ಪಾಲಿಕೆ ಆಡಳಿತ ವೈಫಲ್ಯದಿಂದ ನೀರಿನ ಸಮಸ್ಯೆ ಉಲ್ಬಣ: ನಾಗರಾಜ್
Team Udayavani, Jun 24, 2020, 9:08 AM IST
ದಾವಣಗೆರೆ: ಮಹಾನಗರ ಪಾಲಿಕೆಯ ವೈಫಲ್ಯದ ಪರಿಣಾಮ ಜನರು ಕುಡಿಯುವ ನೀರಿನ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಗರಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್ ದೂರಿದ್ದಾರೆ.
ರಾಜನಹಳ್ಳಿ, ಬಾತಿ, ಕುಂದುವಾಡ ಪಂಪ್‌ಹೌಸ್‌ಗಳಲ್ಲಿನ ಮೋಟಾರ್‌ಗಳನ್ನು ದುರಸ್ತಿ ಮಾಡಿಸಿಲ್ಲ. ನಿಜಲಿಂಗಪ್ಪ ಬಡಾವಣೆಯಲ್ಲೇ 15 ದಿನಗಳಿಂದ ನೀರು ಬಿಟ್ಟಿಲ್ಲ. ಆಡಳಿತ ವರ್ಗದ ಸಂಪೂರ್ಣ ವೈಫಲ್ಯವೇ ನೀರಿನ ಸಮಸ್ಯೆಗೆ ಮೂಲ ಕಾರಣ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿದರು. ಜಿಲ್ಲಾಧಿಕಾರಿಗಳ ಅಧಿಕಾರವಧಿಯಲ್ಲಿ ಫೆ. 7 ರಂದು ಆಸ್ತಿ ತೆರಿಗೆ ಹೆಚ್ಚಿಸಲಾಗಿದೆ. ಕೋವಿಡ್ , ಲಾಕ್ ಡೌನ್‌ನಿಂದ ಜನರು ಆರ್ಥಿಕ ತೊಂದರೆಯಲ್ಲಿರುವಾಗ ತೆರಿಗೆ ಕಟ್ಟುವುದು ಬಹಳ ಕಷ್ಟ. ಹಾಗಾಗಿ ಈಗ ತೆರಿಗೆ ಪರಿಷ್ಕರಣೆಯೇ ಬೇಡ. ಒಂದೊಮ್ಮೆ ಮಾಡುವುದಾದರೆ ಮನೆ, ವಾಣಿಜ್ಯಕ್ಕೆ ಕಡಿಮೆ ಪರಿಷ್ಕರಣೆ ಮಾಡಬೇಕು. ಸಾಮಾನ್ಯ ಸಭೆಯಲ್ಲಿ ಈ ವಿಷಯವಾಗಿ ಚರ್ಚೆ ಮಾಡಿ ನಮ್ಮ ವಿರೋಧ ವ್ಯಕ್ತಪಡಿಸಲಾಗುವುದು ಎಂದು ತಿಳಿಸಿದರು.
ಕೋವಿಡ್ ದಂತಹ ಸಂಕಷ್ಟ ಸಮಯದಲ್ಲಿ ಪೊಲೀಸರು ಹೆಲ್ಮೆಟ್ ಹಾಕದವರಿಂದ ದಂಡ ವಸೂಲಿ ಮಾಡುವುದನ್ನೇ ದಂಧೆಯಂತೆ ಮಾಡುತ್ತಿದ್ದಾರೆ. ಮಾಸ್ಕ್ ಕಡ್ಡಾಯ ಮಾಡಲಿ, ಆದರೆ 2-3 ತಿಂಗಳು ಹೆಲ್ಮೆಟ್‌ಗೆ ವಿನಾಯತಿ ನೀಡಬೇಕು ಎಂದು ಒತ್ತಾಯಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Market: ಇಳುವರಿ ಕೊರತೆ: ತೆಂಗಿನಕಾಯಿ ಬೆಲೆ 58ರಿಂದ 60 ರೂಪಾಯಿ!
Davanagere: ಯತ್ನಾಳ್ ಫೋರ್ತ್ ಗ್ರೇಡ್ ರಾಜಕಾರಣಿ..: ರೇಣುಕಾಚಾರ್ಯ ವಾಗ್ದಾಳಿ
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು
BJP;ಯತ್ನಾಳ್ ರನ್ನು ತಡೆಯದಿದ್ದರೆ ನಾನೂ ಪ್ರತ್ಯೇಕ ಪಾದಯಾತ್ರೆ ಮಾಡುತ್ತೇನೆ:ರೇಣುಕಾಚಾರ್ಯ
MUST WATCH
ಹೊಸ ಸೇರ್ಪಡೆ
Shimoga: ಮುಸ್ಲಿಂ ಸಂತೃಪ್ತಿಗೆ ಖರ್ಗೆ ಆರ್ ಎಸ್‌ಎಸ್ ಹೇಳಿಕೆ: ಈಶ್ವರಪ್ಪ ಟೀಕೆ
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ… ನಕ್ಸಲ್ ಎನ್‌ಕೌಂಟರ್ ಬಗ್ಗೆ ಡಿಐಜಿ ಹೇಳಿದ್ದೇನು ?
Udupi: ಈಶ್ವರನಗರ-ಪರ್ಕಳ ರಸ್ತೆಯ ಹೊಂಡಗಳಿಗೆ ಕೊನೆಗೂ ತೇಪೆ
Udupi: ವಿಸಿಲ್ ಹೊಡೆದು, ಕೈ ಸನ್ನೆಯಲ್ಲೇ ಟ್ರಾಫಿಕ್ ನಿರ್ವಹಣೆ!
Paddana-Tulu folk songs: ಮರೆಯಾಗದಿರಲಿ ಪಾಡ್ದನನವೆಂಬ ಸಂಸ್ಕೃತಿಯ ಸಂಪರ್ಕ ಕೊಂಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.