ಇಮ್ಯುನಿಟಿ ಪಾಸ್‌ಪೋರ್ಟ್‌ ಜಾರಿಗೆ ಚಿಂತನೆ! ಜನರಿಗೆ ಇದರಿಂದ ಪ್ರಯೋಜನವೇ? ಹಾನಿಯೇ ?


Team Udayavani, Jun 22, 2020, 2:00 PM IST

Immunity passport system

ಲಂಡನ್‌: ವಿದೇಶಗಳಿಗೆ ಹೋಗಬೇಕಾದರೆ ನಿರ್ದಿಷ್ಟ ದೇಶದ ಪ್ರಜೆ ಎಂದು ತಿಳಿಸುವ ಪಾಸ್‌ಪೋರ್ಟ್‌ ಬೇಕು. ಇಂತಹ ಪಾಸ್‌ಪೋರ್ಟ್‌ಗಳೊಂದಿಗೆ ಕೋವಿಡ್‌ ಕಾಲದಲ್ಲಿ ಇನ್ನು “ಇಮ್ಯುನಿಟಿ ಪಾಸ್‌ಪೋರ್ಟ್‌’ಗಳನ್ನೂ ಜಾರಿ ಮಾಡಲು ಹಲವು ದೇಶಗಳು ಚಿಂತನೆ ನಡೆಸಿವೆ. ನಿರ್ದಿಷ್ಟ ವ್ಯಕ್ತಿ ಕೋವಿಡ್‌ನಿಂದ ಮುಕ್ತ ಎಂದು ತೋರಿಸುವ ಪ್ರಮಾಣ ಪತ್ರ ಇದಾಗಿದೆ.

ಇಮ್ಯುನಿಟಿ ಪಾಸ್‌ಪೋರ್ಟ್‌ ಯಾಕಾಗಿ?
ಇಮ್ಯುನಿಟಿ ಅಥವಾ ರೋಗನಿರೋಧಕ ಪಾಸ್‌ಪೋರ್ಟ್‌ ಅನ್ನು ಸರಕಾರ ನೀಡುತ್ತದೆ. ನಿರ್ದಿಷ್ಟ ವ್ಯಕ್ತಿ ಕೋವಿಡ್‌ನಿಂದ ಗುಣಮುಖನಾಗಿದ್ದಾನೆ ಅಥವಾ ಕೋವಿಡ್‌ ಹೊಂದಿಲ್ಲ ಎಂಬುದಕ್ಕೆ ಪ್ರಮಾಣ ಪತ್ರವಾಗಿ ಇದು ಇರುತ್ತದೆ. ಇದರಿಂದ ವ್ಯಕ್ತಿ ವಿದೇಶಗಳಿಗೆ ತೆರಳಬಹುದು. ಮುಕ್ತವಾಗಿ ಸಂಚರಿಸಬಹುದು. ವಿವಿಧ ದೇಶಗಳು ಆರ್ಥಿಕವಾಗಿ ಕಂಗಾಲಾಗಿದ್ದು, ಈ ಹಿಂದಿನಂತೆ ವ್ಯವಹಾರಗಳನ್ನು ಉತ್ತೇಜಿಸಲು ಇಮ್ಯುನಿಟಿ ಪಾಸ್‌ಪೋರ್ಟ್‌ ಹೊರತರಲು ಚಿಂತನೆ ನಡೆಸಿವೆ.

