ಚಟ್ನಿ ಚಮತ್ಕಾರ್!
Team Udayavani, Jun 24, 2020, 4:34 AM IST
ಮನೆಯೂಟ ಇಂದು ಎಲ್ಲರ ಆದ್ಯತೆ. ಕಚೇರಿಗೆ ಹೋಗುವವರೂ ಊಟಕ್ಕೆ ಹೋಟೆಲ್ ಅನ್ನು ಅವಲಂಬಿಸದೆ, ಮನೆಯಿಂದಲೇ ಬುತ್ತಿ ತೆಗೆದುಕೊಂಡು ಹೋಗಬೇಕಾಗಿದೆ. ಮನೆಯ ಅಡುಗೆಯಲ್ಲೇ ವೆರೈಟಿ ಸೇರಿಸುವುದು ಈಗ ಗƒಹಿಣಿಗೆ ಸವಾಲು. ನಿತ್ಯದ ಅಡುಗೆಯಲ್ಲಿ ಹೊಸತನ ತರಲು ಬಯಸುತ್ತಿರುವವರಿಗೆ ಇಲ್ಲಿದೆ ಕೆಲವು ಚಟ್ನಿ ರೆಸಿಪಿ…
ಪುದೀನ ಚಟ್ನಿ
ಬೇಕಾಗುವ ಸಾಮಗ್ರಿ: ಪುದೀನ ಸೊಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು, ಹುರಿಗಡಲೆ- 3 ಚಮಚ, ಬೆಳ್ಳುಳ್ಳಿ-10, ಶುಂಠಿ- ಒಂದು ಸಣ್ಣ ತುಣುಕು, ಹಸಿಮೆಣಸಿನ ಕಾಯಿ, ಉಪ್ಪು, ಲಿಂಬೆಹುಳಿ, ಜೀರಿಗೆ, ಚೂರು ಬೆಲ್ಲ.
ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಒಟ್ಟಿಗೆ ಸೇರಿಸಿ, ನೀರು ಹಾಕದೆ ಚೆನ್ನಾಗಿ ರುಬ್ಬಿಕೊಳ್ಳಿ. ನಂತರ ಅದಕ್ಕೆ ಉಪ್ಪು, ಲಿಂಬೆರಸ ಬೆರೆಸಿ. ಇದು ಬಹಳ ರುಚಿಯಾಗಿರುವುದಲ್ಲದೆ, ಐದಾರು ದಿನಗಳವರೆಗೆ ಕೆಡುವುದಿಲ್ಲ.
ಖರ್ಜೂರ
ಬೇಕಾಗುವ ಸಾಮಗ್ರಿ: ಖರ್ಜೂರ- 1 ಬಟ್ಟಲು, ಹುಣಸೆಹಣ್ಣು- ಕಾಲು ಬಟ್ಟಲು, ಬೆಲ್ಲ- ಕಾಲು ಬಟ್ಟಲು, ಜೀರಿಗೆ- 2 ಚಮಚ, ಕೆಂಪು ಖಾರದ ಪುಡಿ- 2 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಖರ್ಜೂರವನ್ನು ಒಂದು ಗಂಟೆ ನೀರಿನಲ್ಲಿ ನೆನೆ ಹಾಕಿ. ನೆಂದ ಖರ್ಜೂರವನ್ನು ನುಣ್ಣಗೆ ರುಬ್ಬಿಕೊಳ್ಳಿ. ಹುಣಸೆಹಣ್ಣನ್ನು ಬಿಸಿ ನೀರು ಬೆರೆಸಿ ಚೆನ್ನಾಗಿ ಕಿವುಚಿ ರಸ ತೆಗೆಯಿರಿ. ಖರ್ಜೂರ ಮತ್ತು ಹುಣಸೆ ರಸವನ್ನು ಬೆರೆಸಿ, ಸೋಸಿ. ಆ ಮಿಶ್ರಣಕ್ಕೆ ಉಪ್ಪು, ಖಾರದ ಪುಡಿ, ಬೆಲ್ಲ, ಹುರಿದ ಜೀರಿಗೆ ಪುಡಿ ಹಾಕಿ ಬೆರೆಸಿ, ಚೆನ್ನಾಗಿ ಕುದಿಸಿ. ಈ ಚಟ್ನಿಯನ್ನು ಸಮೋಸ, ಬೋಂಡಾ, ಪಕೋಡದ ಜೊತೆ ನೆಂಚಿಕೊಂಡು ತಿನ್ನಬಹುದು.
ಸಿಹಿಗುಂಬಳ
ಬೇಕಾಗುವ ಸಾಮಗ್ರಿ: ಸಿಹಿಗುಂಬಳ- 1 ಕಪ್, ಕೆಂಪು ಮೆಣಸು- 6, ಹುರಿಗಡಲೆ- ಅರ್ಧ ಕಪ್, ಒಣಕೊಬ್ಬರಿ- ಅರ್ಧ ಕಪ್, ಕೊತ್ತಂಬರಿ ಸೊಪ್ಪು, ಜೀರಿಗೆ, ಉಪ್ಪು, ಸಕ್ಕರೆ, ಮಾವಿನತುರಿ/ ಲಿಂಬೆ ರಸ- ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ಸಿಹಿಗುಂಬಳದ ಸಿಪ್ಪೆ ತೆಗೆದು, ದಪ್ಪದಾಗಿ ಹೆಚ್ಚಿಕೊಳ್ಳಿ. ನಂತರ, ಅದನ್ನು ಎಣ್ಣೆಯಲ್ಲಿ ಚೆನ್ನಾಗಿ ಹುರಿಯಿರಿ (ನೀರು ಹಾಕಿ ಬೇಯಿಸಬಹುದು). ಮೇಲೆ ಹೇಳಿದ ಎಲ್ಲ ಸಾಮಗ್ರಿಗಳನ್ನು ಸಿಹಿಗುಂಬಳದ ಜೊತೆ ಸೇರಿಸಿ ರುಬ್ಬಿ. ಇದು ಕೊಬ್ಬರಿ ಚಟ್ನಿಯಷ್ಟೇ ರುಚಿಯಾಗಿರುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Goa ಕರಾವಳಿಯಲ್ಲಿ ನೌಕಾಪಡೆಯ ಸಬ್ ಮರೈನ್ ಗೆ ಡಿಕ್ಕಿ ಹೊಡೆದ ಬೋಟ್-ಇಬ್ಬರು ನಾಪತ್ತೆ!
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.