ಗಲ್ಫ್ ನಿಂದ ಬಂದ 1,575 ಮಂದಿ ಕ್ಷೇಮ ; ದ.ಕ.: ಆತಂಕ ದೂರ
Team Udayavani, Jun 22, 2020, 7:39 AM IST
ಸಾಂದರ್ಭಿಕ ಚಿತ್ರ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕಳೆದ 20 ದಿನಗಳ ಅವಧಿಯಲ್ಲಿ 1,814 ಮಂದಿ ಅನಿವಾಸಿ ಕರಾವಳಿಗರು ಬಂದಿಳಿದಿದ್ದಾರೆ. ಈ ಪೈಕಿ 239 ಮಂದಿಗಷ್ಟೇ ಕೋವಿಡ್ ಬಾಧಿಸಿದ್ದು, 1,575 ಮಂದಿ ನಿರಾತಂಕವಾಗಿ ಊರು ಸೇರಿದ್ದಾರೆ. ಕೋವಿಡ್ ಭೀತಿಯಿಂದಾಗಿ ವಿಶ್ವದ ಬಹುತೇಕ ರಾಷ್ಟ್ರಗಳು ಲಾಕ್‌ಡೌನ್ ಆಗಿ ಆರ್ಥಿಕ ಸಂಕಷ್ಟಕ್ಕೊಳಗಾಗಿವೆ. ಬಹುತೇಕ ರಾಷ್ಟ್ರಗಳು ತಮ್ಮಲ್ಲಿ ದುಡಿಯುತ್ತಿ ರುವ ವಿದೇಶಿಗರನ್ನು ತಾಯ್ನಾಡಿಗೆ ಕಳಿಸುತ್ತಿವೆ. ವಿದೇಶಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ತಾಯ್ನಾಡಿಗೆ ಮರಳಿದ ಅನಿವಾಸಿ ಜನರ ಆರೋಗ್ಯದ ಬಗ್ಗೆ ಜಿಲ್ಲೆಯಲ್ಲಿ ಆತಂಕ ಹೆಚ್ಚಿತ್ತು. ಆದರೆ ಅದು ದೂರವಾಗಿದ್ದು, ಜಿಲ್ಲೆಯ ಮಟ್ಟಿಗೆ ನೆಮ್ಮದಿ ತಂದಿದೆ.
ಎಲ್ಲರೂ ಕ್ಷೇಮ
ವಿದೇಶದಿಂದ ಬಂದು ಕ್ವಾರಂಟೈನ್‌ನಲ್ಲಿದ್ದು, ಪರೀಕ್ಷೆ ವೇಳೆ ಕೋವಿಡ್ ದೃಢಪಟ್ಟ 199ಕ್ಕೂ ಹೆಚ್ಚು ಮಂದಿ ಸದ್ಯ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿದ್ದಾರೆ. ಕೆಲವರು ಈಗಾಗಲೇ ಬಿಡುಗಡೆಗೊಂಡಿ ದ್ದಾರೆ. ಚಿಕಿತ್ಸೆ ಪಡೆಯುತ್ತಿರುವವರೂ ಚೇತರಿಸಿಕೊಳ್ಳು ತ್ತಿರುವುದರಿಂದ ಯಾವುದೇ ಭಯ ಇಲ್ಲ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
11 ವಿಮಾನ
ಲಾಕ್‌ಡೌನ್‌ನಲ್ಲಿ ಸಡಿಲಿಕೆಯಾದ ಬಳಿಕ ಜೂ. 1ರಿಂದಲೇ ಗಲ್ಫ್ ರಾಷ್ಟ್ರಗಳಲ್ಲಿರುವ ಕರಾವಳಿಗರನ್ನು ಕರೆತರುವ ಪ್ರಕ್ರಿಯೆ ಆರಂಭವಾಗಿತ್ತು. ಇಲ್ಲಿಯವರೆಗೆ 11 ವಿಮಾನಗಳು ಮಂಗಳೂರಿಗೆ ಬಂದಿಳಿದಿವೆ. 20 ದಿನಗಳಿಂದೀಚೆಗೆ ಗಲ್ಫ್ ರಾಷ್ಟ್ರಗಳಿಂದ ಮತ್ತು ಮುಂಬಯಿಯಿಂದ ಬಂದವರಲ್ಲಿ ಮಾತ್ರ ಕೊರೊನಾ ದೃಢಪಡುತ್ತಿದ್ದು, ಸ್ಥಳೀಯರಿಗೆ ಇದರ ಬಾಧೆ ನಿಂತಿದೆ. ಬಂಟ್ವಾಳ, ಶಕ್ತಿನಗರ, ಬೋಳೂರು ಮುಂತಾದೆಡೆ ಒಂದೇ ಕುಟುಂಬದ ನಾಲ್ಕು ಜನರನ ಕೋವಿಡ್ ಬಾಧಿಸಿದಾಗ ಸ್ಥಳೀಯವಾಗಿ ಮತ್ತಷ್ಟು ಹರಡುವ ಆತಂಕ ನೆಲೆಸಿತ್ತು. ಆದರೆ ಇದೀಗ ಆತಂಕ ದೂರವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.