ಜಿಆರ್‌ಎಸ್ ಅಪ್‌ಡೌನ್ ಮ್ಯೂಸಿಯಂ ವಿಸ್ಮಯ
Team Udayavani, Jun 24, 2020, 6:05 AM IST
ಬೆಂಗಳೂರು: “ಜಿಆರ್‌ಎಸ್ ಅಪ್‌ಡೌನ್ ಮ್ಯೂಸಿಯಂ” ಸೋಮವಾರದಿಂದ ಆರಂಭವಾಗಿದೆ. ಜಗತ್ತು ತಲೆ ಕೆಳಗಾದರೆ ಹೇಗೆ? ಈ ಕುತೂಹಲ ತಣಿಸುವ ತಾಣವೊಂದು ಮೈಸೂರಿನ ಜಿ ಆರ್‌ಎಸ್ ಫ್ಯಾಂಟಸಿ ಪಾರ್ಕ್‌ನಲ್ಲಿ ನಿರ್ಮಾಣವಾಗಿದೆ. ವಿಶೇಷ ಅನುಭವ ನೀಡುವ ಕಲಾತ್ಮಕ ಲೋಕ “ಅಪ್ ಡೌನ್ ಮ್ಯೂಸಿಯಂ “ನಿರ್ಮಾಣವಾಗಿದ್ದು. ಜೂ.22 ರಿಂದ ವೀಕ್ಷಣೆಗೆ ತೆರೆದುಕೊಳ್ಳಲಿದೆ,
ಮ್ಯೂಸಿಯಂ ಗೆ ಕಾಲಿಟ್ಟ ಕ್ಷಣ ಹೊಸ ಜಗತ್ತಿನ ದರ್ಶನವಾಗುತ್ತದೆ. ಇದರಲ್ಲಿರುವ 12 ಕೊಠಡಿಗಳಲ್ಲಿ ಅಡುಗೆ ಕೋಣೆ. ಡೈನಿಂಗ್ ಹಾಲ್, ಲಿವಿಂಗ್ ರೂಂ ಇನ್ನಿತರ ವಿನ್ಯಾಸವನ್ನು ಸೃಷ್ಟಿಸಲಾಗಿದೆ. ಛಾವಣಿ (ಟರೇಸ್) ಗೆ ಅಳವಡಿಸಲಾ ಗಿರುವ 19ನೇ ಶತಮಾನದ ಕಾರು, ಸ್ಕೂಟರ್ ಮಾದರಿ, ಮೇಜು, ಕುರ್ಚಿಯಂತಹ ಪೀಠೊಪಕರಣಗಳು ನೋಡುಗರನ್ನು ಚಕಿತಗೊಳಿಸುತ್ತವೆ. ಮ್ಯೂಸಿಯಂನಲ್ಲಿ ಫೋಟೋ ತೆಗೆಸಿಕೊಂಡು ನೋಡಿದರೆ ನಾವೇ ತೆಲೆಕೆಳಗಾಗಿ ನಿಂತಿದ್ದೆವೇನೋ? ಎಂಬ ವಿಸ್ಮಯ ಮೂಡಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನ ಬಿಸಿನೆಸ್ ಹೆಡ್ ಅಶ್ವಿನ್ ಡಾಂಗೆ, ವಾಸು ¤ಶಿಲ್ಪಿ ಸೇರಿದಂತೆ ನಮ್ಮ ತಂಡ ಮಲೇಷಿಯಾ ಇನ್ನಿತರೆ ದೇಶಗಳಿಗೆ ಭೇಟಿ ನೀಡಿದಾಗ ಅಲ್ಲಿನ ಅಪ್ ಡೌನ್ ಮ್ಯೂಸಿಯಂಗಳನ್ನು ವೀಕ್ಷಿಸಿದ್ದವು. ವಾಪಸ್ಸಾದ ಬಳಿಕ ತಮ್ಮದೇ ಆದ ವಿನ್ಯಾಸದಲ್ಲಿ 7 ತಿಂಗಳ ಕಾಲಾವಧಿಯಲ್ಲಿ ಮ್ಯೂಸಿಯಂ ನಿರ್ಮಿಸಿದೆವು. ಕಳೆದ ಮಾರ್ಚ್‌ನಲ್ಲೇ ಸಿದ್ಧವಾಗಿದ್ದರೂ ಕೊರೊನಾ ಪರಿಣಾಮ ಉದ್ಘಾಟಿಸಲಾಗಲಿಲ್ಲ.
ವಾರದ ಹಿಂದೆ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಡ್ರೆವ್-ಇನ್ ರೆಸ್ಟೋರೆಂಟ್ ಆರಂಭಿಸಲಾಗಿದ್ದು, ಸೋಮವಾರ ದಿಂದ ಅಪ್ ಡೌನ್ ಮ್ಯೂಸಿಯಂ ವೀಕ್ಷಣೆಗೆ ತೆರೆದುಕೊಂಡಿದೆ. ಆದರೆ ವಾಟರ್ ಪಾರ್ಕ್ ಹಾಗೂ ಸ್ನೋ ಪಾರ್ಕ್ ಗೆ ಪ್ರವೇಶ ಇರುವುದಿಲ್ಲ ಎಂದು ತಿಳಿಸಿದ್ದಾರೆ. “ಜಿಆರ್‌ಎಸ್ ಅಪ್‌ಡೌನ್ ಮ್ಯೂಸಿಯಂ” ಸೋಮವಾರದಿಂದ ಪ್ರಾರಂಭ ವಾ ಗಿದ್ದು ಮಧ್ಯಾಹ್ನ 1.00 ರಿಂದ ರಾತ್ರಿ 9.00 ಗಂಟೆವೆರಗೆ ತೆರೆದಿರುತ್ತದೆ. ಅಪ್ ಡೌನ್ ಮ್ಯೂಸಿಯಂ ಜಿಆರ್‌ಎಸ್ ಫ್ಯಾಂಟಸಿ ಪಾರ್ಕ್‌ನ ಪಕ್ಕದಲ್ಲಿದೆ. ಮಾಹಿತಿಗೆ 9590-080808 ಸಂಪರ್ಕಿಸಲು ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.