ದೇಶಗಳಿಂದ ಸಿದ್ಧತೆ
ಇಮ್ಯುನಿಟಿ ಪಾರ್ಸ್‌ಪೋರ್ಟ್‌ಗಳನ್ನು ನೀಡಲು ಅಮೆರಿಕ, ಚಿಲಿ, ಜರ್ಮನಿ, ಇಟಲಿ, ಬ್ರಿಟನ್‌ ದೇಶಗಳು ಮುಂದಾಗಿವೆ. ಈ ಮೂಲಕ ವ್ಯಕ್ತಿ ಕೋವಿಡ್‌ನಿಂದ ಗುಣಮುಖವಾದ ಬಗ್ಗೆ ದಾಖಲೆಗಳನ್ನು ಕೊಡಲಾಗುತ್ತದೆ. ಕೋವಿಡ್‌ ಈವರೆಗೆ ತಗುಲದವರಿಗೂ ಪ್ರಮಾಣಪತ್ರ ನೀಡಲಾಗುತ್ತದೆ. ಚಿಲಿ ಈ ಯೋಜನೆಯನ್ನು ಹೊರತರಲು ಹೆಚ್ಚು ಉತ್ಸುಕತೆಯನ್ನು ನಡೆಸಿದ್ದು, ಕೆಲವೇ ವಾರಗಳಲ್ಲಿ ಜಾರಿಗೊಳಿಸಲಿದೆ. ಈ ಮೂಲಕ ವಿಶ್ವದಲ್ಲೇ ಮೊದಲ ಬಾರಿಗೆ ಇಮ್ಯುನಿಟಿ ಪಾಸ್‌ಪೋರ್ಟ್‌ ಹೊಂದಿದ ದೇಶವೆಂದು ಕರೆಯಲು ಸಿದ್ಧತೆ ನಡೆಸಿದೆ.

ಇಮ್ಯುನಿಟಿ ಪಾರ್ಸ್‌ಪೋರ್ಟ್‌ನಿಂದ ಯಾವುದೇ ಪ್ರಯೋಜನವಿಲ್ಲ. ಇದರಿಂದ ತೊಂದರೆಯೇ ಹೆಚ್ಚು ಎನ್ನುವುದು ಈಗ ವಿಶ್ವ ಆರೋಗ್ಯ ಸಂಸ್ಥೆ, ಆರೋಗ್ಯ ವಲಯಗಳ ತಜ್ಞರ ವಾದ. ಕಾರಣ ಕೋವಿಡ್‌ನಿಂದ ಗುಣಮುಖನಾದ ನಿರ್ದಿಷ್ಟ ವ್ಯಕ್ತಿ ಮತ್ತೆ ಕೋವಿಡ್‌ಗೆ ಈಡಾಗುವ ಸಾಧ್ಯತೆ ಓರ್ವ ಸಾಮಾನ್ಯ ಆರೋಗ್ಯವಂತ ವ್ಯಕ್ತಿಯಷ್ಟೇ ಇರುತ್ತದೆ. ಪ್ರವಾಸದ ವೇಳೆಯಾದರೆ ಯಾವಾಗ ಯಾರಿಂದ ಕೋವಿಡ್‌ಗೆ ಆತ ಕೋವಿಡ್‌ಗೆ ಈಡಾಗಿದ್ದಾನೆ ಎಂದು ಹೇಳುವುದಕ್ಕೆ ಸಾಧ್ಯವಾಗದು. ದಾಖಲೆಗಳನ್ನು ಇಟ್ಟುಕೊಂಡು, ಅಥವಾ ಒಂದು ಬಾರಿ ಜ್ವರ ಪರೀಕ್ಷೆಯ ಮೂಲಕ ಕೋವಿಡ್‌ ಪತ್ತೆಹಚ್ಚಲು ಸಾಧ್ಯವಿಲ್ಲ.

ಈಗಂತೂ ರೋಗ ಲಕ್ಷಣಗಳಿಲ್ಲದ ಕೋವಿಡ್‌ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಇದು ಹೆಚ್ಚು ಅಪಾಯಕಾರಿಯಾಗಿದೆ. ಆದ್ದರಿಂದ ಕೋವಿಡ್‌ ಇಂತಹ ವ್ಯಕ್ತಿಗೆ ಇಲ್ಲ ಎಂದು ಪ್ರಮಾಣಿಸುವುದು ಕಷ್ಟ. ಇನ್ನು ಇಮ್ಯುನಿಟಿ ಪಾಸ್‌ಪೋರ್ಟ್‌ ನೀಡುವುದು ಯಾವುದೇ ಪ್ರಯೋಜನಕ್ಕೆ ಬಾರದು ಎಂದು ಹೇಳಲಾಗಿದೆ. ಅಲ್ಲದೇ ಕೋವಿಡ್‌ ಬಗ್ಗೆ ಪರಿಶೀಲನೆಗಳು, ಅದರ ಅವಧಿ ಇತ್ಯಾದಿಗಳ ಬಗ್ಗೆ ವಿಶ್ವಸಂಸ್ಥೆ ಪ್ರಶ್ನೆ ಮಾಡಿದೆ. ಕೆಲವೊಮ್ಮೆ ತಪ್ಪು ಪಾಸಿಟಿವ್‌ ಪ್ರಕರಣಗಳಿಂದಲೂ ಜನರು ತೊಂದರೆಗೆ ಒಳಗಾಗಬಹುದು. ಅಥವಾ ಕೋವಿಡ್‌ ಹೊಂದಿದವರಿಗೆ ನೆಗೆಟಿವ್‌ ವರದಿ ಬಂದರೆ ಅವರು ಹೋದ ಕಡೆಗಳಲ್ಲಿ ಮತ್ತೆ ರೋಗ ಹರಡಲು ಕಾರಣವಾಗಬಹುದು.

