ಹಿರಿಯ ಯಕ್ಷಗಾನ ಕಲಾವಿದ ಕರ್ಕಿ ನಾರಾಯಣ ಹಾಸ್ಯಗಾರ ವಿಧಿವಶ
Team Udayavani, Jun 22, 2020, 7:11 PM IST
ಹೊನ್ನಾವರ: ಹಿರಿಯ ಯಕ್ಷಗಾನ ಕಲಾವಿದ ಹಾಗೂ ಪ್ರಸಿದ್ಧ ಕರ್ಕಿ ಪರಂಪರೆಯ ಹಿರಿಯ ಕೊಂಡಿ ನಾರಾಯಣ ಹಾಸ್ಯಗಾರ, ಕರ್ಕಿ (89) ಅವರು ಇಂದು ನಿಧನ ಹೊಂದಿದ್ದಾರೆ.
ನಾಣಿ ಹಾಸ್ಯಗಾರರೆಂದೇ ಯಕ್ಷ ವಲಯದಲ್ಲಿ ಪರಿಚಿತರಾಗಿದ್ದ ರಂಗಸ್ಥಳದ ಮೇಲೆ ಕೃಷ್ಣನ ಪಾತ್ರಕ್ಕೆ ಪರಮಾದ್ಭುತವಾಗಿ ಜೀವ ತುಂಬುತ್ತಿದ್ದ ನಾರಾಯಣ ಹಾಸ್ಯಗಾರ ಅವರು ತಮ್ಮದೇ ವಿಶಿಷ್ಟ ಶೈಲಿಯ ಪಾತ್ರ ನಿರ್ವಹಣೆಯಿಂದ ಮನೆಮಾತಾಗಿದ್ದರು.
ಯಕ್ಷಗಾನ ಕ್ಷೇತ್ರದಲ್ಲಿ ಸರ್ವಾಂಗೀಣ ಸೇವೆ ಸಲ್ಲಿಸಿದ್ದ ನಾರಾಯಣ ಹಾಸ್ಯಗಾರರು ‘ಕರ್ಕಿ ಹಾಸ್ಯಗಾರ ಮೇಳ’ದ ಪ್ರಸಿದ್ಧ ಕಲಾವಿದರಾಗಿದ್ದರು.
ಇವರು ಶೃಂಗಾರ ಹಾಗೂ ಲಾಲಿತ್ಯ ಪಾತ್ರ ನಿರ್ವಹಣೆಯಲ್ಲಿ ಯಕ್ಷಾಭಿಮಾನಿಗಳ ಮನಸ್ಸನ್ನು ಹಿಡಿದಿಡುವ ಸಾಮರ್ಥ್ಯವನ್ನು ಹೊಂದಿದ್ದ ಕಲಾವಿದರಲ್ಲಿ ಒಬ್ಬರಾಗಿದ್ದರು. ಕಲಾತ್ಮಕ ಕುಣಿತ, ಸೊಗಸಾದ ಅಭಿನಯ ಸಹಿತವಾಗಿದ್ದ ಹಾಸ್ಯಗಾರರ ಯಕ್ಷ ಪ್ರತಿಭೆ ಯಕ್ಷಗಾನ ವಲಯದಲ್ಲಿ ಬಹುಪ್ರಸಿದ್ಧಿಯನ್ನು ಪಡೆದಿತ್ತು.
1931 ಫೆಬ್ರವರಿ 2ರಂದು ಜನಿಸಿದ್ದ ನಾರಾಯಣ ಹಾಸ್ಯಗಾರ ಅವರು ಎಳವೆಯಲ್ಲಿಯೇ ಯಕ್ಷಗಾನದತ್ತ ಆಕರ್ಷಿತರಾಗಿದ್ದರು. ಅವರ ಮನೆಯಲ್ಲೇ ಯಕ್ಷಗಾನದ ವಾತಾರವಣ ಇದ್ದುದ್ದೇ ಇದಕ್ಕೆ ಪ್ರಮುಖ ಕಾರಣವಾಗಿತ್ತು.
ಆ ಕಾಲದಲ್ಲಿ ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣವನ್ನು ಪಡೆದುಕೊಂಡಿದ್ದ ನಾರಾಯಣ ಹಾಸ್ಯಗಾರರು ಒಂದು ವರ್ಷಗಳ ಕಾಲ ಶಿಕ್ಷಕರಾಗಿಯೂ ಸೇವೆಯನ್ನು ಸಲ್ಲಿಸಿದ್ದರು. ಬಳಿಕ ಯಕ್ಷಗಾನ ರಂಗಕ್ಕೆ ಪಾದಾರ್ಪಣೆ ಮಾಡಿದ ಇವರು ಶಿವರಾಮ ಕಾರಂತರಲ್ಲಿ ಎರಡು ವರ್ಷ ಹಾಗೂ ಕುಷ್ಟ ಗಾಣಿಗರ ಬಳಿಯಲ್ಲಿ ಎರಡು ವರ್ಷ ಬಡಗುತಿಟ್ಟಿನ ಯಕ್ಷಗಾನ ಅಭ್ಯಾಸವನ್ನು ನಡೆಸಿದರು.
