ಆನ್ಲೈನ್ ಖರೀದಿ : 67 ಸಾವಿರ ರೂ. ಕಳೆದುಕೊಂಡ ವಿದ್ಯಾರ್ಥಿ
Team Udayavani, Jun 23, 2020, 2:35 PM IST
ಮುಂಬಯಿ, ಜೂ. 22: ಆನ್ಲೈನ್ ನಲ್ಲಿ ಹೆಡ್ಫೋನ್ ಮತ್ತು ವೆಬ್ಕ್ಯಾಮ್ ಖರೀದಿಸಲು ಹೋದ ವಿದ್ಯಾರ್ಥಿಯೊಬ್ಬ 67,495 ರೂ. ಗಳನ್ನು ಕಳೆದುಕೊಂಡಿರುವ ಘಟನೆ ನಡೆದಿದೆ.
ವಿದ್ಯಾರ್ಥಿಯ ತಂದೆ 51 ವರ್ಷದ ಶ್ರೀನಿವಾಸ್ ಪಂಕಲಾ ಅವರು ಈ ಬಗ್ಗೆ ಸಾಂತಾಕ್ರೂಜ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆನ್ಲೈನ್ ತರಗತಿಗಳಿಗೆ ಹಾಜರಾಗಲು ಹೆಡ್ಫೋನ್ ಮತ್ತು ವೆಬ್ಕ್ಯಾಮ್ ಖರೀದಿಸಲು ಮುಂ ದಾಗಿದ್ದ ವಿದ್ಯಾರ್ಥಿ. ಜೂ. 13ರಂದು ವಿದ್ಯಾರ್ಥಿಯು ಆನ್ಲೈನ್ನಲ್ಲಿ ಅನಾಮ ಧೇಯ ವೆಬ್ಸೈಟ್ ರಿಯಾಯಿತಿ ಇದೆಯೇ ಎಂದು ವಿಚಾರಿಸಲು ಸೈಟ್ನಲ್ಲಿ ನಮೂದಿಸಲಾದ ಸಂಖ್ಯೆಯನ್ನು ಸಂಪರ್ಕಿಸಿದ್ದಾನೆ. ಈ ಉತ್ಪನ್ನಗಳನ್ನು ವಿಶೇಷ ರಿಯಾಯಿತಿ ದರದಲ್ಲಿ ಮಾರಾಟ ಮಾಡುತ್ತಿರುವುದಾಗಿ ಆರೋಪಿ ಹೇಳಿದ್ದು, ಆನ್ಲೈನ್ ಪಾವತಿಯ ಬಳಿಕ ಪ್ರೊಡಕ್ಟ್ಗಳನ್ನು ಕಳುಹಿಸುವುದಾಗಿ ತಿಳಿಸಿದ್ದ. ಬಳಿಕ ಆರೋಪಿ ಸ್ವಲ್ಪ ಪ್ರೊಡಕ್ಟ್ಗಳನ್ನು ರವಾನಿಸಿದ್ದು ಕ್ಯೂಆರ್ ಕೋಡ್ ಕಳುಹಿಸಿ ಪಾವತಿಗಾಗಿ ಸ್ಕ್ಯಾನ್ ಮಾಡಬೇಕಾಗಿದೆ ಎಂದು ಹೇಳಿ 67,495 ರೂ. ಗಳನ್ನು ಅವನ ತಂದೆಯ ಖಾತೆಯಿಂದ ಕಡಿತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್ಗಾಗಿ ಅಡಿಲೇಡ್ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.