ಮಳೆ ನಿರೀಕ್ಷೆ ಮಧ್ಯೆ ಬಿತ್ತನೆ ಆರಂಭ
ಸೊಯಾಬಿನ್ ಬೀಜಕ್ಕೆ ಸರ್ಕಾರದ ನಿರ್ಬಂಧ ತೊಗರಿ ಬಿತ್ತನೆಗೆ ಸಲಹೆ
Team Udayavani, Jun 21, 2020, 6:06 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಆಳಂದ: ಮಳೆಯ ನಿರೀಕ್ಷೆಯೊಂದಿಗೆ ತಾಲೂಕಿನ ರೈತರು ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯವನ್ನು ಭರದಿಂದ ಆರಂಭಿಸಿದ್ದಾರೆ.
ಹಲವೆಡೆ ಬಿತ್ತನೆಗೆ ಪೂರಕವಾಗುವಷ್ಟು ಮಳೆಯಾಗಿದ್ದು, ಇನ್ನೂ ಕೆಲವೆಡೆ ಮಳೆಯ ಅಗತ್ಯವಾಗಿದ್ದು, ಆದರೂ ರೈತ ಸಮುದಾಯ ಮಳೆಯ ನಿರೀಕ್ಷೆಯಲ್ಲಿ ಬಿತ್ತನೆ ಕಾರ್ಯ ಆರಂಭಿಸಿದ್ದು, ಶುಕ್ರವಾರವರೆಗೆ ಶೇ.13ರಷ್ಟು ಬಿತ್ತನೆ ನಡೆದಿದ್ದು, ಸೋಮವಾರದವರೆಗೆ ಶೇ.40ರಷ್ಟು ಬಿತ್ತನೆ ಆಗಲಿದೆ ಎಂದು ಇಲಾಖೆಯ ಅಧಿಕಾರಿಗಳು ಅಂದಾಜಿಸಿದ್ದಾರೆ.
ಈಗಾಗಲೇ ರೈತರು ಬೀಜ, ರಸಗೊಬ್ಬರ ಖರೀದಿಸಿ ಅನೇಕರು ಎತ್ತುಗಳಿಂದ ಮತ್ತು ಎತ್ತು ಇಲ್ಲದವರು ಟ್ರ್ಯಾಕ್ಟರ್‌ಗಳ ಮೂಲಕ ತೊಗರಿ, ಸಜ್ಜೆ, ಉದ್ದು, ಹೆಸರು, ಸೂರ್ಯಕಾಂತಿ ಮೆಕ್ಕೆಜೋಳ ಹೀಗೆ ಇನ್ನಿತರ ಬೀಜಗಳ ಬಿತ್ತನೆ ಆರಂಭಿಸಿದ್ದಾರೆ. ಆದರೆ ಬಹು ನಿರೀಕ್ಷಿತ ಬಿತ್ತನೆ ಹಾಗೂ ರೈತರ ಒಲವು ಆಗಿದ್ದ ಸೊಯಾಬಿನ್ ಬೀಜದ ದೋಷಪೂರಿತವಾಗಿವೆ. ಈ ಬಾರಿ ಬಿತ್ತಲೆ ಬಾರದು ಎಂಬ ಅಧಿಕಾರಿಗಳ ಕಟ್ಟಪ್ಪಣೆಯಿಂದಾಗಿ ರೈತರು ಗೊಂದಲಕ್ಕೆ ಒಳಗಾಗಿದ್ದಾರೆ. ಅನೇಕರು ದುಬಾರಿ ಬೆಲೆಯಲ್ಲಿ ಖಾಸಗಿ ಅಂಗಡಿಗಳಿಂದ ಸೊಯಾಬಿನ್ ಖರೀದಿಸಿದ್ದಾರೆ. ಅಧಿಕಾರಿಗಳ ಹೇಳಿಕೆಯಿಂದ ಗೊಂದಲಕ್ಕೆ ಸಿಲುಕಿದ್ದಾರೆ. ಮುಂಗಾರು ಹಂಗಾಮಿಗೆ ಸಂಬಂಧಿಸಿದಂತೆ ತಾಲೂಕಿನ ಒಟ್ಟು 1,31,131 ಕ್ಷೇತ್ರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕೈಗೊಳ್ಳಲು ರೈತರ ಮುಂದಾಗಿದ್ದಾರೆ.
