ಅಪ್ಪನ ನೆನಪು: ನಿಮ್ಮ ತ್ಯಾಗ, ಪಟ್ಟ ಕಷ್ಟ ಹೇಳಲು ಪದಗಳೇ ಇಲ್ಲ…
ಅಮ್ಮ ನಮ್ಮನ್ನು ಹೆತ್ತರೆ ನೀನು ನಮ್ಮನ್ನು ಹೊತ್ತೆ. ಅಪ್ಪ ನಿಮಗೆ ಯಾವತ್ತೂ ನಾವು ಚಿರಋಣಿ.
Team Udayavani, Jun 21, 2020, 9:48 AM IST
ಅಪ್ಪ ನಿನ್ನ ಬಗ್ಗೆ ಏನಂತ ಹೇಳಲಿ, ಒಂದು ದಿನದಲ್ಲಿ ಕೆಲವೇ ಶಬ್ದಗಳಲ್ಲಿ ಹೇಳುವಂತದ್ದಲ್ಲ, ನೀನು ನಮಗಾಗಿ ಮಾಡಿದ ತ್ಯಾಗ, ಪಟ್ಟ ಕಷ್ಟಗಳು ಹೇಳಲು ಪದಗಳೇ ಇಲ್ಲ. ಅಂದಿನಿಂದ ಇಂದಿನವರೆಗೆ ನಮ್ಮ ಜೊತೆ ಸ್ನೇಹಿತರಂತೆ ಇದ್ದು ನಮ್ಮ ಪ್ರತಿಯೊಂದು ಕಾರ್ಯದಲ್ಲಿ ಬೆನ್ನೆಲುಬಾಗಿ ನಿಂತು ಉದ್ಯೋಗದಲ್ಲಿ ಮಾರ್ಗದರ್ಶಿಯಾಗಿ ನಮ್ಮ ಯಶಸ್ಸಿಗೆ ಕಾರಣೀಭೂತರಾಗಿದ್ದಾರಿ. ಇವತ್ತು ನಾವು ಏನು ತೋರುತ್ತಿದ್ದೇವೆ ಅದರ ಹಿಂದಿನ ಬೆಳಕು ನೀವು.
ಅಪ್ಪ ನೀನಿಲ್ಲದೆ ನಮಗೆ ಪ್ರಪಂಚವೇ ಇಲ್ಲ. ಅಮ್ಮ ನಮ್ಮನ್ನು ಹೆತ್ತರೆ ನೀನು ನಮ್ಮನ್ನು ಹೊತ್ತೆ. ಅಪ್ಪ ನಿಮಗೆ ಯಾವತ್ತೂ ನಾವು ಚಿರಋಣಿ. ನಿಮ್ಮ ಋಣ ನಾವು ಎಷ್ಟು ಜನ್ಮ ಎತ್ತಿ ಬಂದರು ತೀರಿಸಲು ಸಾಧ್ಯವಿಲ್ಲ. ಐ ಲವ್ ಯು ಅಪ್ಪ. ನಿಮ್ಮ ಆಶೀರ್ವಾದ ಬೇಡುತ್ತಾ,
ನಿಮ್ಮ ಮಕ್ಕಳು
ವೆಂಕಟೇಶ್ ಶೆಣೈ, ವಿಠ್ಠಲ್ ಶೆಣೈ, ವಿಜಯ್ ಶೆಣೈ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.