ಹೆಚ್ಚಾದ ಕೋವಿಡ್ 19 ವೇಗಕ್ಕೆ ಬ್ರೇಕ್ ಹಾಕಬಲ್ಲದೇ ರಾಜ್ಯ?
Team Udayavani, Jun 23, 2020, 6:28 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಕರ್ನಾಟಕದಲ್ಲಿ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಹಠಾತ್ತನೆ ಏರಿಕೆ ಕಂಡುಬಂದಿದ್ದು, ಈಗ 9 ಸಾವಿರ ದಾಟಿದೆ.
ಆದಾಗ್ಯೂ ರಾಜ್ಯದಲ್ಲಿ ಚೇತರಿಸಿಕೊಂಡವರ ಪ್ರಮಾಣ 61 ಪ್ರತಿಶತ ದಾಟಿದೆಯಾದರೂ ಭವಿಷ್ಯದ ಬಗ್ಗೆ ಆತಂಕವಂತೂ ಹೆಚ್ಚಾಗುತ್ತಿದೆ.
ಸೋಮವಾರದ ವೇಳೆಗೆ ದೇಶದಲ್ಲಿ ಕೋವಿಡ್-19 ಪ್ರಕರಣಗಳ ಸಂಖ್ಯೆ 4 ಲಕ್ಷ 27 ಸಾವಿರ ದಾಟಿದ್ದರೆ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ಪರಿಸ್ಥಿತಿ ನಿಯಂತ್ರಣ ತಪ್ಪಿದೆ.
ರೋಗ ಪ್ರಸರಣ ತಡೆಯುವಲ್ಲಿ ಈಗ ಸರಕಾರವಷ್ಟೇ ಅಲ್ಲದೇ, ಜನಸಾಮಾನ್ಯರ ಜವಾಬ್ದಾರಿಯೂ ಅಧಿಕವಾಗಿದ್ದು, ಜನರು ಸಾಮಾಜಿಕ ಅಂತರ ಹಾಗೂ ಶುಚಿತ್ವದ ಬಗ್ಗೆ ನಿಷ್ಕಾಳಜಿ ಮೆರೆಯುತ್ತಾ ಹೋದರೆ, ಪರಿಸ್ಥಿತಿ ವಿಷಮಿಸುವ ಸಾಧ್ಯತೆ ಇಲ್ಲದಿಲ್ಲ…
ರಾಜ್ಯದಲ್ಲಿ ಆಗಸ್ಟ್ 15ರ ವೇಳೆಗೆ 25 ಸಾವಿರ ಸೋಂಕಿತರು?!
ಈಗ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳ ಪ್ರಮಾಣ 4 ಪ್ರತಿಶತದಷ್ಟಿದ್ದು, ಇದೇ ವೇಗದಲ್ಲೇ ಮುಂದುವರಿದರೆ ಆಗಸ್ಟ್ 15ರ ವೇಳೆಗೆ ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20ರಿಂದ 25 ಸಾವಿರಕ್ಕೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸುತ್ತಿದ್ದಾರೆ ಕರ್ನಾಟಕ ಕೋವಿಡ್-19 ವಾರ್ ರೂಂ ಮುಖ್ಯಸ್ಥ ಮನೀಶ್ ಮೌದ್ಗಿಲ್.
ಒಂದು ವೇಳೆ ನಿತ್ಯ ಬೆಳವಣಿಗೆಯ ದರ 3 ಪ್ರತಿಶತವಿದ್ದರೂ ಸಕ್ರಿಯ ಪ್ರಕರಣಗಳ ಸಂಖ್ಯೆ 17 ಸಾವಿರ ತಲುಪಬಹುದು. ಆದರೆ, “15-20 ದಿನಗಳ ಅನಂತರ ಪರಿಸ್ಥಿತಿ ಹೇಗಿರುತ್ತದೆ ಎನ್ನುವ ಬಗ್ಗೆ ನಿಖರವಾಗಿ ಅಂದಾಜು ಹಾಕುವುದು ಬಹಳ ಕಷ್ಟ. ಏಕೆಂದರೆ ಅದು ನಾಗರಿಕರ ವರ್ತನೆ ಹಾಗೂ ಸರ್ಕಾರ ತೆಗೆದುಕೊಳ್ಳುವ ಕ್ರಮಗಳನ್ನೂ ಅವಲಂಬಿಸಿರುತ್ತದೆ” ಎನ್ನುತ್ತಾರವರು. ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ರಾಜ್ಯದ ಪರಿಶ್ರಮ ಉತ್ತಮವಾಗಿಯೇ ಇದೆ.
