ಪೊಲೀಸ್ ಹುದ್ದೆ ಆಕಾಂಕ್ಷಿಗಳಿಗೆ ಶುಭ ಸುದ್ದಿ ; ವಯೋಮಿತಿ ಸಡಿಲಿಕೆಗೆ ಗೃಹ ಸಚಿವರ ಒಲವು?
Team Udayavani, Jun 25, 2020, 6:25 AM IST
ಗೃಹ ಸಚಿವ ಬಸವರಾಜ್ ಬೊಮ್ಮಾಯಿ.
ಬೆಂಗಳೂರು: ಜೀವನದಲ್ಲಿ ಖಾಕಿ ತೊಟ್ಟು ಪೊಲೀಸ್ ನೌಕರಿ ಮಾಡಬಯಸಿರುವ ಸಾವಿರಾರು ಯುವಕ, ಯುವತಿಯರ ಕನಸು ನನಸು ಮಾಡಲು ಸರಕಾರ ಮುಂದಾಗಿದೆ.
ಕೋವಿಡ್ 19 ಲಾಕ್‌ಡೌನ್ ಹಿನ್ನೆಲೆಯಲ್ಲಿ ಅರ್ಜಿ ಸಲ್ಲಿಕೆ ಸಮಯ ವಿಸ್ತರಣೆ ಮಾಡಿದ್ದರಿಂದ ವಯೋಮಿತಿ ಹೆಚ್ಚಾಗಿ ಸಾವಿರಾರು ಆಕಾಂಕ್ಷಿಗಳು ಅವಕಾಶ ವಂಚಿತರಾಗುತ್ತಿದ್ದರು.
ಆದರೆ ಈಗ ವಯೋಮಿತಿ ಸಡಿಲಿಕೆ ಮಾಡಬೇಕೆಂಬ ಆಕಾಂಕ್ಷಿಗಳ ಆಗ್ರಹಕ್ಕೆ ಗೃಹ ಇಲಾಖೆ ಸಮ್ಮತಿ ಸೂಚಿಸುವ ಸಾಧ್ಯತೆ ಇದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಿರಿಯ ಅಧಿಕಾರಿಗಳ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆನ್ನಲಾಗಿದ್ದು, ಮಾ. 31ರಿಂದಲೇ ವಯೋಮಿತಿಗೆ ಅರ್ಹತೆ ನೀಡುವ ಬಗ್ಗೆ ಚಿಂತನೆ ನಡೆಸಿದ್ದಾರೆಂದು ತಿಳಿದು ಬಂದಿದೆ.
ಆಗಿದ್ದೇನು?
ಪೊಲೀಸ್ ಇಲಾಖೆಯಲ್ಲಿ ಕಲ್ಯಾಣ ಕರ್ನಾಟಕ ಪೊಲೀಸ್ ಕಾನ್‌ಸ್ಟೆಬಲ್ ಸಿವಿಲ್ 558, ಸಶಸ್ತ್ರ ಕಾನ್‌ಸ್ಟೆಬಲ್ 444, ಪೊಲೀಸ್ ಕಾನ್‌ಸ್ಟೆಬಲ್ 2,007, ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ 1,005, ಕೆಎಸ್‌ಆರ್‌ಪಿಗೆ 2,420 ಹಾಗೂ ಕೆಎಸ್‌ಆರ್‌ಪಿ ಬ್ಯಾಂಡ್‌ಮನ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ರಾಜ್ಯ ಸರಕಾರ ಮಾರ್ಚ್ ಅಂತ್ಯದ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು.
ಆದರೆ ಲಾಕ್‌ಡೌನ್‌ನಿಂ ದಾಗಿ ಅರ್ಜಿ ಸಲ್ಲಿಸುವ ದಿನಾಂಕವನ್ನು ಮುಂದೂಡಿತ್ತು. ಆದರೆ ವಯೋಮಿತಿಯಲ್ಲಿ ಬದಲಾವಣೆ ಮಾಡಿರಲಿಲ್ಲ. ಇದರಿಂದಾಗಿ ಮಾರ್ಚ್ ಕೊನೆಗೆ 27 ವರ್ಷ ಭರ್ತಿಯಾದವರು ಅವಕಾಶ ವಂಚಿತರಾಗಿದ್ದರು. ಅಲ್ಲದೆ ಅರ್ಜಿ ಸಲ್ಲಿಸುವಾಗಲೆ ವಯೋಮಿತಿಗೆ ಸಂಬಂಧಿಸಿದ ದಾಖಲೆಯನ್ನು ಆನ್ ಲೈನ್‌ನಲ್ಲಿ ಅಪ್‌ಲೋಡ್ ಮಾಡಬೇಕಿರುವುದರಿಂದ ಅವರ ವಯೋಮಿತಿ ಮೀರಿದೆ ಎಂದು ಆನ್ ಲೈನ್‌ನಲ್ಲಿ ಅರ್ಜಿಯನ್ನೇ ಸ್ವೀಕರಿಸದಿರುವುದರಿಂದ ಪೊಲೀಸ್ ನೌಕರಿಯ ಕನಸು ಕಂಡ ಯುವಕ, ಯುವತಿಯರು ಅಸಹಾಯಕರಾಗಿದ್ದರು.
ಲಾಕ್‌ಡೌನ್ ಪರಿಣಾಮ ಪೊಲೀಸ್ ನೇಮಕಾತಿ ಅರ್ಜಿ ಸಲ್ಲಿಕೆ ಅವಧಿ ವಿಸ್ತರಿಸಿದರೂ ವಯೋಮಿತಿ ಹೆಚ್ಚಳವಾಗದಿರುವ ಕುರಿತು ಹಿರಿಯ ಅಧಿಕಾರಿಗಳ ಜತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ವಯೋಮಿತಿ ಸಡಿಲಿಸಿ ಮಾ. 31ರಿಂದಲೇ ಅರ್ಹತೆ ಪರಿಗಣಿಸುವ ಬಗ್ಗೆ ಚಿಂತನೆ ಇದೆ.
ರಾಜ್ಯ ಸರಕಾರ ಪಿಎಸ್‌ಐ ಹುದ್ದೆಗೆ ಅರ್ಜಿ ಸಲ್ಲಿಸಲು ಎರಡು ವರ್ಷ ವಿನಾಯಿತಿ ನೀಡಿದೆ. ಕೋವಿಡ್ 19 ಸಂದರ್ಭ ಸಂಕಷ್ಟಕ್ಕೆ ಸಿಲುಕಿರುವ ಎಲ್ಲರಿಗೂ ಸರಕಾ ರಗಳು ವಿನಾಯಿತಿ ನೀಡುತ್ತಿವೆ. ಅದೇ ಮಾನದಂಡ ಪರಿಗಣಿಸಿ ಕಾನ್‌ಸ್ಟೆಬಲ್ ಹುದ್ದೆಗೆ ಲಾಕ್‌ಡೌನ್ ಸಮಯದ ಅವಧಿಯನ್ನು ವಯೋಮಿತಿ ಸಡಿಲಿಕೆ ಮಾಡಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲು ಸರಕಾರ ಮುಂದಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mandya: ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 46 ಮಂದಿ ಸಾಧಕರಿಗೆ ಸಮ್ಮಾನ
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.