ಕಪಿಲ್ ಪಡೆಯ ಏಕದಿನ ವಿಶ್ವಕಪ್ ವಿಜಯ ದಿವಸ
ಭಾರತದ ಚೊಚ್ಚಲ ವಿಶ್ವಕಪ್ ಜಯಭೇರಿಗೆ ಇಂದು 37ರ ಸಂಭ್ರಮ
Team Udayavani, Jun 25, 2020, 7:02 AM IST
ಹೊಸದಿಲ್ಲಿ: ‘ನಮ್ಮ 1983ರ ವಿಶ್ವಕಪ್ ಗೆಲುವು ಮೊದಲ ಪ್ರೀತಿಯಂತೆ, ಯಾವತ್ತೂ ಮರೆಯಲಾಗದ್ದು…’ ಎಂದು ಬಣ್ಣಿಸಿದವರು ಅಂದಿನ ಕಪಿಲ್ ಪಡೆಯ ಓರ್ವ ಸದಸ್ಯ ಸಯ್ಯದ್ ಕಿರ್ಮಾನಿ. ಖಂಡಿತ, ಇದು ಮೊಗೆದಷ್ಟೂ ಖುಷಿಯನ್ನು ಕೊಡುತ್ತಲೇ ಇರುತ್ತದೆ!
1983ರ ಜೂ. 25ರಂದು ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್, ಭಯಾನಕ ವೆಸ್ಟ್ ಇಂಡೀಸನ್ನು ಫೈನಲ್‌ನಲ್ಲಿ 43 ರನ್ನುಗಳಿಂದ ಉರುಳಿಸಿದ ‘ಕಪಿಲ್ ಡೆವಿಲ್ಸ್’ ಹೊಸ ಇತಿಹಾಸ ಬರೆದ ಅದ್ಭುತ ಕ್ಷಣವದು.
ಭಾರತೀಯ ಕ್ರಿಕೆಟಿನ ದಿಕ್ಕನ್ನೇ ಬದಲಿಸಿದ ಈ ಮಹಾ ವಿಜಯಕ್ಕೆ ಗುರುವಾರ 37ನೇ ವರ್ಷದ ಸಂಭ್ರಮ.
ಸಹಜವಾಗಿಯೇ ಕಪಿಲ್ ತನ್ನ ತಂಡದ ಸಾಧನೆಯನ್ನು ಮೆಲುಕು ಹಾಕಿದ್ದಾರೆ. ‘ಸಾಧನೆಯ ಹಾದಿ ಯಾವತ್ತೂ ದುರ್ಗಮವಾಗಿರುತ್ತದೆ. ನಾವು ಈ ಎಲ್ಲ ಘಟ್ಟಗಳನ್ನು ದಾಟಿ ಮುನ್ನಡೆದು ಯಶಸ್ಸಿನ ಶಿಖರವನ್ನು ತಲುಪಿದೆವು. ನಮ್ಮ ಪಾಲಿಗೆ ಇದೊಂದು ಅನಿರೀಕ್ಷಿತ, ಆದರೆ ಅಷ್ಟೇ ರೋಮಾಂಚಕಾರಿ ಪಯಣವಾಗಿತ್ತು. ಉತ್ತಮ ಆಲ್‌ರೌಂಡರ್‌ಗಳ ಪಡೆ, ಅಮೋಘ ಮಟ್ಟದ ಫೀಲ್ಡಿಂಗ್, ಇದಕ್ಕೂ ಮಿಗಿಲಾಗಿ ನಮ್ಮ ಮೇಲೆ ಯಾವುದೇ ನಿರೀಕ್ಷೆ ಮತ್ತು ಒತ್ತಡ ಇಲ್ಲವಾದ್ದರಿಂದ ಇಂಥ ಅಸಾಮಾನ್ಯ ಸಾಧನೆಯೊಂದು ದಾಖಲಾಯಿತು ಎನ್ನುತ್ತಾರೆ ಕಪಿಲ್.
