ಪರಿಸರ ರಕ್ಷಣೆ ಎಲ್ಲರ ಹೊಣೆಯಾಗಲಿ
Team Udayavani, Jun 21, 2020, 6:44 AM IST
ರಾಮನಗರ: ಇಲ್ಲಿನ ರೋಟರಿ ಸಿಲ್ಕ್ ಸಿಟಿ, ಬೆಂಗಳೂರಿನ ರೋಟರಿ ಉದ್ಯೋಗ್, ಸಮೃದ್ಧಿ ಟ್ರಸ್ಟ್, ಕೈ ಜೋಡಿಸಿ ಸಂಘಟನೆಗಳ ಸಂಯುಕ್ತವಾಗಿ ನಗರದ ಪೊಲೀಸ್ ಭವನದ ಆವರಣದಲ್ಲಿ ಸುಮಾರು 50 ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಪರಿಸರ ಕಾಳಜಿ ಇರಿಸಿ ಗೋ ಗ್ರೀನ್ ಎಂಬ ಕಾರ್ಯಕ್ರಮ ಹಮ್ಮಿಕೊಂಡಿರುವ ಈ ತಂಡಗಳು ಪೊಲೀಸ್ ಭವನದ ಆವರಣದಲ್ಲಿ ಹಣ್ಣಿನ ಸಸಿ ನೆಟ್ಟರು.
ಎಸ್‌ಪಿ ಅನೂಪ್ ಎ. ಶೆಟ್ಟಿ ಮಾತನಾಡಿ, ನಿಸರ್ಗ ಕಾಪಾಡಿಕೊಳ್ಳುವ ಉದ್ದೇಶದಲ್ಲಿ ಈ ಸಂಘಟನೆಗಳು ಹಮ್ಮಿಕೊಂಡಿರುವ ಅಭಿ ಯಾನ ಶ್ಲಾಘನೀಯ. ಪರಿಸರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು ಎಂದು ಸಲಹೆ ನೀಡಿದರು. ಡಿವೈಎಸ್‌ಪಿ ಪುರುಷೋತ್ತಮ ಮಾತನಾಡಿ, ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಆವರಣದಲ್ಲಿ ಸುಮಾರು 5 ಸಾವಿರ ಸಸಿ ನೆಡುವ ಉದ್ದೇಶ ಪ್ರಕಟಿಸಿದರು.
ಗೋ ಗ್ರೀನ್ ಅಭಿಯಾನದ ರಾಯಭಾರಿ ಹಾಗೂ ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಮಾತನಾಡಿ, ಕನಿಷ್ಠ 50 ಸಾವಿರ ಸಸಿ ನೆಟ್ಟು ಪರಿಸರ ಉಳಿಸುವ ಉದ್ದೇಶ ಕೈ ಜೋಡಿಸಿ ಸಂಸ್ಥೆಗಿದೆ. ಇದಕ್ಕೆ ಪೊಲೀಸ್ ಇಲಾಖೆ ಮತ್ತು ರೋಟರಿ ಸಂಸ್ಥೆಗಳು ಸಹಕಾರ ನೀಡುತ್ತಿವೆ ಎಂದರು. ರೋಟರಿ ಸಿಲ್ಕ್ ಸಿಟಿ ಅಧ್ಯಕ್ಷ ಎ.ಜೆ.ಸುರೇಶ್, ಕಾರ್ಯದರ್ಶಿ ಆರ್.ಶಿವರಾಜು, ಭಾರತ್ ಆನ್‌ವೀಲ್ಸ್ ಬೈಕ್ ರೈಡರ್ನ ಜಕೀರ್ ಆಲಿ, ರೋಟರಿ ಉದ್ಯೋಗನ ರವಿಕುಮಾರ್, ಅಂತಾರಾಷ್ಟ್ರೀಯ ಬಾಸ್ಕೆಟ್‌ಬಾಲ್ ಪಟು ಮತ್ತು ಕೈ ಜೋಡಿಸಿ ಸಂಸ್ಥೆಯ ರೇಷ್ಮ ಯತೀಶ್ ಮುಂತಾದವರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
By Election: ದೇವೇಗೌಡರನ್ನು 1994ರಲ್ಲಿ ಮುಖ್ಯಮಂತ್ರಿ ಮಾಡಿದ್ದೇ ನಾನು: ಸಿಎಂ ಸಿದ್ದರಾಮಯ್ಯ
Ramanagara: ಆರು ಟ್ರಾನ್ಸ್ ಫಾರ್ಮರ್ ಗಳ ಕಳವು
Congress Government: ಉಪಚುನಾವಣೆ ಬಳಿಕ ಗೃಹಲಕ್ಷ್ಮಿ ಸ್ಥಗಿತ: ಎಚ್.ಡಿ.ದೇವೇಗೌಡ ಭವಿಷ್ಯ
By Election: ಗದ್ದುಗೆ ಸೈನಿಕ ಯೋಗೇಶ್ವರ್‌ಗೋ? ನಿಖಿಲ್ ಕುಮಾರಸ್ವಾಮಿಗೋ?
MUST WATCH
ಹೊಸ ಸೇರ್ಪಡೆ
Bhairathi Ranagal: ಭೈರತಿ ಪಾತ್ರಕ್ಕೊಂದು ಸದುದ್ದೇಶವಿದೆ..: ಶಿವರಾಜ್ ಕುಮಾರ್
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
Notice: ಸಂಗೀತ ಕಾರ್ಯಕ್ರಮಕ್ಕೂ ಮುನ್ನ ಪಂಜಾಬಿ ಗಾಯಕ ದಿಲ್ಜಿತ್ ದೋಸಾಂಜ್ ಗೆ ನೋಟಿಸ್
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.