ಮಾನವ ಜನ್ಮ ಬಲು ದೊಡ್ಡದು

Team Udayavani, Jun 24, 2020, 4:37 AM IST

manava-janma

ವೃದ್ಧ ಗೃಹಸ್ಥನೊಬ್ಬ ಹತ್ತು ತಲೆಮಾರಿನವರೆಗೂ ಆಗಿ ಮಿಗುವಷ್ಟು ಆಸ್ತಿಯನ್ನು ಸಂಪಾದಿಸಿದ್ದ. ಒಂದು ದಿನ ಅವನಿಗೆ- “ಅಯ್ಯೋ, ಇಷ್ಟು ದಿನ ನನ್ನವರಿಗಾಗಿ ಕಷ್ಟಪಟ್ಟು ಆಸ್ತಿಯನ್ನೇನೋ ಗಳಿಸಿದೆ. ಆದರೆ ನನ್ನ ಪರಲೋಕಕ್ಕೆ ಯಾವ  ಪುಣ್ಯಸಂಪಾದನೆ  ಯನ್ನೂ ಮಾಡದೇ ವ್ಯರ್ಥಮಾಡಿಕೊಂಡೆ ನಲ್ಲ’ ಎನಿಸಿತು. ಅವತ್ತು ರಾತ್ರಿ ಮಲಗುವಾಗ ತನ್ನ ಮಗನನ್ನು ಕರೆದು- ಜಾತಸ್ಯ ಮರಣಂ ಧ್ರುವಂ ಎನ್ನುತ್ತಾರೆ.

ಹುಟ್ಟಿದವರಿಗೆ ಮರಣ ನಿಶ್ಚಯ. ಮುಂದಿನ ಜನ್ಮದಲ್ಲಿ ನಾನು ಹಂದಿಯಾಗಿ ಹುಟ್ಟಿ ನಿನ್ನೆದುರು ಬರುತ್ತೇನೆ. ನೀನು ಏನೂ ಸಂಕೋಚಪಟ್ಟುಕೊಳ್ಳದೇ ನನ್ನನ್ನು ಕೊಂದು ಬಿಡು. ಅದರ ನಂತರ ನನಗೆ ಪುನಃ ಮನುಷ್ಯ ಜನ್ಮ ಬರುತ್ತದೆ. ಆಗ ಸಾಧನೆ ಮಾಡಿ ಭಗವಂತನನ್ನು ಸೇರುತ್ತೇನೆ’ ಎಂದು  ಹೇಳಿದ. ಅದೇ ರಾತ್ರಿ ವೃದ್ಧ ಚಿರನಿದ್ರೆಗೆ ಜಾರಿದ. ಹೀಗೇ ವರುಷಗಳು ಉರುಳಿದವು. ಒಮ್ಮೆ ಆ ಗೃಹಸ್ಥನ ಮಗನ ಮನೆಯ ಹಿತ್ತಲಲ್ಲಿ ಹಂದಿಗಳ ಹಿಂಡು ಪರಿವಾರ ಸಮೇತ ಕಂಡು ಬಂತು.

ಕೂಡಲೇ ಗೃಹಸ್ಥನ ಮಗನಿಗೆ ತಂದೆಯ  ಮಾತು ಜ್ಞಾಪಕಕ್ಕೆ ಬಂತು. ತನ್ನ ಬಂದೂಕಿನಿಂದ ಗುಂಡುಹಾರಿಸಲು ಉದ್ಯುಕ್ತ ನಾದ. ಆಗ ಹಂದಿಯು- “ನಿಲ್ಲು, ನನ್ನನ್ನು ಕೊಲ್ಲಬೇಡ. ನಾನು ನಿನಗೆ ಹಿಂದೇನೋ ಹೇಳಿರಬಹುದು. ಆದರೆ ಈಗ ಈ ಹಂದಿ ಜನ್ಮದಲ್ಲಿ ನನ್ನ ಹೆಂಡತಿ  ಮಕ್ಕಳೊಡನೆ ಅತ್ಯಂತ ಸಂತೋಷವಾಗಿ ದ್ದೇನೆ’ ಎಂದಿತು. ಆದರೆ ಗೃಹಸ್ಥನ ಮಗನು, ತನ್ನ ತಂದೆಯು ಪ್ರಾಜ್ಞನಾಗಿ ಮಾನವ ಜನ್ಮದಲ್ಲಿ ಹೇಳಿದ ಆಜ್ಞೆಯೇ ಅನುಕರಣೀಯ ಎಂದು ಯೋಚಿಸಿ, ಆ ಹಂದಿಯನ್ನು ವಧಿಸಿದ. ಉಳಿದೆಲ್ಲವೂ ಆ ಗೃಹಸ್ಥನು  ಬಯಸಿ ದಂತೆಯೇ ಆಯಿತು. ಮಾನವ ದೇಹ ಸೃಷ್ಟಿಯ ಅತ್ಯದ್ಭುತ ವಾದ ಯಂತ್ರ.

ಈ ದೇಹದಲ್ಲಿ ಮಾತ್ರ ಪರ ಮಾ ತ್ಮನನ್ನು ಸಾಕ್ಷಾತ್ಕರಿಸಿಕೊಂಡು ಪುರುಷಾರ್ಥಮಯವಾದ ಬಾಳಾಟವನ್ನು ಮಾಡು ವುದಕ್ಕೆ ಸಾಧ್ಯ. ಚತುರ್ದಶ  ಭುವನಗಳನ್ನು ಕೊಟ್ಟರೂ, ಅವು ಈ ಮಾನವ ದೇಹಕ್ಕೆ ಸಮಾನವಲ್ಲ ಎಂಬ ಶ್ರೀರಂಗ ಮಹಾಗುರು ಗಳ ಮಾತು ಇಲ್ಲಿ ಸ್ಮರ ಣೀಯ. ಮಹತ್ತಾದ ಪುಣ್ಯವೆಂಬ ಹಣವನ್ನು ಕೊಟ್ಟು ಈ ಮಾನವ ದೇಹವನ್ನು ಪಡೆದಿದ್ದೀಯ. ಈ ನೌಕೆ ಮುರಿಯುವ ಮುನ್ನವೇ ಮೋಕ್ಷದ ದಡ ಸೇರಿಕೋ ಎಂಬ ಋಷಿವಾಣಿಯೂ, ಇದನ್ನೇ ಸಾರುತ್ತದೆ.

* ರತ್ನಾಸುರೇಶ, ಸಂಸ್ಕೃತಿ ಚಿಂತಕಿ

ಟಾಪ್ ನ್ಯೂಸ್

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

Turkey: ಟೇಕ್‌ ಆಫ್‌ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!

mohan bhagwat

Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Allu Arjun: ನಟ ಅಲ್ಲು ಅರ್ಜುನ್‌ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.