62 ಸಾವಿರ ಸೋಂಕಿತರು ಗುಣಮುಖ
Team Udayavani, Jun 22, 2020, 1:36 PM IST
ಸಾಂದರ್ಭಿಕ ಚಿತ್ರ
ಮುಂಬಯಿ, ಜೂ. 21: ರಾಜ್ಯದಲ್ಲಿ 55,651 ಮಂದಿ ಕೋವಿಡ್ ಸೋಂಕಿತರು ಸಕ್ರಿಯರಾಗಿದ್ದರೆ, ಇಲ್ಲಿಯ ತನಕ 62,773 ರೋಗಿಗಳು ಗುಣಮುಖರಾಗಿದ್ದು, ಅವರನ್ನು ಆಸ್ಪತ್ರೆಗಳಿಂದ ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ರಾಜೇಶ್ ಟೋಪೆ ಅವರು ಹೇಳಿದ್ದಾರೆ.
ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ ಒಟ್ಟು ಕೋವಿಡ್ ಸಂತ್ರಸ್ತರ ಸಂಖ್ಯೆ 1,24,331 ತಲುಪಿದೆ. ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇಕಡಾ 50.49ರಷ್ಟಿದ್ದರೆ, ರಾಜ್ಯದಲ್ಲಿ ಸಾವಿನ ಪ್ರಮಾಣ ಶೇ 4.74ರಷ್ಟಿದೆ ಎಂದಿದ್ದಾರೆ. ಪ್ರಸ್ತುತ ರಾಜ್ಯದಲ್ಲಿ 5,91,049 ಮಂದಿಯನ್ನು ಮನೆ ಹೊಂ ಕ್ವಾರಂಟೈನ್ ಮಾಡಲಾಗಿದೆ. 25,697 ಮಂದಿಯನ್ನು ಸಾಂಸ್ಥಿಕ ಸಂಪರ್ಕತಡೆಯಲ್ಲಿ ಇರಿಸಲಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದಲ್ಲಿ 3,827 ಹೊಸ ಪ್ರಕರಣಗಳು ಪತ್ತೆಯಾಗಿವೆ. 142 ಸೋಂಕಿತರು ಸಾವನ್ನಪ್ಪಿದ್ದಾರೆ. ಇದರ ಪರಿಣಾಮವಾಗಿ, ರಾಜ್ಯದಲ್ಲಿ ಒಟ್ಟು ಸಾವುಗಳ ಸಂಖ್ಯೆ 5 ಸಾವಿರ 893 ಕ್ಕೆ ತಲುಪಿದೆ. ಸಾವನ್ನಪ್ಪಿದವರಲ್ಲಿ 89 ಪುರುಷರು ಮತ್ತು 53 ಮಹಿಳೆಯರು ಸೇರಿದ್ದಾರೆ. 142 ಮಂದಿ ಸಾವನ್ನಪ್ಪಿದವರ ಪೈಕಿ 74 ಮಂದಿ 60 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನವರಾಗದ್ದಾರೆ. 57 ರೋಗಿಗಳು 40 ವರ್ಷದಿಂದ 59 ವರ್ಷದೊಳಗಿನವರು. 11 ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಮುಂಬಯಿಯಲ್ಲಿ 114, ಥಾಣೆಯಲ್ಲಿ 2, ನಾಸಿಕ್‌ನಲ್ಲಿ 3, ಧುಳೆಯಲ್ಲಿ 3, ಜಲ್ಗಾಂವ್‌ನಲ್ಲಿ 3, ಸೊಲ್ಲಾಪುರದಲ್ಲಿ 1 ಮತ್ತು ಔರಂಗಾಬಾದ್‌ನಲ್ಲಿ 8 ಸಾವುಗಳು ವರದಿಯಾಗಿವೆ.
ಪ್ರಸ್ತುತ, ರಾಜ್ಯದಲ್ಲಿ 60 ಸರಕಾರಿ ಮತ್ತು 43 ಖಾಸಗಿ ಪ್ರಯೋಗಾಲಯಗಳಿದ್ದು, ಒಟ್ಟು 103 ಪ್ರಯೋಗಾಲಯಗಳು ಸೋಂಕು ಪರೀಕ್ಷೆಗಾಗಿ ಕಾರ್ಯನಿರ್ವಹಿಸುತ್ತಿವೆ. ಇಲ್ಲಿಯವರೆಗೆ ಕಳುಹಿಸಲಾದ 7,35,674 ಮಾದರಿಗಳಲ್ಲಿ 1,24,331 ಮಾದರಿಗಳು ಪಾಸಿಟಿವ್ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Self Treatment!: ಸ್ವಯಂ ಚಿಕಿತ್ಸೆಯ ಮೂಲಕ ಸ್ತನ ಕ್ಯಾನ್ಸರ್ ಗೆದ್ದ ವಿಜ್ಞಾನಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.