ಎಸ್ಸೆಸ್ಸೆಲ್ಸಿ ಮಕ್ಕಳಿಗೆ ತಜ್ಞರ ಸಲಹೆ
Team Udayavani, Jun 25, 2020, 5:26 AM IST
ಬೆಂಗಳೂರು: ಕೋವಿಡ್ 19 ಸಂದಿಗ್ಧ ಪರಿಸ್ಥಿತಿಯಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು 8.42 ಲಕ್ಷ ವಿದ್ಯಾರ್ಥಿಗಳು ಸಿದ್ಧರಾಗಿದ್ದು, ಪಾಲಕ, ಪೋಷಕ ಮತ್ತು ಪರೀಕ್ಷಾರ್ಥಿಗಳಿಗೆ ತಜ್ಞರು ನೀಡಿರುವ ಕೆಲವು ಸಲಹೆಗಳು ಇಲ್ಲಿವೆ.
* ಮಾಸ್ಕ್ ಧರಿಸುವುದು, ಸ್ಯಾನಿಟೈಜೇಷನ್, ಸಾಮಾಜಿಕ ಅಂತರ 8.42 ಲಕ್ಷ ವಿದ್ಯಾರ್ಥಿಗಳಿಗೆ ಅನ್ವಯಿಸಿದ್ದು ಮತ್ತು ಇದರ ಬಗ್ಗೆ ವಿದ್ಯಾರ್ಥಿಗಳು ಭಯ, ಆತಂಕಪಡದೆ, ನಿರ್ಭೀತಿಯಿಂದ ಪರೀಕ್ಷೆ ಬರೆಯಬೇಕು.
* ರ್‍ಯಾಂಕ್ ಬದಲು ಚೆನ್ನಾಗಿ ಬರೆದು ಪಾಸಾಗುತ್ತೇನೆ ಎಂಬ ವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಎಸ್ಸೆಸ್ಸೆಲ್ಸಿ ಪಾಸಾದರೆ ಪಿಯುಸಿ ಸೇರಿ ನಂತರ ಎಂಬಿಬಿಎಸ್ ಸೀಟು ಪಡೆಯಲು ಸಾಧ್ಯ. ಪಿಯುಸಿಗೆ ರ್‍ಯಾಂಕ್ ಬಗ್ಗೆ ಯೋಚಿಸಿ.
* ವಿದ್ಯಾರ್ಥಿಗಳ ಸುರಕ್ಷತೆ ಮತ್ತು ಇಂದಿನ ಪರಿಸ್ಥಿತಿಯ ಅರಿವು ಶಿಕ್ಷಣ ಇಲಾಖೆಗೆ ಚೆನ್ನಾಗಿ ತಿಳಿದಿದೆ ಹೀಗಾಗಿ ಪರೀಕ್ಷೆ ಬರೆಯುವವರಿಗೆ ಇದರ ಚಿಂತೆ ಬೇಡ. * ಪರೀಕ್ಷಾ ಕೇಂದ್ರಕ್ಕೆ ಮಕ್ಕಳನ್ನು ಬಿಟ್ಟು, ಪರೀಕ್ಷಾ ನಂತರ ವಾಪಸ್ ಕರೆದುಕೊಂಡು ಬರುವ ಕೆಲಸ ಪಾಲಕರು ಮಾಡಿದರೆ ಸಾಕು.
* ನಿತ್ಯ ಬೆಳಗ್ಗೆ ಮನೆಯಲ್ಲೇ ಚೆನ್ನಾಗಿ ತಿಂಡಿ ತಿಂದು, ಬಾಟಲಿಯಲ್ಲಿ ನೀರು ತುಂಬಿಸಿಕೊಂಡು ಪರೀಕ್ಷಾ ಕೇಂದ್ರಕ್ಕೆ ಹೋಗಿ, ಹೊರಗಡೆ ತಿಂಡಿ ತಿನ್ನದಿರಿ.
*ಪರೀಕ್ಷೆ ಕೊಠಡಿ ಅಥವಾ ಪರೀಕ್ಷೆ ಮುಗಿದು ಮನೆ ಸೇರುವವರೆಗೂ ಬಾಯಿ, ಮೂಗು ಇತ್ಯಾದಿ ಮುಟ್ಟಿಕೊಳ್ಳದಂತೆ ಎಚ್ಚರವಹಿಸಿ.
-ಡಾ.ಬಿ.ಎನ್.ಗಂಗಾಧರ್, ನಿರ್ದೇಶಕ ನಿಮ್ಹಾನ್ಸ್
***
* ವಿದ್ಯಾರ್ಥಿಗಳು ಅಥವಾ ಪಾಲಕ, ಪೋಷಕರಿಗೆ ಪರೀಕ್ಷಾ ಕೇಂದ್ರದ ಭದ್ರತೆ, ಸುರಕ್ಷತೆಯ ಬಗ್ಗೆ ಚಿಂತೆ ಬೇಡ. ಅದನ್ನು ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ, ಆಯಾ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಮಾಡುತ್ತದೆ. ದ್ಯಾರ್ಥಿಗಳು ನಿರಾತಂಕವಾಗಿ ಪರೀಕ್ಷೆ ಬರೆಯಲು ಎಲ್ಲ ವ್ಯವಸ್ಥೆಯಾಗಿದೆ.