ಸೋಂಕಿತರ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವುದು (ಕಾಂಟ್ಯಾಕ್ಟ್ ಟ್ರೇಸಿಂಗ್), ಪರೀಕ್ಷೆ (ಟೆಸ್ಟಿಂಗ್) ಹಾಗೂ ಚಿಕಿತ್ಸೆಯ ವಿಷಯದಲ್ಲಿ ರಾಜ್ಯದ ಆರೋಗ್ಯ ವಲಯವು ಶ್ಲಾಘನೀಯ ಕೆಲಸ ಮಾಡುತ್ತಿದೆ. ಆದರೆ, ಈಗ ಹಠಾತ್ತನೆ ರಾಜಧಾನಿ ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವುದು ಆತಂಕಕ್ಕೆಡೆಮಾಡಿದೆ. ಲಾಕ್‌ಡೌನ್ ಸಡಿಲಿಕೆಯಾಗಿರುವುದರಿಂದ ರೋಗ ಪ್ರಸರಣ ಅಧಿಕವಾಗ ಬಹುದೆಂಬ ಆತಂಕ ತಜ್ಞರದ್ದು.
25 ಸಾವಿರ ಸಕ್ರಿಯ ಪ್ರಕರಣಗಳೆಂದರೆ…
ನಿತ್ಯ ಸೋಂಕಿತರ ದರ ಈಗಿನ ವೇಗದಲ್ಲೇ ಮುಂದುವರಿದರೆ ಆಗಸ್ಟ್ 15ರ ವೇಳೆಗೆ ಕರ್ನಾಟಕದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20-25 ಸಾವಿರ ತಲುಪಬಹುದು ಎಂಬ ಅಂದಾಜಿದೆ. ಪ್ರಸಕ್ತ ದೇಶದ ಮೂರು ರಾಜ್ಯಗಳಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 20 ಸಾವಿರಕ್ಕಿಂತ ಅಧಿಕವಿದೆ. ದಿಲ್ಲಿ, ತಮಿಳುನಾಡಿನಲ್ಲಿ ಒಟ್ಟು ಪ್ರಕರಣಗಳ ಹಾಗೂ ಸೋಂಕಿತರ ಸಂಖ್ಯೆ ಅಜಮಾಸು ಒಂದೇ ಪ್ರಮಾಣದಲ್ಲಿದೆ ಎನ್ನುವುದನ್ನು ಗಮನಿಸಬೇಕು.
ಜನಸಂಖ್ಯೆಗೆ ಹೋಲಿಸಿದರೆ ಟೆಸ್ಟಿಂಗ್ ಕಡಿಮೆಯೇ
ಅಮೆರಿಕ ತನ್ನ ಜನಸಂಖ್ಯೆಯಲ್ಲಿ 8.60 ಪ್ರತಿಶತ ಜನರನ್ನು ಪರೀಕ್ಷಿಸಿದ್ದರೆ, ರಷ್ಯಾ 11.78 ಪ್ರತಿಶತ ಜನರನ್ನು ಪರೀಕ್ಷಿಸಿದೆ, ಇನ್ನೊಂದೆಡೆ ಭಾರತವು ತನ್ನ ಒಟ್ಟು ಜನಸಂಖ್ಯೆಯಲ್ಲಿ ಕೇವಲ 0.50 ಪ್ರತಿಶತ ಜನರನ್ನು ಪರೀಕ್ಷಿಸಿದೆ.
ಆದಾಗ್ಯೂ, ರಷ್ಯಾ ಹಾಗೂ ಅಮೆರಿಕದ ಒಟ್ಟು ಜನಸಂಖ್ಯೆಗಿಂತಲೂ ಭಾರತದ ಜನಸಂಖ್ಯೆ ಸರಿಸುಮಾರು 3 ಪಟ್ಟು ಅಧಿಕವಿದೆ ಎನ್ನುವುದು ನಿಜವಾದರೂ, ಹಾಗೆಂದು ಭಾರತ ಸಹ ಹೆಚ್ಚಿನ ಪ್ರಮಾಣದಲ್ಲಿ ಪರೀಕ್ಷೆಗಳನ್ನು ನಡೆಸುತ್ತಿದೆ ಎಂದೇನೂ ಅರ್ಥವಲ್ಲ.
ಕೇವಲ 33 ಕೋಟಿ ಜನಸಂಖ್ಯೆಯಿರುವ ಅಮೆರಿಕದಲ್ಲಿ ಈಗಾಗಲೇ 2 ಕೋಟಿ 84 ಲಕ್ಷ ಜನರನ್ನು ಪರೀಕ್ಷಿಸಲಾಗಿದ್ದರೆ, 14 ಕೋಟಿ ಜನಸಂಖ್ಯೆಯ ರಷ್ಯಾದಲ್ಲಿ 1 ಕೋಟಿ 71 ಲಕ್ಷ ಜನರ ಟೆಸ್ಟಿಂಗ್ ಆಗಿದೆ. ಇನ್ನೊಂದೆಡೆ 137 ಕೋಟಿ ಜನಸಂಖ್ಯೆಯ ಭಾರತದಲ್ಲಿ ಜೂನ್ 22ರ ವೇಳೆಗೆ 69 ಲಕ್ಷ 50 ಸಾವಿರ ಟೆಸ್ಟಿಂಗ್‌ಗಳನ್ನು ಮಾಡಲಾಗಿದೆ.
