ಪರಿಷತ್ ಸದಸ್ಯರಾಗಿ ಗೋವಿಂದರಾಜು: ಅಧಿಕೃತ ಘೋಷಣೆ
Team Udayavani, Jun 23, 2020, 6:44 AM IST
ಕೋಲಾರ: ವಿಧಾನಸಭೆಯಿಂದ ವಿಧಾನಪರಿಷತ್ ಸದಸ್ಯರಾಗಿ ಆಯ್ಕೆಯಾಗಿರುವ ನಗರದ ಉದ್ಯಮಿ ಇಂಚರ ಗೋವಿಂದರಾಜು ಅವರ ಆಯ್ಕೆಯನ್ನು ಅಧಿಕೃತವಾಗಿ ಸೋಮವಾರ ಪ್ರಕಟಿಸಿದ್ದು, ವಿಧಾನಪರಿಷತ್ ಕಾರ್ಯದರ್ಶಿಗಳು ಆಯ್ಕೆ ಪ್ರಮಾಣ ಪತ್ರ ನೀಡಿದರು. ನಾಮಪತ್ರ ವಾಪಸ್ಸಾತಿಗೆ ಕಡೆದಿನವಾಗಿದ್ದ ಸೋಮವಾರ ಅವರ ವಿರುದ್ಧ ಕಣದಲ್ಲಿ ಯಾರೂ ಇಲ್ಲದ ಕಾರಣ ಬಿಜೆಪಿ ನಾಲ್ವರು, ಕಾಂಗ್ರೆಸ್‌ನ ಇಬ್ಬರು ಸೇರಿದಂತೆ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಜಿಲ್ಲೆಯ ಗೋವಿಂದರಾಜು ಅವರಿಗೆ ಆಯ್ಕೆ ಪ್ರಮಾಣ ಪತ್ರ ನೀಡಲಾಯಿತು.
ಜೂ.23 ವಿಶೇಷ ಪೂಜೆ, ದೇವಾಲಯಕ್ಕೆ ಭೇಟಿ: ಎಂಎಲ್‌ಸಿ ಗೋವಿಂದರಾಜು ಆಯ್ಕೆಯನ್ನು ಅಧಿಕೃತವಾಗಿ ಪ್ರಕಟಿಸಿರುವ ಹಿನ್ನಲೆಯಲ್ಲಿ ಅವರ ಬೆಂಬಲಿಗರು ಜೂ.23ರ ಮಂಗಳವಾರ ಕೊಂಡರಾಜ ನಹಳ್ಳಿ ಆಂಜನೇಯಸ್ವಾಮಿ ದೇವಾಲಯ ದಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ. ವಿಧಾನ ಪರಿಷತ್ ಸದಸ್ಯ ಗೋವಿಂದರಾಜು ಅವರು, ಮಂಗಳವಾರ ಬೆಳಗ್ಗೆ 8-45ಕ್ಕೆ ಕೊಂಡರಾಜನಹಳ್ಳಿ ಆಂಜನೇಯಸ್ವಾಮಿ ದೇವಾಲಯಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ನಂತರ ನೇರವಾಗಿ ಶಾಸಕ ಶ್ರೀವಾಸಗೌಡರ ನಿವಾಸಕ್ಕೆ ಆಗಮಿಸುವರು.
ಅಲ್ಲಿ ತಿಂಡಿ ಸೇವಿಸಿ ಧನ್ಯವಾದ ಸಲ್ಲಿಸಿದ ನಂತರ ನೇರವಾಗಿ ಕ್ಲಾಕ್ ಟವರ್ ಸಮೀಪ ಇರುವ ದರ್ಗಾಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸುವರು. ಇದಾದ ನಂತರ ನಗರದ ಹಾಲಿಸ್ಟರ್ ಚರ್ಚ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ತಮ್ಮ ನಿವಾಸದ ಸಮೀಪ ಕಾರ್ಯಕರ್ತರು ಮತ್ತು ಮುಖಂಡರನ್ನುದ್ದೇಶಿಸಿ ಮಾತನಾಡುವರು. ಕೋವಿಡ್ 19 ಮಾರಿಯ ಸಂಕಷ್ಟದ ಹಿನ್ನೆಲೆಯಲ್ಲಿ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಹೂವಿನ ಹಾರ ತರಬಾರದು ಎಂದು ಮನವಿ ಮಾಡಿರುವ ಅವರು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಮತ್ತು ಮಾಸ್ಕ್ ಕಡ್ಡಾಯವಾಗಿ ಧರಿಸಿರುವಂತೆ ಕೋರಿದ್ದಾರೆ.
ಕೋವಿಡ್ 19 ಸೋಂಕು ತೀವ್ರಗೊಳ್ಳುತ್ತಿರುವ ಹಿನ್ನೆಲೆ ಯಲ್ಲಿ ಸರಕಾರದ ಮಾರ್ಗಸೂಚಿ ನಾವು ಪಾಲಿಸಿ ಮಾದರಿಯಾಗೋಣ, ನಾವೇ ಸಾಮಾಜಿಕ ಅಂತರಕ್ಕೆ ಕುತ್ತು ತಂದು ತಪ್ಪು ಮಾಡುವುದು ಬೇಡ ಎಂದು ಕಾರ್ಯಕರ್ತರಲ್ಲಿ ಮನವಿ ಮಾಡಿರುವ ಅವರು, ಎಲ್ಲಾ ಕಾರ್ಯಕರ್ತರು ಈ ಸಂದರ್ಭದಲ್ಲಿ ಸಹಕಾರ ನೀಡಬೇಕು, ಪಕ್ಷದ ಸಂಘಟನೆ ಹಾಗೂ ಕೋಲಾರ ಜಿಲ್ಲೆಯ ಅಭಿವೃದ್ದಿಗೆ ಸಲಹೆ,ಸಹಕಾರ ನೀಡಬೇಕು ಎಂದು ಕೋರಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.