ನಾವು ಇದಕ್ಕೆ ಇನ್ನೊಂದು ಅಂಶವನ್ನು ಸೇರಿಸಬೇಕು, ಅದು ಕಪಿಲ್‌ದೇವ್ ಅವರ ಸ್ಫೂರ್ತಿಯುತ ನಾಯಕತ್ವ. ಇದನ್ನು ನೆನಪಿಸಿಕೊಂಡವರು ಅಂದಿನ ಟಾಪ್ ಸ್ಕೋರರ್ ಕೆ. ಶ್ರೀಕಾಂತ್. ‘183 ರನ್ ಸಣ್ಣ ಮೊತ್ತ. ನಾವು ಗೆಲ್ಲುತ್ತೇವೋ ಇಲ್ಲವೋ, ಆದರೆ ತೀವ್ರ ಪ್ರತಿರೋಧವನ್ನೊಡ್ಡಲೇಬೇಕು. ಅವರನ್ನು ಸುಲಭದಲ್ಲಿ ಗೆಲ್ಲಲು ಬಿಡಬಾರದು’ ಎಂದು ಕಪಿಲ್ ತಮ್ಮನ್ನು ಹುರಿದುಂಬಿಸಿದ್ದರು ಎಂದು ಶ್ರೀಕಾಂತ್ ಹೇಳಿದರು.
ವಿಂಡೀಸಿಗೆ ಮೊದಲ ಸೋಲು
ಭಾರತ ಲೀಗ್ ಹಂತದ ಮೊದಲ ಪಂದ್ಯದಲ್ಲೇ ವೆಸ್ಟ್ ಇಂಡೀಸನ್ನು 34 ರನ್ನುಗಳಿಂದ ಉರುಳಿಸಿದಾಗಲೇ ಕಪಿಲ್ ಪಡೆ ಅಸಾಮಾನ್ಯ ಸಾಹಸವೊಂದಕ್ಕೆ ಮುನ್ನುಡಿ ಬರೆದಿತ್ತು. ಅದು ವಿಂಡೀಸಿಗೆ ವಿಶ್ವಕಪ್‌ನಲ್ಲಿ ಎದುರಾದ ಪ್ರಪ್ರಥಮ ಸೋಲಾಗಿತ್ತು.
ಹಿಂದಿನ ದಿನವೇ ಬೋನಸ್!
ಭಾರತ ಆತಿಥೇಯ ಇಂಗ್ಲೆಂಡನ್ನು ಮಣಿಸಿ ಫೈನಲ್ ಪ್ರವೇಶಿಸಿದಾಗ ಜಾಗತಿಕ ಕ್ರಿಕೆಟ್‌ನಲ್ಲಿ ಭಾರೀ ಸಂಚಲನ ಮೂಡಿತ್ತು. ಬಿಸಿಸಿಐ ಅಧಿಕಾರಿಗಳೆಲ್ಲ ಜೂ. 24ರ ಸಂಜೆ ಸಭೆ ಸೇರಿ, ತಂಡದ ಸದಸ್ಯರಿಗೆಲ್ಲ 25 ಸಾವಿರ ರೂ. ಬೋನಸ್ ಪ್ರಕಟಿಸಿದ್ದರು!
‘ನೀವು ಇಲ್ಲಿಯ ತನಕ ಬಂದದ್ದೇ ಅಮೋಘ ಸಾಹಸ. ನಾಳೆ ನೀವು ಗೆಲ್ಲುತ್ತೀರೋ, ಇಲ್ಲವೋ ಗೊತ್ತಿಲ್ಲ. ಹೀಗಾಗಿ ನಿಮಗೆ ಇಂದೇ ಈ ಬೋನಸ್ ಘೋಷಿಸುತ್ತಿದ್ದೇವೆ’ ಎಂದು ಬಿಸಿಸಿಐ ಹೇಳಿದ್ದನ್ನು ಶ್ರೀಕಾಂತ್ ಮೆಲುಕು ಹಾಕಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
World Test Championship: ಪರ್ತ್ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಭಾರೀ ಬದಲಾವಣೆ
IPL Auction 2025: ಯಾರು, ಯಾವ ತಂಡಕ್ಕೆ, ಎಷ್ಟು ಕೋಟಿಗೆ?.. ಇಲ್ಲಿದೆ ಇದುವರೆಗಿನ ಲಿಸ್ಟ್
IPL Auction: ಕೇನ್, ಮಯಾಂಕ್, ಶಾಗಿಲ್ಲ ಬೇಡಿಕೆ; ಉತ್ತಮ ಹಣ ಪಡೆದ ದ. ಆಫ್ರಿಕಾ ವೇಗಿ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.