* ಪರೀಕ್ಷಾ ಕೇಂದ್ರದಲ್ಲೇ ಮಾಸ್ಕ್, ಸ್ಯಾನಿಟೈಜೇಷನ್ ಮತ್ತು ಸಾಮಾಜಿಕ ಅಂತರದ ಸಂಪೂರ್ಣ ವ್ಯವಸ್ಥೆಯಾಗಿದೆ. ಹೀಗಾಗಿ ಈ ಬಗ್ಗೆ ಯಾವುದೇ ಆತಂಕ ಬೇಡ * ಪರೀಕ್ಷಾ ಕೇಂದ್ರದೊಳಗೆ ನಿಮಗಾಗಿ ವ್ಯವಸ್ಥೆ ಮಾಡಿರುವ ಸ್ಥಳದಲ್ಲಿ ಬೇರೆ ಯಾವುದೇ ಆಲೋಚನೆಗಳು ಇಲ್ಲದೇ ಪ್ರಶ್ನೆ ಪತ್ರಿಕೆಗಳನ್ನು ಚೆನ್ನಾಗಿ ಓದಿ, ಅರ್ಥಮಾಡಿಕೊಂಡು ಬರೆಯುವುದೇ ನಿಮ್ಮ ಗುರಿಯಾಗಲಿ.
* ಬೇರೆ ಬೇರೆ ಆಲೋಚನೆಗಳನ್ನು ಮಾಡಿ ಓದಿರುವ ಅಂಶಗಳನ್ನು ಮರೆತು ಬಿಡಬೇಡಿ, ಪ್ರಶ್ನೆ ಮತ್ತು ಉತ್ತರದ ಬಗ್ಗೆಯೇ ಗಮನ ಇರಲಿ.
-ವಿ.ಸುಮಂಗಳಾ, ನಿರ್ದೇಶಕಿ, ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ
***
* ಪ್ರತಿ ವಿದ್ಯಾರ್ಥಿಯು ಗೆಲ್ಲುತ್ತೇನೆ ಎಂಬ ಸ್ವಯಂ ನಿರ್ಧಾರ ಮಾಡಬೇಕು. ಶಾಲಾ ಜೀವನದ ಸಕಾರಾತ್ಮಕ ಅಂಶಗಳನ್ನು ನೆನಪಿಗೆ ತಂದುಕೊಳ್ಳಿ, ಪರೀಕ್ಷೆ ಗೆಲ್ಲುತ್ತೇನೆ ಎಂಬ ಧೈರ್ಯ ಮೊದಲು ನಿಮ್ಮಲ್ಲಿ ಹುಟ್ಟಿಸಿಕೊಳ್ಳಿ
* ಇದೇ ಪರೀಕ್ಷೆ ಅಂತಿಮವಲ್ಲ, ಪೂರಕ ಪರೀಕ್ಷೆಯಿದೆ. ಸಮಚಿತ್ತ ಭಾವದಿಂದ ಪರೀಕ್ಷೆ ಎದುರಿಸುವ ನಿಲುವು ನಿಮ್ಮದಾಗಿರಲಿ.
* ಪರೀಕ್ಷಾ ಕೇಂದ್ರ ಮತ್ತು ಕೊಠಡಿ ಹೇಗಿರಲಿದೆ ಎಂಬುದನ್ನು ನಿಮ್ಮಲ್ಲೇ ಮನನ ಮಾಡಿಕೊಳ್ಳಿ, ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಇತ್ಯಾದಿಗಳ ಬಗ್ಗೆ ನಿಮ್ಮಲ್ಲೇ ಕಲ್ಪನೆ ಇರಲಿ. ಇದ್ಯಾವುದರ ಬಗ್ಗೆಯೂ ಭಯ ಮತ್ತು ಪರೀಕ್ಷಾ ಕೇಂದ್ರದಲ್ಲಿ ಅತಿಯಾದ ಚಿಂತನೆ ಬೇಡವೇ ಬೇಡ!
-ನಾಗಸಿಂಹ ಜಿ.ರಾವ್, ನಿರ್ದೇಶಕ ಚೈಲ್ಡ್ ರೈಟ್ ಟ್ರಸ್ಟ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Sambhal Mosque Survey: ಜಾಮಾ ಮಸೀದಿಯ ಸಮೀಕ್ಷೆಗೆ ತಡೆ ನೀಡಿದ ಸುಪ್ರೀಂಕೋರ್ಟ್
Gadget Review: iPhone 16: ಆಕರ್ಷಕ ವಿನ್ಯಾಸ, ಉತ್ತಮ ಕ್ಯಾಮರಾ, ವೇಗದ ಕಾರ್ಯಾಚರಣೆ
Sandalwood ಈ ವರ್ಷ 220+ ಸಿನಿಮಾ ತೆರೆಗೆ; ರಿಲೀಸ್ ಭರಾಟೆ ಬಲು ಜೋರು
Jammu Kashmir: ದೊಡ್ಡ ಯೋಜನೆ ವಿಫಲ; ಉಗ್ರರ ಅಡಗುತಾಣವನ್ನು ಧ್ವಂಸ ಮಾಡಿದ ಸೇನೆ
Shahapur: ಕಾರು-ಬೈಕ್ ಮುಖಾಮುಖಿ ಡಿಕ್ಕಿ- ಇಬ್ಬರ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.