ಸೋಂಕು ತಡೆಗೆ “ಮಿಷನ್ ಝೀರೋ’ ಯೋಜನೆ
Team Udayavani, Jun 24, 2020, 12:02 PM IST
ಮುಂಬಯಿ, ಜೂ. 23: ಅತಿ ಹೆಚ್ಚು ಕೋವಿಡ್ ಭಾದಿತ ಉಪ ನಗರಗಳಲ್ಲಿ ಕೋವಿಡ್ ಹರಡುವಿಕೆ ತಡೆಗಟ್ಟುವ ಹಿನ್ನೆಲೆ ಮುಂಬಯಿ ಮಹಾನಗರ ಪಾಲಿಕೆ ಸೋಮವಾರ ಶಹಾಜಿರಾಜೇ ಭೋಸ್ಲೆ ಕ್ರೀಡಾ ಸಂಕೀರ್ಣದಲ್ಲಿ “ಮಿಷನ್ ಝೀರೋ’ ಕ್ಷಿಪ್ರ ಕ್ರಿಯಾ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಡಿಯಲ್ಲಿ 50 ಮೊಬೈಲ್ ಡಿಸ್ಪೆನ್ಸರಿ ವ್ಯಾನ್ಗಳು ಮುಂಬಯಿಯ ವಿವಿಧ ಭಾಗಗಳನ್ನು 2-3 ವಾರಗಳವರೆಗೆ ರೋಗಿಗಳ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಿವೆ. ಈ ಮೊಬೈಲ್ ಔಷಧಾಲಯ ವ್ಯಾನ್ಗಳು ಈಗ ಮುಲುಂಡ್, ಭಾಂಡೂಪ್, ಅಂಧೇರಿ, ಮಲಾಡ್, ಬೊರಿವಲಿ, ದಹಿಸರ್, ಕಾಂದಿವಲಿ ಪ್ರದೇಶಗಳಿಗೆ 2-3 ವಾರಗಳವರೆಗೆ ಭೇಟಿ ನೀಡಿ ರೋಗಿಗಳ ಪ್ರಾಥಮಿಕ ಪರೀಕ್ಷೆಯನ್ನು ನಡೆಸಲಿವೆ ಎಂದು ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ. .
ಶೀಘ್ರ ಚೇಸ್ ವೈರಸ್ ಯೋಜನೆ ಜಾರಿ: ಆದಿತ್ಯ ಠಾಕ್ರೆ ರಾಜ್ಯದ ಅತ್ಯಂತ ಹಾನಿಗೊಳಗಾದ ಪ್ರದೇಶಗಳಿಗೆ ರಾಜ್ಯ ಪರಿಸರ ಸಚಿವ ಆದಿತ್ಯ ಠಾಕ್ರೆ ಚೇಸ್ ವೈರಸ್ ಹೊಸ ಉಪಕ್ರಮವನ್ನು ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಮುಲುಂಡ್, ಅಂಧೇರಿ, ಮಲಾಡ್, ಬೊರಿವಲಿ, ದಹಿಸರ್, ಕಾಂದಿವಲಿಯಲ್ಲಿ ಚೇಸ್ ದಿ ವೈರಸ್ ಡ್ರೈವ್ ಅನ್ನು ಬಿಎಂಸಿ ಪ್ರಾರಂಭಿಸುತ್ತಿದೆ. ಮೇಯರ್ ಪೆಡ್ನೆಕರ್, ಎಂಸಿ ಚಾಹಲ್ ಮತ್ತು ಉಸ್ತುವಾರಿ ಮಂತ್ರಿಯಾದ ಅಸ್ಲಾಮ್ ಶೇಖ್ ಅವರಿಗೆ ನಾನು ಸಹಕರಿಸಲಿದ್ದೇನೆ. ಈ ಪ್ರದೇಶಗಳಲ್ಲಿ ಕೋವಿಡ್ ತಡೆಗಟ್ಟುವಲ್ಲಿ ಎಲ್ಲ ರೀತಿಯ ಸಹಕಾರ ದೊರೆಯಲಿದೆ ಎಂದು ಠಾಕ್ರೆ ಟ್ವೀಟ್ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.