ಒಟ್ಟು ತೃಣಧಾನ್ಯ: ಆಳಂದ ವಲಯಕ್ಕೆ 566 ಹೆಕ್ಟೇರ್, ಖಜೂರಿ 811 ಹೆಕ್ಟೇರ್, ನರೋಣಾ 601 ಹೆಕ್ಟೇರ್, ಮಾದನಹಿಪ್ಪರಗಾ 766 ಹೆಕ್ಟೇರ್, ನಿಂಬರಗಾ 921 ಹೆಕ್ಟೇರ್ ಹೀಗೆ ಒಟ್ಟು 3,665 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದೆ.
ಬೆಳೆಕಾಳು: ಆಳಂದ ವಲಯಕ್ಕೆ 19340 ಹೆಕ್ಟೇರ್, ಖಜೂರಿ 21090 ಹೆಕ್ಟೇರ್, ನರೋಣಾ 20415 ಹೆಕ್ಟೇರ್, ಮಾದನಹಿಪ್ಪರಗಾ 19360 ಹೆಕ್ಟೇರ್, ನಿಂಬರಗಾ 26785 ಹೆಕ್ಟೇರ್ ಸೇರಿ ಒಟ್ಟು 1,07,000 ಹೆಕ್ಟೇರ್ ಬಿತ್ತನೆ ಗುರಿ ಇದೆ.
ಎಣ್ಣೆ ಕಾಳು: ಆಳಂದ ವಲಯಕ್ಕೆ 2477 ಹೆಕ್ಟೇರ್, ಖಜೂರಿ 4272 ಹೆಕ್ಟೇರ್, ನರೋಣಾ 3642, ಮಾದನಹಿಪ್ಪರಗಾ 2027, ನಿಂಬರಗಾ 2217 ಹೆಕ್ಟೇರ್ ಸೇರಿ ಒಟ್ಟು 14,635 ಹೆಕ್ಟೇರ್ ಬಿತ್ತನೆ ಗುರಿಯಿದೆ.
ವಾಣಿಜ್ಯ ಬೆಳೆ: ಆಳಂದ ವಲಯ 643 ಹೆಕ್ಟೇರ್, ಖಜೂರಿ 468 ಹೆಕ್ಟೇರ್, ನರೋಣಾ 775 ಹೆಕ್ಟೇರ್, ಮಾದನಹಿಪ್ಪರಗಾ 338 ಹೆಕ್ಟೇರ್, ನಿಂಬರಗಾ 3607 ಹೆಕ್ಟೇರ್ ಸೇರಿ ಒಟ್ಟು 5831 ಹೆಕ್ಟೇರ್ ಗುರಿಯಿದೆ. ಹೀಗೆ ಒಟ್ಟು ನೀರಾವರಿ ಹಾಗೂ ಖುಷ್ಕಿ ಸೇರಿ ಬಿತ್ತನೆಯ ಕ್ಷೇತ್ರವನ್ನು ಆಳಂದ ವಲಯದ 23026 ಹೆಕ್ಟೇರ್, ಖಜೂರಿ 26641 ಹೆಕ್ಟೇರ್, ನರೋಣಾ 25443 ಹೆಕ್ಟೇರ್, ಮಾದನಹಿಪ್ಪರಗಾ 22491 ಹೆಕ್ಟೇರ್, ನಿಂಬರಗಾ 33530 ಹೆಕ್ಟೇರ್ ಒಳಗೊಂಡು ಈ ಬಾರಿ 1,31,131 ಹೆಕ್ಟೇರ್ ಮುಂಗಾರು ಬಿತ್ತನೆ ಗುರಿ ಹೊಂದಲಾಗಿದೆ. ಈ ಪೈಕಿ ಸೋಮವಾರದ ವರೆಗೆ ಮಳೆಯ ಬಿಡುವು ನೀಡಿದ್ದರಿಂದ ಶೇ.40ರಷ್ಟು ಬಿತ್ತನೆ ಪೂರ್ಣಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ.
