ಸಿದ್ಧವಾಗುತ್ತಿದೆ ಹೊಸ ಶೈಕ್ಷಣಿಕ ದಿನಗಳ ಮಾರ್ಗಸೂಚಿ
Team Udayavani, Jun 24, 2020, 3:08 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಶಾಲೆ ಆರಂಭ ವಿಳಂಬವಾಗುತ್ತಿರುವುದರಿಂದ ಪ್ರಸಕ್ತ ಸಾಲಿನ ಶೈಕ್ಷಣಿಕ ತರಗತಿ ಸರಿದೂಗಿಸಲು ದಸರಾ ರಜೆ ಮತ್ತು ಶನಿವಾರದ ರಜೆಗೆ ಕತ್ತರಿ ಪ್ರಯೋಗ ನಡೆಯಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಆಗಸ್ಟ್ ಅಂತ್ಯದವರೆಗೂ ಶಾಲಾರಂಭದ ನಿರ್ಧಾರವನ್ನು ಸರ್ಕಾರ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ತೆಗೆದುಕೊಳ್ಳಲು ಸಾಧ್ಯವಿಲ್ಲ. ಅಲ್ಲದೆ, ಸರ್ಕಾರಿ ಶಾಲೆಗಳಲ್ಲಿ ಮುಖ್ಯ ಶಿಕ್ಷಕರು ನಡೆಸಿರುವ ಪಾಲಕ, ಪೋಷಕರ ಮತ್ತು ಶಾಲಾಭಿವೃದ್ಧಿ ಹಾಗೂ
ಮೇಲುಸ್ತುವಾರಿ ಸಮಿತಿ ಸಭೆಯಲ್ಲೂ ಶಾಲಾರಂಭ ಸದ್ಯಕ್ಕೆ ಬೇಡ ಎಂಬ ಆಗ್ರಹವನ್ನೇ ಪಾಲಕ, ಪೋಷಕರು ಇಲಾಖೆ ಮುಂದಿಟ್ಟಿದ್ದಾರೆ. ಇಲಾಖೆಯೂ ಈ ಸಂಬಂಧ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಆದರೆ, ಶೈಕ್ಷಣಿಕ ವರ್ಷದ ಆರಂಭಕ್ಕೂ ಪೂರ್ವದಲ್ಲೇ ಮಾರ್ಗಸೂಚಿ ಸಿದ್ಧಪಡಿಸಲು ಎಲ್ಲಾ ತಯಾರಿ ಮಾಡಿಕೊಂಡಿದೆ.
2019 -20ನೇ ಸಾಲಿನಲ್ಲಿ ಶೈಕ್ಷಣಿಕ ತರಗತಿ ಮೇ 29ರಿಂದ ಆರಂಭಗೊಂಡು ಅ.5ರ ತನಕ ನಡೆದಿತ್ತು. ನಂತರ ಅ.6ರಿಂದ 20ರವರೆಗೆ (15ದಿನ) ದಸರಾ ರಜೆ ನೀಡಲಾ ಗಿತ್ತು. ಅ.21 ರಿಂದ ಪುನರ್ ಆರಂಭಗೊಂಡ ಶಾಲಾ ತರಗತಿಗಳು ಏ.11 ರವರೆಗೆ ನಡೆಯಬೇಕಿತ್ತು. ಕೋವಿಡ್ ದಿಂದಾಗಿ ಏಪ್ರಿಲ್ ಮತ್ತು ಮಾರ್ಚ್ ತಿಂಗಳ ತರಗತಿ ಸರಿಯಾಗಿ ನಡೆದಿಲ್ಲ.
