುಮ್ರಾ ಬೆಂಕಿ ದಾಳಿಗೆ ನಲುಗಿದ ಆಸೀಸ್: ಭಾರತದ ಹಿಡಿತದಲ್ಲಿ ಪರ್ತ್ ಟೆಸ್ಟ್
Bengaluru: ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಯುವಕ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.