ಪತಂಜಲಿ ಕೋವಿಡ್ ಔಷಧಿಗೆ ಆಯುಷ್ ಸಚಿವಾಲಯದಿಂದ ತಡೆ: ವಿವರ ನೀಡಲು ಸೂಚನೆ
Team Udayavani, Jun 24, 2020, 8:10 AM IST
ನವದೆಹಲಿ: ಕೋವಿಡ್ 19 ವೈರಸ್ ಹೊಡೆದೋಡಿಸಲು ಪತಂಜಲಿ ಬಿಡುಗಡೆ ಮಾಡಿದ ಔಷಧಿಗೆ ಕೇಂದ್ರ ಸರ್ಕಾರ ತಡೆಯೊಡ್ಡಿದೆ. ಏಳು ದಿನಗಳಲ್ಲಿ ಸೋಂಕಿತ ವ್ಯಕ್ತಿಯನ್ನು ಗುಣಪಡಿಸುವ ಸಾಮರ್ಥ್ಯ ಈ ಔಷಧಿಗಿದೆಯೆಂದು ಹೇಳಿದ್ದ ಯೋಗ ಗುರು ಬಾಬಾ ರಾಮ್ ದೇವ್ ಅವರಿಗೆ ಈಗ ತೀವ್ರ ಹಿನ್ನಡೆಯಾಗಿದ್ದು, ಆಯಷ್ ಸಚಿವಾಲಯ ಔಷಧಿ ಸಂಶೊಧನೆ ಕುರಿತು ವಿವರ ಸಲ್ಲಿಸುವಂತೆ ಸೂಚನೆ ನೀಡಿದೆ.
ಮಾತ್ರವಲ್ಲದೆ ಪತಂಜಲಿ ಸಂಸ್ಥೆ ನಡೆಸಿದ ಸಂಶೋಧನೆಯನ್ನು ಸರಕಾರ ಪರಿಶೀಲನೆ ಮತ್ತು, ಅಧ್ಯಯನ ನಡೆಸಿದ ನಂತರೆವೇ ಅದನ್ನು ಮಾರುಕಟ್ಟೆಗೆ ಬಿಡಿಗಡೆ ಮಾಡಬೇಕು. ಅದರ ಜೊತೆಗೆ ಔಷಧಿ ಕುರಿತು ಜಾಹೀರಾತು ನೀಡುವುದನ್ನು ನಿಲ್ಲಿಸಬೇಕು ಎಂದು ಆಯುಷ್ ಸಚಿವಾಲಯ ಆದೇಶಿಸಿದೆ.
ಕೊರೊನಿಲ್ ಔಷಧಿಗಳನ್ನು ದೇಶಾದ್ಯಂತ 280 ರೋಗಿಗಳ ಸಂಶೋಧನೆ ಮತ್ತು ಪ್ರಯೋಗಗಳ ಆಧಾರದ ಮೇಲೆ ಅಭಿವೃದ್ಧಿಪಡಿಸಲಾಗಿದೆ. ಈ ಔಷಧದ ಬೆಲೆ 545 ರೂ. ಗಳು. ಇದನ್ನು ಒಂದು ವಾರದೊಳಗೆ ಭಾರತದಾದ್ಯಂತ ಮಾರಾಟ ಮಾಡಲಾಗುವುದು ಎಂದು ಬಾಬಾ ರಾಮ್ ದೇವ್ ತಿಳಿಸಿದ್ದರು.
ಈ ಬಗ್ಗೆ ಸ್ಪಷ್ಟನೆ ಕೇಳಿದ ಆಯುಷ್ ಸಚಿವಾಲಯವು, ಕೊರೋನಿಲ್ ಔಷಧ ಸಂಶೋಧನೆಯ ಫಲಿತಾಂಶಗಳು, ಕ್ಲಿನಿಕಲ್ ಪ್ರಯೋಗಗಳು, ಸಂಶೋಧನೆ ನಡೆಸಿದ ಆಸ್ಪತ್ರೆಗಳು, ಪತಂಜಲಿ ಕಂಪನಿಯು ಔಷಧಿ ಸಿದ್ದಪಡಿಸಲು ಅನುಮತಿ ಪಡೆದಿದೆಯೇ ಮತ್ತು ನೋಂದಾಯಿಸಿಕೊಂಡಿದೆಯೇ ಎಂಬ ವಿವರಗಳನ್ನು ನೀಡುವಂತೆ ಕೇಳಿದೆ.
ಇದರ ಜೊತೆಗೆ ಉತ್ತರಾಖಂಡದ ಹರಿದ್ವಾರದಲ್ಲಿ ತಯಾರಿಸಿದ ಆಯುರ್ವೇದ ಔಷಧಿಗಳ ಪರವಾನಗಿ ಮತ್ತು ಉತ್ಪನ್ನ ಅನುಮೋದನೆ ವಿವರಗಳನ್ನು ನೀಡುವಂತೆ ಅಲ್ಲಿನ ಸರಕಾರಕ್ಕೆ ಆಯುಷ್ ಸಚಿವಾಲಯ ಮನವಿ ಮಾಡಿದೆ.
ಈ ಕುರಿತು ಮಾತನಾಡಿದ ಪತಂಜಲಿ ಸಿಇಒ ಆಚಾರ್ಯ ಬಾಲಕೃಷ್ಣ, ಎಲ್ಲಾ ಮಾದರಿಯ ಪರೀಕ್ಷೆಗಳನ್ನು ಶೇಕಡಾ 100 ರಷ್ಟು ಪೂರೈಸಲಾಗಿದೆ. ಈ ಕುರಿತ ಮಾಹಿತಿಯನ್ನು ಆಯುಷ್ ಸಚಿವಾಲಯಕ್ಕೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.
ಸಾರ್ವಜನಿಕರನ್ನು ದಾರಿ ತಪ್ಪಿಸಲಾಗಿದೆ ಎಂದು ಪತಂಜಲಿ ವಿರುದ್ಧ ರಾಜಸ್ಥಾನ ಮತ್ತು ಹರ್ಯಾಣದಲ್ಲಿ ಎರಡು ಪೊಲೀಸ್ ದೂರುಗಳು ದಾಖಲಾಗಿವೆ. ಜೊತೆಗೆ ಐಸಿಎಂಆರ್ ಕೂಡ ಯೋಗ ಗುರು ಸಂಸ್ಥೆಯ ಔಷಧದ ಬಗ್ಗೆ ದೂರ ಉಳಿಯಲು ನಿರ್ಧರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.