![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jun 23, 2020, 5:04 PM IST
ಹೊಸದಿಲ್ಲಿ: ಟೆಸ್ಟ್ ಕ್ರಿಕೆಟ್ ಬದುಕಿನ ಪಾಠವನ್ನು ಕಲಿಸುತ್ತದೆ.ಅದಕ್ಕಿಂತ ಸವಾಲಿನ ಮಾದರಿ ಮತ್ತೂಂದಿಲ್ಲ ಎಂದು ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ ಕ್ರಿಸ್ ಗೇಲ್ ಹೇಳಿದ್ದಾರೆ. ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಓಪನ್ ನೆಟ್ಸ್’ ಆನ್‌ಲೈನ್ ಕಾರ್ಯಕ್ರಮದಲ್ಲಿ ಮಯಂಕ್ ಅಗರ್ವಾಲ್ ಜತೆ ಮಾತನಾಡಿರುವ ಗೇಲ್ ಐದು ದಿನಗಳ ಕಾಲ ಆಡುವುದು ತಮಾಷೆಯ ಮಾತಲ್ಲ. ಟೆಸ್ಟ್ ಮಾದರಿಯಿಂದ ಶಿಸ್ತು ಮತ್ತು ಸಂಯಮದ ಪಾಠ ಕಲಿಯಬಹುದು. ಜೀವನದಲ್ಲೂ ಇವುಗಳನ್ನು ಅಳವಡಿಸಿಕೊಳ್ಳಬಹುದು ಎಂದಿದ್ದಾರೆ.
ಸಂಕಷ್ಟದ ಪರಿಸ್ಥಿತಿಯನ್ನು ಮೀರಿ ನಿಲ್ಲುವುದು ಹೇಗೆ ಎಂಬುದನ್ನೂ ಟೆಸ್ಟ್ ಕ್ರಿಕೆಟ್ ಹೇಳಿಕೊಡುತ್ತದೆ. ತಮ್ಮಲ್ಲಿರುವ ಕೌಶಲಗಳನ್ನು ಪರೀಕ್ಷಿಸಿಕೊಳ್ಳಲು ಯುವ ಆಟಗಾರರಿಗೆ ಈ ಮಾದರಿಯು ಸಹಕಾರಿಯಾಗಿದೆ. ಎಲ್ಲರೂ ತಾವು ಮಾಡುವ ಕೆಲಸದ ಬಗ್ಗೆ ಬದ್ಧತೆ ಹಾಗೂ ಒಲವು ಬೆಳೆಸಿಕೊಳ್ಳಬೇಕು. ಯಾವುದೂ ಅಸಾಧ್ಯವಲ್ಲ. ಒಂದು ಅವಕಾಶ ಕೈತಪ್ಪಿದರೆ ಮತ್ತೂಂದು ಅವಕಾಶ ಖಂಡಿತವಾಗಿಯೂ ನಮ್ಮನ್ನು ಅರಸಿ ಬರುತ್ತದೆ. ಅದಕ್ಕಾಗಿ ಕಾಯಬೇಕು. ಕಷ್ಟದ ದಿನಗಳಲ್ಲಿ ಹತಾಶರಾಗದೆ ಸವಾಲುಗಳನ್ನು ಸ್ವೀಕರಿಸುತ್ತಾ ಮುಂದೆ ಸಾಗಬೇಕು ಎಂದು ಗೇಲ್ ಕಿವಿಮಾತು ಹೇಳಿದ್ದಾರೆ.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.