ಏ.12ರಿಂದ ಆರಂಭವಾಗಬೇಕಿದ್ದ ಬೇಸಿಗೆ ರಜೆ ಕೋವಿಡ್ ಹೊಡೆತಕ್ಕೆ ಮಾರ್ಚ್ ಕೊನೇ ವಾರದಿಂದಲೇ ಘೋಷಣೆ ಯಾಗಿತ್ತು. 2019-20ನೇ ಸಾಲಿನಲ್ಲಿ ಶೈಕ್ಷಣಿಕ ತರಗತಿಗಳು ಪೂರ್ಣ ಪ್ರಮಾಣದಲ್ಲಿ ನಡೆದಿದೆ. ಪರೀಕ್ಷೆ ಮಾತ್ರ ನಡೆಸಲು ಸಾಧ್ಯವಾಗಿರಲಿಲ್ಲ. 2020-21ನೇ ಸಾಲಿನಲ್ಲಿ ಶೈಕ್ಷಣಿಕ ತರಗತಿಯೇ ವಿಳಂಬವಾಗುವುದರಿಂದ ಪರ್ಯಾಯ ಮಾರ್ಗಸೂಚಿಯನ್ನು ಇಲಾಖೆ ಸಿದ್ಧಪಡಿಸುತ್ತಿದೆ.
ಪ್ರತಿ ವರ್ಷ ಶೈಕ್ಷಣಿಕ ವರ್ಷದ ಆರಂಭದಲ್ಲಿ ಮೊದಲ ಅವಧಿ, ದಸರಾ ರಜೆ(ಮಧ್ಯಂತರ ರಜೆ), 2ನೇ ಅವಧಿ ಹಾಗೂ ಬೇಸಿಗೆ ರಜೆ, ವಿವೇಚನಾ ರಜೆ ಸಹಿತವಾಗಿ ಪಟ್ಟಿ ಸಿದ್ಧವಾಗುತ್ತಿತ್ತು. ಆದರೆ, 2020-21ನೇ ಸಾಲಿನ ಮಾರ್ಗಸೂಚಿಯಲ್ಲಿ ಸ್ವಲ್ಪ ಮಾರ್ಪಾಡು ಮಾಡುವ ಸಂಬಂಧ ರಾಜ್ಯ ಸಂಶೋಧನೆ ಮತ್ತು ತರಬೇತಿ ಇಲಾಖೆ ಈಗಾಗಲೇ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ತಜ್ಞರ ಸಮಿತಿ ರಚನೆ ಮಾಡಿದೆ ಹಾಗೂ ಹೊಸ ಮಾರ್ಗಸೂಚಿ ಸಿದ್ಧಪಡಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪ್ರತಿ ವರ್ಷ 12 ತಿಂಗಳಲ್ಲಿ 318 ಶೈಕ್ಷಣಿಕ ದಿನ ಲಭ್ಯವಾಗುತ್ತಿದ್ದು, ಅದರಲ್ಲಿ 65 ರಜೆ ದಿನಗಳಿದ್ದವು. ಜತೆಗೆ 4 ವಿವೇಚನಾ ರಜಾ ದಿನ ( ಸ್ಥಳೀಯ ಆಚರಣೆ ಅಥವಾ ಜಯಂತಿಗೆ ಸಂಬಂಧಿಸಿದ್ದು) ಸಿಗುತ್ತಿದ್ದವು. ರಜಾ ದಿನಗಳನ್ನು ಕಳೆದು 250 ದಿನ ಶೈಕ್ಷಣಿಕ ತರಗತಿ ನಡೆಯುತ್ತಿದ್ದವು. ಈ ವರ್ಷ ಈಗಾಗಲೇ ಜೂನ್ ಕಳೆದು ಹೋಗಿದೆ, ಜುಲೈ-ಆಗಸ್ಟ್ನಲ್ಲಿ ಶಾಲೆ ಆರಂಭಿಸಬಹುದಾದ ಪರಿಸ್ಥಿತಿಯಿಲ್ಲ. ಹೀಗಾಗಿ ಸೆಪ್ಟೆಂಬರ್ ನಂತರ(ಪ್ರಾಥಮಿಕ, ಪೂರ್ವ ಪ್ರಾಥಮಿಕ ಹೊರತು ಪಡಿಸಿ) ಶಾಲೆ ಆರಂಭವಾದರೂ, ಅಕ್ಟೋಬರ್ನಲ್ಲಿ ದಸರಾ ರಜೆ ಇರುವುದಿಲ್ಲ ಅಥವಾ 4-5 ದಿನಕ್ಕೆ ಸೀಮಿತಗೊಳಿಸುವ ಸಾಧ್ಯತೆಯಿದೆ. ಅಲ್ಲದೆ, ಶನಿವಾರದಂದು ಪೂರ್ತಿ ತರಗತಿ ನಡೆಸಿ, ಭಾನುವಾರ ಅರ್ಧದಿನ ರಜೆ ನೀಡುವ ಅಥವಾ ಎರಡು ಭಾನುವಾರಕ್ಕೊಮ್ಮೆ ರಜಾ ನೀಡುವ ಅಥವಾ ಸರ್ಕಾರಿ ರಜೆಗಳ ಪ್ರಮಾಣ ಕಡಿಮೆಗೊಳಿಸುವ ಬಗ್ಗೆಯೂ ಸಮಿತಿ ಚಿಂತನೆ ನಡೆಸುತ್ತಿದ್ದು, ಅತಿ ಶೀಘ್ರದಲ್ಲಿ ವರದಿಯನ್ನು ಇಲಾಖೆಗೆ ಒಪ್ಪಿಸಲಿದೆ. ಸರ್ಕಾರದ ಅನುಮತಿ ನಂತರ ಅನುಷ್ಠಾನಕ್ಕೆ ಬರಲಿದೆ ಎಂದು ಶಿಕ್ಷಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
2020-21ನೇ ಸಾಲಿನ ಶೈಕ್ಷಣಿಕ ದಿನ ಮತ್ತು ರಜಾ ದಿನಗಳ ಬಗ್ಗೆ ರಾಜ್ಯ ಸಂಶೋಧನೆ ಮತ್ತು ತರಬೇತಿ ಇಲಾಖೆಯಿಂದ ವರದಿ ಸಿದ್ಧವಾಗುತ್ತಿದೆ. ಯಾವ ರಜೆ ಕಡಿತಗೊಳಿಸಬೇಕು, ತರಗತಿಗಳನ್ನು ಹೇಗೆ ನಡೆಸಬೇಕು ಎಂಬುದನ್ನು ಸಮಿತಿಯೇ ನಿರ್ಧರಿಸಲಿದೆ.
– ಉಮಾಶಂಕರ್, ಪ್ರಧಾನ ಕಾರ್ಯದರ್ಶಿ, ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Belagavi: ಖಾನಾಪುರ ಪೊಲೀಸ್ ಠಾಣೆ ಸಿಪಿಐ ಅಮಾನತಿಗೆ ಸ್ಪಷ್ಟನೆ ಕೊಟ್ಟ ಸಿಎಂ
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Boxing Day Test: ನೀಗಲಿ ಭಾರತದ ಬ್ಯಾಟಿಂಗ್ ಬರ; ಇಂದಿನಿಂದ ವರ್ಷಾಂತ್ಯದ ಭಾರತಸ್ಟ್
Covid: ಎನ್-95 ಮಾಸ್ಕ್ ಅವ್ಯವಹಾರ: ಆತುರದ ಕ್ರಮ ಕೈಗೊಳ್ಳದಂತೆ ಸೂಚನೆ
Udupi: ಗೀತಾರ್ಥ ಚಿಂತನೆ 136: ರಕ್ತ ಸುರಿದರೆ ದುಃಖ ಏತಕ್ಕಾಗಿ? ರಕ್ತ ಸುರಿದದ್ದಕ್ಕಲ್ಲ
Koteshwar: ಬೀಜಾಡಿಯ ಯೋಧ ಅನೂಪ್ ಪೂಜಾರಿ ಮೃತ್ಯು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.