ಬಳಿಕ ಉತ್ತರ ಕನ್ನಡ ಜಿಲ್ಲೆಯಾದ್ಯಂತ ಮನೆಮಾತಾಗಿದ್ದ ತಮ್ಮದೇ ಆದ ಕರ್ಕಿ ಹಾಸ್ಯಗಾರರ ಮೇಳದಲ್ಲಿ ತಂದೆ ಪರಮಯ್ಯ ಹಾಸ್ಯಗಾರ ಹಾಗೂ ಸಹೋದರರು ಮತ್ತು ಅಣ್ಣನ ಮಗನಾದ ಪಿ.ವಿ. ಹಾಸ್ಯಗಾರ ಜೊತೆ ಸೇರಿ ಸುಪ್ರಸಿದ್ಧ ಕಲಾವಿದರಾಗಿ ಹೊರಹೊಮ್ಮಿದರು.
ಬಭ್ರುವಾಹನ, ಅಭಿಮನ್ಯ, ಅರ್ಜುನ, ಸುಧನ್ವ, ಕೀಚಕ. ಶಿವ, ರಾಮ, ಕೃಷ್ಣ, ಲಕ್ಷ್ಮಣ, ವಾಲಿ, ಶಲ್ಯ, ಶಬರ ಮೊದಲಾದ ಪಾತ್ರಗಳಲ್ಲಿ ಇವರ ನಿರ್ವಹಣೆ ಅದ್ಭುತವಾಗಿತ್ತು. ಅಪರೂಪದ ಸನ್ನಿವೇಶಗಳಲ್ಲಿ ನಾರಾಯಣ ಹಾಸ್ಯಗಾರರು ಸ್ತ್ರೀ ಪಾತ್ರಗಳನ್ನು ಹಾಗೂ ಬಣ್ಣದ ವೇಷಗಳನ್ನು ಮಾಡಿರುವ ಉದಾಹರಣೆಯೂ ಇದೆ.
ಆದರೆ, ರಂಗದಲ್ಲಿ ನಾರಾಯಣ ಹಾಸ್ಯಗಾರರನ್ನು ಕಲಾವಿದನನ್ನಾಗಿ ಮೆರೆಯಿಸಿದ ಪಾತ್ರವೆಂದರೆ ಅದು ಕೃಷ್ಣನ ಪಾತ್ರ. ಕೃಷ್ಣಾರ್ಜುನ, ಚಂದ್ರಾವಳಿ ವಿಳಾಸ, ಸ್ಯಮಂತಕ ರತ್ನ, ಶ್ರೀ ಕೃಷ್ಣ ಪಾರಿಜಾತ ಮುಂತಾದ ಪ್ರಸಂಗಗಳಲ್ಲಿ ಕೃಷ್ಣನ ಪಾತ್ರಕ್ಕೆ ನಾಣಿ ಹಾಸ್ಯಗಾರರು ಅದ್ಭುತವಾಗ ಜೀವ ತುಂಬುತ್ತಿದ್ದರು ಎಂಬುದನ್ನು ಹಳೆಯ ತಲೆಮಾರಿನ ಪ್ರೇಕ್ಷಕರು ಇಂದಿಗೂ ನೆನಪಿಸಿಕೊಳ್ಳುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Dandeli: ವಿದ್ಯುತ್ ಕಂಬದ ಜಿಓಎಸ್ ಕಳವು ಮಾಡಿದ್ದ ಆರೋಪಿ;ಮಾಲು ಸಹಿತ ವಶಕ್ಕೆ ಪಡೆದ ಪೊಲೀಸರು
Gujjar Kere: ಕೆರೆ ಪರಿಸರದ ರಕ್ಷಣೆಗೆ ಆದ್ಯತೆ ಅಗತ್ಯ; ತಹಶೀಲ್ದಾರ್‌ಗೆ ಮರು ಮನವಿ
Dandeli:ತುಂಡಾಗಿ ಬಿದ್ದಿದ್ದ ಕೇಬಲ್ ವೈರ್ ಸುತ್ತಿ ದ್ವಿಚಕ್ರ ವಾಹನ ಸ್ಕಿಡ್: ಸವಾರನಿಗೆ ಗಾಯ
MUST WATCH
ಹೊಸ ಸೇರ್ಪಡೆ
Canada-India Row: ಕೆನಡಾದ ಆಂತರಿಕ ವಿಚಾರದಲ್ಲಿ ಭಾರತದ ಪಾತ್ರವಿಲ್ಲ… :ಟ್ರುಡೋ ಸರ್ಕಾರ
IPL 2025-27: ಮುಂದಿನ ಮೂರು ಐಪಿಎಲ್ ಸೀಸನ್ ನ ದಿನಾಂಕ ಪ್ರಕಟಿಸಿದ ಬಿಸಿಸಿಐ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.