ಕೇರಳದ ಗಡಿ ರಸ್ತೆ ತೆರವು: ಶೀಘ್ರ ತೀರ್ಮಾನ
Team Udayavani, Jun 23, 2020, 10:05 AM IST
ಮಂಗಳೂರು: ಲಾಕ್‌ಡೌನ್ ಕಾರಣದಿಂದ ಈಗಾಗಲೇ ಬಂದ್ ಆಗಿರುವ ಕರ್ನಾಟಕ-ಕೇರಳ ಗಡಿ ತೆರವುಗೊಳಿಸುವ ಸಂಬಂಧ ಕೇಂದ್ರ ಸರಕಾರದ ಸೂಚನೆ ಪಾಲಿಸಿಕೊಂಡು ಕರ್ನಾಟಕ-ಕೇರಳದ ಸಹಮತದೊಂದಿಗೆ ಅಧಿಕೃತ ಒಪ್ಪಿಗೆ ಪಡೆದು ಶೀಘ್ರದಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಡಳಿತ ತಿಳಿಸಿದೆ. ಸದ್ಯಕ್ಕೆ ತಲಪಾಡಿ ಮತ್ತು ಜಾಲಸೂರು ಗಡಿಯಲ್ಲಿ ಮಾತ್ರ ಅನುಮತಿ ನೀಡಿದವರಿಗೆ ಮಾತ್ರ ಆಗಮನ-ನಿರ್ಗಮನಕ್ಕೆ ಅವಕಾಶ ನೀಡಲಾಗಿದ್ದು, ಉಳಿದ ಗಡಿಗಳು ಬಂದ್ ಆಗಿವೆ. ಇದನ್ನು ತೆರವು ಮಾಡಬೇಕಾದರೆ ರಾಜ್ಯ ಸರಕಾರ ಅನುಮತಿ ಆವಶ್ಯ ಎಂದು ಜಿಲ್ಲಾಡಳಿತ ತಿಳಿಸಿವೆ.
ಈ ಕುರಿತು “ಉದಯವಾಣಿ’ ಜತೆಗೆ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ, “ತಲಪಾಡಿ ಹಾಗೂ ಜಾಲಸೂರು ಗಡಿಗಳಲ್ಲಿ ಎರಡೂ ರಾಜ್ಯ ಸರಕಾರದ ಸಹಮತದೊಂದಿಗೆ ನಿಯಮ ಬದ್ಧವಾಗಿ ಜನರ ಆಗಮನ-ನಿರ್ಗಮನಕ್ಕೆ ಅವಕಾಶ ನೀಡಲಾಗಿದೆ. ಆದರೆ ಉಳಿದ ಗಡಿಗಳಲ್ಲಿ ಮಣ್ಣು ಹಾಕಿರುವ ಹಿನ್ನೆಲೆಯಲ್ಲಿ ಇದನ್ನು ಪೂರ್ಣವಾಗಿ ತೆರವು ಮಾಡಲು ಕೇಂದ್ರ ಸರಕಾರದ ಅನುಮತಿ ಹಾಗೂ ಎರಡೂ ರಾಜ್ಯದ ಸಹಮತ ಬೇಕಾಗುತ್ತದೆ. ವಾರದೊಳಗೆ ಇದಕ್ಕೆ ಅನುಮತಿ ದೊರೆಯುವ ನಿರೀಕ್ಷೆಯಿದೆ. ಗಡಿಯ ಕೆಲವು ಭಾಗದಲ್ಲಿ ತುರ್ತಾಗಿ ಹೋಗಲು ಅವಕಾಶ ನೀಡುವಂತೆ ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಹಾಗೂ ನಡೆದುಕೊಂಡು ಹೋಗಲು ಅವಕಾಶ ನೀಡುವಂತೆ ಪೊಲೀಸ್ ಇಲಾಖೆಗೆ ತಿಳಿಸಲಾಗಿದೆ. ಆದರೆ ಪೂರ್ಣವಾಗಿ ಗಡಿ ತೆರೆಯಲು ಸರಕಾರದ ಒಪ್ಪಿಗೆ ಇನ್ನಷ್ಟೇ ದೊರೆಯಬೇಕು’ ಎಂದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, “ಕರ್ನಾಟಕ-ಕೇರಳದ 21 ಗಡಿ ಬಂದ್ ಮಾಡುವಂತೆ ಈ ಹಿಂದೆ ಕೇಂದ್ರದ ಸೂಚನೆಯಂತೆ ರಾಜ್ಯ ಸರಕಾರ ಆದೇಶ ಹೊರಡಿಸಿ ಬಂದ್ ಮಾಡಲಾಗಿದೆ. ಆ ಗಡಿಗಳನ್ನು ತೆರವು ಮಾಡುವುದಾದರೂ ರಾಜ್ಯ ಸರಕಾರದ ಅನುಮತಿ ಅಗತ್ಯ. ಸರಕಾರದ ಮುಂದಿನ ಆದೇಶವನ್ನು ಪರಿಗಣಿಸಿ ತೀರ್ಮಾನ ಕೈಗೊಳ್ಳಲಾಗುವುದು’ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hampankatte: ಸಿಟಿ ಮಾರ್ಕೆಟ್ ರಸ್ತೆಗೆ ಬೇಕಿದೆ ಕಾಯಕಲ್ಪ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಬಜಪೆ: ಚರಂಡಿಯಲ್ಲಿ ಹರಿಯುತ್ತಿರುವ ಕೊಳಚೆ ನೀರು; ಸ್ವತ್ಛಗೊಳಿಸಿದ ಬಜಪೆ ಪಟ್ಟಣ ಪಂಚಾಯತ್
Mangaluru: ಕಾಂಡ್ಲಾವನ ಮರೆತ ಸರಕಾರ!; ಅನುದಾನ ಬಾರದೆ ಯೋಜನೆ ಬಾಕಿ
Kambala Special; ಎತ್ತನ್ನು ಗದ್ದೆಗಿಳಿಸಿ ಆರಂಭವಾಗುವ ಯಡ್ತಾಡಿ ಕಂಬಳ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.