ಪರ್ಯಾಯ ಬಿತ್ತನೆ ಕೈಗೊಳ್ಳಿ: ಈ ನಡುವೆ ತಾಲೂಕಿನಲ್ಲಿ ಸುಮಾರು 8 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬೀಜದ ಬಿತ್ತನೆಗೆ ಗುರಿಯಿಟ್ಟುಕೊಂಡಿದ್ದ ಕೃಷಿ ಇಲಾಖೆ ವಿತರಣೆಗಾಗಿ ಈ ಬೀಜದ ದಾಸ್ತಾನು ಕೈಗೊಂಡಿತ್ತಾದರು. ನಂತರ ಈ ಬೀಜ ದೋಷದಿಂದ ಕೂಡಿದೆ. ದಾಸ್ತಾನು ಕೈಗೊಂಡಿದ್ದ ಬೀಜವನ್ನು ವಿತರಣೆ ಹಂತದಲ್ಲೇ ಹಠಾತಾಗಿ ನಿಲ್ಲಿಸಿ ಬೀಜ ವಿತರಣೆ ಹಾಗೂ ಬಿತ್ತನೆಗೆ ನಿರ್ಬಂಧಿಸಿದೆ. ವಿತರಣೆ ಮಾಡಿದ ಬೀಜವನ್ನು ವಾಪಸ್ ಪಡೆಯಲಾಗಿದೆ. ಒಂದೊಮ್ಮೆ ಬೀಜ ವಾಪಸ್ ನೀಡದೆ ಅಥವಾ ಖಾಸಗಿವಾಗಿ ಬೀಜ ಖರೀದಿಸಿ ಬಿತ್ತನೆ ಕೈಗೊಂಡರೆ ರೈತರೆ ಹೊಣೆಯಾಗುತ್ತಾರೆ. ಇದಕ್ಕೆ ಸರ್ಕಾರ ಅಥವಾ ಕೃಷಿ ಇಲಾಖೆ ಹೊಣೆಯಾಗುವುದಿಲ್ಲ. ಸೋಯಾಬಿನ್ ಬಿತ್ತನೆ ಕೈಗೊಳ್ಳಬಾರದು. ಪರ್ಯಾಯವಾಗಿ ತೊಗರಿ ಇನ್ನಿತರ ಬಿತ್ತನೆ ಕೈಗೊಳ್ಳಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಶರಣಗೌಡ ಪಾಟೀಲ ಮನವಿ ಮಾಡಿದ್ದಾರೆ.
ಮಹಾದೇವ ವಡಗಾಂವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi: ವಿದ್ಯುತ್ ತಂತಿ ತಗುಲಿ 6 ಎಕರೆ ಕಬ್ಬಿನ ಬೆಳೆ ಬೆಂಕಿಗಾಹುತಿ
Kalaburagi: ಜಮೀನು ವ್ಯಾಜ್ಯ; ಪೆಟ್ರೋಲ್ ಸುರಿದು ಕುಟುಂಬಸ್ಥರ ಸಾಮೂಹಿಕ ಹತ್ಯೆಗೆ ಯತ್ನ
Kalaburagi; 36 ಗಂಟೆಯಲ್ಲಿ ತಾಯಿ ಮಡಿಲು ಸೇರಿದ ಮಗು: ಪೊಲೀಸರ ಭರ್ಜರಿ ಕಾರ್ಯಾಚರಣೆ
ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್ ಯತ್ನಾಳ್
Kalaburagi; ನಮ್ಮ ತಂಡದವರು ಸಿಎಂ ಆಗುವ ದಿನ ಬರಲಿದೆ: ಗುಡುಗಿದ ಯತ್ನಾಳ್
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಶಾಹಿ ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.