“ಈಗ ಭಾರತದಲ್ಲಿ ಸೋಂಕಿತರ ಸಂಖ್ಯೆ ವೇಗವಾಗಿ ಏರುತ್ತಿರುವುದರಿಂದ ಈ ತಿಂಗಳ ಅಂತ್ಯದೊಳಗೆ ಟೆಸ್ಟಿಂಗ್ ಸಂಖ್ಯೆ ಕನಿಷ್ಠ 1 ಕೋಟಿಯಷ್ಟಾದರೂ ತಲುಪುವುದು ಒಳ್ಳೆಯದು ಅಲ್ಲದೆ ರ್‍ಯಾಂಡಮ್ ಟೆಸ್ಟಿಂಗ್‌ಗಳಿಗೆ ಮುಂದಾಗಬೇಕು’ ಎಂದು ತಜ್ಞರು ಹೇಳುತ್ತಾರೆ.
ರಾಜ್ಯದಲ್ಲಿ ಕೋವಿಡ್-19
– ಕರ್ನಾಟಕದಲ್ಲಿ ಪ್ರತಿ 1 ಲಕ್ಷ ಜನಸಂಖ್ಯೆಯಲ್ಲಿ ಸರಾಸರಿ 139 ಜನರಲ್ಲಿ ಸೋಂಕು ಪತ್ತೆಯಾಗಿದ್ದರೆ, ಈ ಪ್ರಮಾಣ ದೇಶದಲ್ಲಿ 319 ಇದೆ.
– ರಾಜ್ಯದಲ್ಲಿ ಜೂನ್ 15ರಿಂದ ಜೂನ್ 22ರ ವರೆಗೆ ನಿತ್ಯ ಸೋಂಕಿತರ ಬೆಳವಣಿಗೆ ದರ 4 ಪ್ರತಿಶತ ಇದೆ.
– ರಾಜ್ಯದಲ್ಲಿ ಕೋವಿಡ್-19 ಮರಣ ದರ 1.49 ಪ್ರತಿಶತದಷ್ಟಿದೆ. ಅಂದರೆ, 100 ಸೋಂಕಿತರಲ್ಲಿ ಒಬ್ಬರು ಸಾವನ್ನಪ್ಪುತ್ತಿದ್ದಾರೆ.
– ರಾಜ್ಯದಲ್ಲಿ ಚೇತರಿಕೆ ಪ್ರಮಾಣ 61.4 ಪ್ರತಿಶತ ತಲುಪಿದೆ. ಅಂದರೆ ದೃಢಪಟ್ಟ ಪ್ರತಿ 100 ಜನರಲ್ಲಿ 61 ಜನ ಚೇತರಿಸಿಕೊಂಡಿದ್ದಾರೆ ಎಂದರ್ಥ.
ಕೇವಲ 8 ದಿನದಲ್ಲಿ 1 ಲಕ್ಷ ಪ್ರಕರಣಗಳು
ಕೇವಲ ಎಂಟು ದಿನಗಳಲ್ಲಿ, ಅಂದರೆ ಜೂನ್ 14ರಿಂದ ಜೂನ್ 21ರ ವೇಳೆಗೆ ದೇಶದಲ್ಲಿ 1,01,468 ಪ್ರಕರಣಗಳು ಪತ್ತೆಯಾಗಿವೆ. ಈ 8 ದಿನಗಳಲ್ಲಿ ನಿತ್ಯ ಸೋಂಕಿತರ ಸರಾಸರಿ 12, 683ರಷ್ಟಿದೆ! ಆತಂಕ ಹೆಚ್ಚಿಸುತ್ತಿರುವ ಅಂಶವೆಂದರೆ, ಜೂನ್ 21ರಂದು ದೇಶದಲ್ಲಿ ಹೊಸ ಸೋಂಕಿತರ ಸಂಖ್ಯೆ 15 ಸಾವಿರದ ಗಟಿ ದಾಟಿರುವುದು! ಆದರೆ, ಇಷ್ಟಾದರೂ ಭಾರತದಲ್ಲಿ ಕೋವಿಡ್ 19 ಇನ್ನೂ ಉತ್ತುಂಗಕ್ಕೇರಿಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಿದ್ದರೆ, ರೋಗ ಉತ್ತುಂಗಕ್ಕೆ ಏರಿದಾಗ ಸೋಂಕಿತರ ಸಂಖ್ಯೆ ಎಷ್ಟಾಗಬಹುದು ಎಂಬ ಪ್ರಶ್ನೆ ಏಳುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
Kunigal: ಹಳ್ಳಕ್ಕೆ ಉರುಳಿ ಬಿದ್ದ ಟ್ರ್ಯಾಕ್ಟರ್… ತಂದೆ ಮಗ ಸಾವು
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Hubli: ದಿವಾಳಿಯಾದ ಸರ್ಕಾರ ಬಿಪಿಎಲ್ ಕಾರ್ಡ್ ಕಡಿತ ಮಾಡುತ್ತಿದೆ: ಪ್ರಹ್ಲಾದ ಜೋಶಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.