ಆದ್ದರಿಂದ ಕೋವಿಡ್‌ ವಿಚಾರದಲ್ಲಿ ಇದಮಿತ್ಥಂ ಎಂದು ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಜನರೂ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಇತ್ಯಾದಿಗಳನ್ನು ಕಡ್ಡಾಯವಾಗಿ ಪಾಲಿಸದಿದ್ದಲ್ಲಿ, ಇಮ್ಯುನಿಟಿ ಪಾಸ್‌ಪೋರ್ಟ್‌ ಹೊಂದಿದ ವ್ಯಕ್ತಿಯೇ ರೋಗ ವಾಹಕನಾಗಿ ಕೆಲಸ ಮಾಡಿದರೆ ಅದರಿಂದ ಪರಿಣಾಮವೇನು ಎಂದು ತಜ್ಞರು ಇದನ್ನು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

Horoscope: ಉದ್ಯೋಗದಲ್ಲಿ ಸಮಾಧಾನದ ಸ್ಥಿತಿ ಇರಲಿದೆ

SUBHODH

Bantwala: ಕೆದಿಲ ಗ್ರಾಮದಲ್ಲಿ ಸಿಡಿಲು ಬಡಿದು ಬಾಲಕ ಸಾವು

Bantwala1

Bantwala: ಅಧಿಕಾರಿಗಳ ನಡೆ ವಸತಿ ನಿಲಯಗಳ ಕಡೆ; ವಿನೂತನ ಕಾರ್ಯಕ್ರಮ

arrested

Illegal immigrants; ಬಂಧಿತ ಪಾಕ್‌ ಅಕ್ರಮ ವಲಸಿಗರು ಉಗ್ರರಲ್ಲ!: ಯಾರಿವರು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

PM Modi: ಜಗತ್ತಿನಲ್ಲಿ ಎಲ್ಲೇ ಸಮಸ್ಯೆಯಾದರೂ ಭಾರತದಿಂದ ಸ್ಪಂದನೆ

400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

Boeing: 400ಕ್ಕೂ ಅಧಿಕ ಉದ್ಯೋಗಿಗಳಿಗೆ ವಜಾ ನೋಟಿಸ್‌ ನೀಡಿದ ಬೋಯಿಂಗ್‌

1-USAA

America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್‌

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Employaement

Mangaluru: ಕೇರಳ ಏಜೆನ್ಸಿಯಿಂದ ಇಸ್ರೇಲ್‌ನಲ್ಲಿ ಉದ್ಯೋಗದ ಆಮಿಷ

WhatsApp Image 2024-11-17 at 21.01.59

Kyiv: ಉಕ್ರೇನ್‌ ವಿದ್ಯುತ್‌ ಸ್ಥಾವರ ಮೇಲೆ ರಷ್ಯಾ 120 ಕ್ಷಿಪಣಿ ದಾಳಿ

Hy[per–sonic

Army Wepon: ಭಾರತದ ಬತ್ತಳಿಕೆಗೆ ದೇಸಿ ಹೈಪರ್‌ಸಾನಿಕ್‌ ಅಸ್ತ್ರ !

Manipur

Mobs Storm: ಮಣಿಪುರದಲ್ಲಿ ಭುಗಿಲೆದ್ದ ಹಿಂಸಾಚಾರ!, ಮೈತೇಯಿ ಸಮುದಾಯದಿಂದ ಭಾರೀ ಪ್ರತಿಭಟನೆ

courts

Puttur: ಮಹಿಳೆಯ ಮಾನಭಂಗಕ್ಕೆ ಯತ್ನ; ಆರೋಪಿಗೆ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.