ಆರ್ಥಿಕ ಸ್ಥಿತಿ ಸುಧಾರಣೆಗೆ ಯತ್ನ ಕರ್ಫ್ಯೂ ತೆರವುಗೊಳಿಸಿದ ಸೌದಿ
Team Udayavani, Jun 23, 2020, 12:47 PM IST
ರಿಯಾದ್: ಕರ್ಫ್ಯೂ ತೆರವಾಗಿರುವುದರಿಂದ ಸೌದಿ ರಸ್ತೆಯಲ್ಲಿ ಮಾಮೂಲಿಯಾಗಿ ಓಡಾಡುತ್ತಿರುವ ವಾಹನಗಳು.
ರಿಯಾದ್: ಈಗಾಗಲೇ ಮಸೀದಿಗಳಿಗೆ ಸಾಮಾಜಿಕ ಅಂತರ ಪಾಲನೆ ಮಾಡುವ ಮೂಲಕ ಪ್ರವೇಶ ನೀಡಿದ್ದ ಸೌದಿಯಲ್ಲಿ ಈಗ ಸೋಂಕು ತಡೆಗೆ ಹೇರಿದ್ದ ಕರ್ಫ್ಯೂವನ್ನು ಸಂಪೂರ್ಣವಾಗಿ ತೆಗೆಯಲಾಗಿದೆ ಎಂಬ ಅಧಿಕೃತ ಮಾಹಿತಿಯೊಂದು ಹೊರಬಿದ್ದಿದೆ. ಆದರೆ ಸಾಮಾಜಿಕ ಪಾಲನೆ, ಮಾಸ್ಕ್ ಕಡ್ಡಾಯದಂತಹ ನಿಯಮಗಳು ಹಾಗೆಯೇ ಮುಂದುವರಿಯಲಿದೆ ಎಂದು ತಿಳಿಸಿದೆ.
ಆರ್ಥಿಕ ಮತ್ತು ವಾಣಿಜ್ಯ ವ್ಯವಹಾರಗಳು ಆರಂಭವಾಗಿದ್ದು ದೇಶದ ಆರ್ಥಿಕತೆಯನ್ನು ಮತ್ತೆ ಸ್ಥಿರಗೊಳಿಸುವಲ್ಲಿ ಅಧಿಕೃತರು ಪ್ರಯತ್ನಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ಪ್ರಯಾಣಗಳಿಗೆ ಹಾಗೂ ದಾರ್ಮಿಕ ಪ್ರವಾಸಗಳಿಗೆ ಇನ್ನೂ ಅವಕಾಶವನ್ನು ನೀಡಲಾಗಿಲ್ಲ. ಹಜ್ ಪ್ರವಾಸದ ಬಗ್ಗೆ ಈ ವರೆಗೂ ರಾಜಮನೆತನದಿಂದ ಯಾವುದೇ ಮಾಹಿತಿ ಅಥವಾ ನಿಯಮಗಳು ಹೊರಬಂದಿಲ್ಲ. ಮಲೇಶ್ಯಾ, ಇಂಡೋನೇಷ್ಯಾ ಸಹಿತ ಇತರ ಹಲವು ದೇಶಗಳು ಈ ಬಾರಿ ತಮ್ಮ ದೇಶಗಳಿದ ಹಜ್ ಪ್ರವಾಸಕ್ಕೆ ಜನರನ್ನು ಕಳುಹಿಸುವುದಿಲ್ಲವೆಂಬ ನಿಯಮವನ್ನು ಈಗಾಗಲೇ ಪ್ರಕಟಿಸಿದ್ದು, ಆದರೆ ಸೌದಿ ಆಡಳಿತ ಮಂಡಳಿ ಮಾತ್ರ ಈ ಬಗ್ಗೆ ಮೌನವಹಿಸಿದೆ.
ಪ್ರತಿ ವರ್ಷ ಸುಮಾರು 25 ಮಿಲಿಯನ್ ಮುಸ್ಲಿಂ ಸಮುದಾಯದ ಜನರು ಪವಿತ್ರ ಹಜ್ ಯಾತ್ರೆಗೆ ತೆರಳುತ್ತಾರೆ. ಸೌದಿಯಲ್ಲಿ ಈಗಾಗಲೇ 1,55,000 ಕೋವಿಡ್ ಸೋಂಕಿತರಿದ್ದು, 1,230 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ. ಸೋಂಕು ಹಾಗೂ ಸಾವಿನ ಸಂಖ್ಯೆ ಇನ್ನೂ ಹೆಚ್ಚಳವಾಗುವ ಭೀತಿಯಿದೆ. ಮಾರ್ಚ್ ತಿಂಗಳಿನಲ್ಲಿ ಇಲ್ಲಿ ಕಠಿನ ನಿಯಮಗಳೊಂದಿಗೆ ಕರ್ಫ್ಯೂ ಜಾರಿಗೊಂಡಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.